18 May 2024

ಸರ್ಕಾರದ 5ನೇ ಗ್ಯಾರಂಟಿ ಯುವ ನಿಧಿಗೆ ಅರ್ಜಿ ಸಲ್ಲಿಕೆ ಪ್ರಾರಂಭ…! ಪದವೀಧರ ವಿದ್ಯಾರ್ಥಿಗಳಿಗೆ 3000 ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1500 ನೀಡಲಿದ್ದು ಈಗಲೇ ಅರ್ಜಿ ಸಲ್ಲಿಸಿ…!

ಎಲ್ಲರಿಗೂ ನಮಸ್ಕಾರ ಬಂಧುಗಳೇ. ನಮ್ಮ ಜಾಲತಾಣದಲ್ಲಿ ನಾವು ಪ್ರತಿಯೊಬ್ಬ ನಾಗರಿಕರಿಗೂ ಸಹಾಯವಾಗುವಂತಹ ಎಲ್ಲಾ ವಿಷಯದ ಮೇಲೆ ಮಾಹಿತಿಯನ್ನು ನೀಡುತ್ತಿದ್ದು, ಪ್ರತಿಯೊಬ್ಬರಿಗೂ ಸಹಾಯವಾಗುವಂತಹ ಲೇಖನಗಳಿದ್ದು,  ಈ ಲೇಖನವನ್ನು ಕೊನೆಯವರೆಗೂ ಓದಿ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಶೇರ್ ಮಾಡಿ.

ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಸಂಪೂರ್ಣ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಸಲದ ಎಲೆಕ್ಷನ್ ನಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಯೋಜನೆಗಳನ್ನು ಕೊಡುವುದಾಗಿ ಪ್ರಚಾರಣೆಯಲ್ಲಿ ಹೇಳಿಕೊಂಡಿತ್ತು.

ಕೊಟ್ಟ ಮಾತಿಗೆ ತಕ್ಕಂತೆ ಕಾಂಗ್ರೆಸ್ ಪಕ್ಷವು ಎಲ್ಲ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಯಶಸ್ವಿಯಾಗಿದೆ. ಇಲ್ಲಿಯವರೆಗೆ ಪ್ರತಿಯೊಬ್ಬರು ನಾಲ್ಕು ಯೋಜನೆಗಳನ್ನು ಪಡೆಯುತ್ತಿದ್ದಾರೆ. ಆದರೆ ಇನ್ನೂ ಒಂದು ಯೋಜನೆ ಬಾಕಿ ಇತ್ತು ಅದೇ ಎಂದರೆ ” ಯುವ ನಿಧಿ ”  ಯೋಜನೆ .

ಈ ಯೋಜನೆಯಡಿಯಲ್ಲಿ ಶಿಕ್ಷಣ ಮುಗಿಸಿ ಉದ್ಯೋಗ ದೊರೆಯದೆ ಇರುವಂತಹ ಅಭ್ಯರ್ಥಿಗಳಿಗೆ ಸಹಾಯಧನ ನೀಡುವಂತಹ ಈ ಯೋಜನೆ ಇದಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆಯು ಆರಂಭವಾಗಿದೆ. ಇನ್ನೇನು ಕೆಲವು ದಿನಗಳಲ್ಲಿ ಅರ್ಹ ಖಾತೆಗೆ ಜಮಾ ಆಗಲಿದೆ. ಈ ಲೇಖನದಲ್ಲಿ ನಾವು ಮೊದಲಿಗೆ ಯುವನಿಧಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನಂತರ ಉಳಿದ ನಾಲ್ಕು ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೊದಲಿಗೆ ಯುವನಿಧಿ ಯೋಜನೆಯ ಬಗ್ಗೆ ವಿವರವಾದ ಮಾಹಿತಿ:

1. ಯುವನಿಧಿ ಯೋಜನೆ :

( Yuvanidhi yojane ) – ಈ ಒಂದು ಯೋಜನೆಯು ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿದ್ದು, ನಿರುದ್ಯೋಗಿ ಯುವಕ ಯುವತಿಯರಿಗೆ ಒಂದು ಆರ್ಥಿಕ ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಅವರ ಶಿಕ್ಷಣ ಆಧಾರದ ಮೇಲೆ ಮಾಸಿಕವಾಗಿ ಹಣವನ್ನು ನೀಡುವ ಯೋಜನೆ ಇದಾಗಿದೆ.

ಈ ಯೋಜನೆಯ ಅಡಿಯಲ್ಲಿ 2023ನೇ ಶೈಕ್ಷಣಿಕ ಸಾಲಿನ ವರ್ಷದಲ್ಲಿ ಪದವಿ ಮತ್ತು ಡಿಪ್ಲೋಮಾ ಮುಗಿಸಿ ಯಾವುದೇ ಉದ್ಯೋಗ ಸಿಗದಂತಹ ಯುವಕ ಯುವತಿಯರಿಗೆ ಆರ್ಥಿಕ ಸಹಾಯವನ್ನು ನೀಡುವುದಾಗಿದೆ. ಈ ಯೋಜನೆ ಅಡಿಯಲ್ಲಿ 2023ರಲ್ಲಿ ಡಿಪ್ಲೋಮಾ ಮುಗಿಸಿ ಆರು ತಿಂಗಳಾದರೂ ಯಾವುದೇ ಉದ್ಯೋಗ ಸಿಗದಂತಹ ಅಭ್ಯರ್ಥಿಗಳಿಗೆ ಮಾಸಿಕವಾಗಿ 1500 ರೂಪಾಯಿಗಳನ್ನು ನೀಡುವುದಾಗಿದೆ. ಡಿಪ್ಲೋಮಾ ಪದವಿ ಎಂದರೆ ಅದರಲ್ಲೇ ಅನೇಕ ವಿಷಯಗಳಲ್ಲಿ ಅನೇಕ ಡಿಪ್ಲೋಮಾ ಕೋರ್ಸ್ ಗಳಿವೆ.

ಅದೇ ರೀತಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿ ಆರು ತಿಂಗಳಾದರೂ ಯಾವುದೇ ಹುದ್ದೆ ಅಥವಾ ಉದ್ಯೋಗ ಸಿಗದಂತಹ ಯುವಕ ಯುವತಿಯರಿಗೆ ಮಾಸಿಕವಾಗಿ 3,000 ರೂ. ಅನ್ನು ಎರಡು ವರ್ಷಗಳ ಅವಧಿಯವರೆಗೆ ನೀಡಲಾಗುವುದು.

ಈ  ಯೋಜನೆಯ ಮುಖ್ಯ ಉದ್ದೇಶವೇನೆಂದರೆ, ಶಿಕ್ಷಣ ಮುಗಿದ ನಂತರ ಯಾವುದೇ ಉದ್ಯೋಗ ಸಿಗದೆ ಅನೇಕ ವಿದ್ಯಾರ್ಥಿಗಳು ಮುಂದೆ ಶಿಕ್ಷಣ ಮುಂದುವರೆಸಲು ಸಾಧ್ಯವಾಗದೆ ಮನೆಯಲ್ಲೇ ಕುಳಿತಿರುತ್ತಾರೆ ಅಂತಹ ಯುವಕ ಯುವತಿಯರಿಗೆ ಈ ಒಂದು ಆರ್ಥಿಕ ಸಹಾಯವು  ತಮ್ಮ ಮುಂದಿನ ಶಿಕ್ಷಣಕ್ಕೆ ಅಥವಾ ಯಾವುದಾದರೂ ಸರ್ಕಾರಿ ನೌಕರಿ ಪಡೆಯಲು ಕೋಚಿಂಗ್ ಅಥವಾ ಇತರೆ ಯಾವುದಾದರೂ ಸಹಾಯಕ್ಕೆ ಅನುಕೂಲವಾಗುವಂತೆ ಈ ಯೋಜನೆಯನ್ನು ಜಾರಿಗೆಗೊಳಿಸಲಾಗಿದೆ.

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಈಗಾಗಲೇ ಆರಂಭವಾಗಿದ್ದು ಡಿಸೆಂಬರ್ 26ರಿಂದ ಸೇವಾ ಸಿಂಧು ಪೋರ್ಟಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ಜನವರಿ ತಿಂಗಳು 2024ರಲ್ಲಿ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾವಾಗಲು ಆರಂಭಿಸಲಾಗುತ್ತದೆ. ಈ ಒಂದು ಯೋಜನೆಯ ಹಣವನ್ನು ಎರಡು ವರ್ಷಗಳ ಅವಧಿಯವರೆಗೆ ಅಥವಾ ಫಲಾನುಭವಿಗಳಿಗೆ ಉದ್ಯೋಗ ಸಿಗುವವರೆಗೂ ಮಾತ್ರ ನೀಡಲಾಗುವುದು.

ಈ ಯೋಜನೆಯು ಶಿಕ್ಷಣ ಮುಗಿಸಿ ಮನೆಯಲ್ಲೇ ಕುಳಿತುಕೊಂಡು ಉದ್ಯೋಗ ಇಲ್ಲದೆ ಅಳಿಯುತ್ತಿರುವಂತಹ ಯುವ ಜನತೆಗೆ ಆರ್ಥಿಕ ಸಹಾಯ ನೀಡಿದರೆ ಬೇರೆ ಯಾವುದಾದರೂ ಒಂದು ಒಳ್ಳೆಯ ಮಾರ್ಗವನ್ನು ಹಿಡಿಯಲಿ ಎಂಬ ಉದ್ದೇಶದಿಂದ ಯೋಜನೆಯನ್ನು ಆರಂಭಗೊಳಿಸಿದೆ. ನಂತರದಲ್ಲಿ ಎರಡು ವರ್ಷಗಳ ಅವಧಿಯವರೆಗೆ ಒಂದು ವೇಳೆ ಉದ್ಯೋಗ ಸಿಕ್ಕರೆ ಅಭ್ಯರ್ಥಿಗಳ ಸ್ವಯಂಘೋಷಿತವಾಗಿ ನನಗೆ ಉದ್ಯೋಗ ಸಿಕ್ಕಿದೆ ಎಂದು ಮಾಹಿತಿ ಸಲ್ಲಿಸಿ ಈ ಯೋಜನೆ ಲಾಭವನ್ನು ಪಡೆದುಕೊಳ್ಳುವುದನ್ನು ನಿಲ್ಲಿಸಬೇಕು.

ಈ ಒಂದು ಯೋಜನೆಯ ಸಹಾಯದಿಂದ ಅನೇಕ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಒದಗಿಲಿದ್ದು, ಪ್ರತಿಯೊಬ್ಬರೂ ಇದರ ಉಪಯೋಗವನ್ನು ಅಥವಾ ಲಾಭವನ್ನು ಪಡೆದುಕೊಳ್ಳಬೇಕು. ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳ ಬಗ್ಗೆ ನೋಡುವುದಾದರೆ ಬಹು ಅವಶ್ಯಕ ದಾಖಲಾತಿ ಎಂದರೆ, ಸ್ವಯಂ ಘೋಷಿತ ನಿರುದ್ಯೋಗ ಪ್ರಮಾಣ ಪತ್ರ. ನಂತರದಲ್ಲಿ ಸಾಮಾನ್ಯ ದಾಖಲಾತಿಗಳಾದ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ಅಭ್ಯರ್ಥಿಯ ಬ್ಯಾಂಕ್ ಖಾತೆ ಪುಸ್ತಕ, ಭಾವಚಿತ್ರ, ಶಾಲಾ ಶಿಕ್ಷಣ ಪ್ರಮಾಣ ಪತ್ರವನ್ನು ಸಿದ್ಧಪಡಿಸಿಕೊಂಡು ಸೇವಾಸಿಂದು ಪೋರ್ಟನಲ್ಲಿ ನಿಮ್ಮ ಹತ್ತಿರವಿರುವ ಗ್ರಾಹಕರ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಈಗಾಗಲೇ ಅರ್ಜಿ ಸಲ್ಲಿಸಲು ಆರಂಭವಾಗಿದ್ದು ಜನವರಿ 12ಕ್ಕೆ ಸಿಎಂ ಸಿದ್ದರಾಮಯ್ಯನವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ದೊರಕಿದೆ. ಆದ್ದರಿಂದ ಅಭ್ಯರ್ಥಿಗಳು ನೀವು ಅರ್ಹ ರಿದ್ದರೆ ಈಗಲೇ ಅರ್ಜಿ ಸಲ್ಲಿಸಿ ಈ ಒಂದು ಉತ್ತಮವಾದ ಮತ್ತು ಲಾಭದಾಯಕ ಯೋಜನೆಗಳ ಲಾಭವನ್ನು ಪಡೆದುಕೊಂಡು ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ.

ಯುವ ನಿಧಿ ಯೋಜನೆಯ ಬಗ್ಗೆ ನಾವು ತಿಳಿದುಕೊಂಡ ನಂತರ ಈಗ ಸರ್ಕಾರದ ಪ್ರಸಿದ್ಧವಾದ ಒಂದು ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ.


2. ಗೃಹಲಕ್ಷ್ಮಿ ಯೋಜನೆ :


ಈ ಯೋಜನೆಯ ಸಹಾಯದಿಂದ ಮಹಿಳೆಯರಿಗೆ ಒಂದು ಆರ್ಥಿಕ ಸದೃಢತೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಿದ್ದು, ಈಗಾಗಲೇ ರಾಜ್ಯದ್ಯಂತ ಅನೇಕ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಈ ಗ್ರಹಲಕ್ಷ್ಮಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಬಿಪಿಎಲ್ ಕಾರ್ಡ್ ಹೊಂದಿದ ಯಜಮನಿಯರಿಗೆ ಮಾಸಿಕ 2000 ರೂಪಾಯಿಯ ಆರ್ಥಿಕ ಸಹಾಯವನ್ನು ನೀಡುವ ಯೋಜನೆ ಇದಾಗಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲನೆಯ ಸಚಿವ ಸಂಪುಟದಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ಗೃಹ ಎಂದರೆ ಮನೆ ಲಕ್ಷ್ಮಿ ಎಂದರೆ ದುಡ್ಡು ಅಂದರೆ ಮನೆಯ ಒಡತಿಗೆ ದುಡ್ಡನ್ನು ನೀಡುವ ಯೋಜನೆ ಇದಾಗಿದ್ದು, ಶ್ರೀ ಮಾನ್ಯ ಕರ್ನಾಟಕದ ಮುಖ್ಯಮಂತ್ರಿ ಆಗಿರುವಂತಹ  ಸಿದ್ದರಾಮಯ್ಯನವರು ಈ ಯೋಜನೆಯನ್ನು ಜಾರಿಗೆ ಗೊಳಿಸಿದರು.

ಈ ಯೋಜನೆಯು ಯಜಮಾನಿಗೆ ಪ್ರತಿ ತಿಂಗಳು ಒಂದು 2000 ಆರ್ಥಿಕ ಸಹಾಯವನ್ನು ನೀಡಿ, ಮಹಿಳೆಯರನ್ನು ಆರ್ಥಿಕವಾಗಿ ಸದೃಢವಾಗಲಿ ಎಂಬ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ಗೊಳಿಸಿದ್ದರು.  ಚುನಾವಣೆಗೂ ಮುಂಚೆ ರಾಜ್ಯ ಕಾಂಗ್ರೆಸ್ ಪಕ್ಷವು ಈ ಒಂದು ಹೇಳಿಕೆಯನ್ನು ಜನರಿಗೆ ನೀಡಿತ್ತು.

ಅನೇಕ ಜನರು ಈ ಯೋಜನೆಯು ಜಾರಿಗೆ ಬರುವುದೋ ಇಲ್ಲವೋ ಎಂಬ ಸಂದೇಹದಲ್ಲಿ ಕುಳಿತಿದ್ದ ಸಮಯದಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ಚುನಾವಣೆ ಗೆದ್ದೆ ಬಿಟ್ಟಿತು, ಯೋಜನೆಯನ್ನು ಜಾರಿಗೆ ತಂದೇ ಬಿಟ್ಟಿತು.

ಈ ಯೋಜನೆಯ ಮತ್ತೊಂದು ಉದ್ದೇಶವೇನೆಂದು ನೋಡುವುದಾದರೆ ಅನೇಕ ಮಹಿಳೆಯರು ಈಗ ಹೊರಗೆ ಕೆಲಸ ಮಾಡಲು ಹೋಗುತ್ತಿಲ್ಲ ಹೀಗೆ ಹೇಳುವುದಕ್ಕಿಂತ ಗಂಡಂದಿರು ತಮ್ಮ ಹೆಂಡತಿಗೆ ಹೊರಗೆ ಕೆಲಸ ಮಾಡಲು ಹೋಗಲು ಬಿಡುತ್ತಿಲ್ಲ. ಯಾಕೆ ಒಂದು ಕಾರಣವೆಂದರೆ ಸುರಕ್ಷತೆ. ಈ ಒಂದು ಸಮಸ್ಯೆಯಿಂದ ಹೆಣ್ಣು ಮಕ್ಕಳು ಸಣ್ಣ ಸಣ್ಣ ಖರ್ಚಿಗು ಕೂಡ   ತಮ್ಮ ಗಂಡಂದಿರ ಬಳಿ ದುಡ್ಡಿಗಾಗಿ ಕೈ ಚಾಚುವಂತ ಸನ್ನಿವೇಶ ಎದುರಾಗುತ್ತಿತ್ತು. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಈ ಯೋಜನೆಯನ್ನು ಜಾರಿಗೆ ತಂದಿದ್ದು.

ಹೆಣ್ಣು ಮಕ್ಕಳು ಹೆಚ್ಚಾಗಿ ಕೇವಲ ಅಡುಗೆ ಮಾಡುವುದು ಬಾಂಡೆ  ತಿಕ್ಕುವುದು ಬಟ್ಟೆ ಒಗೆಯುವುದು ಈ ತರಹದ ಕೆಲಸವನ್ನು ಮಾಡುತ್ತಿದ್ದು ಖರ್ಚಿಗೆ ಹಣವನ್ನು ಗಂಡಂದಿರ ಬಳಿ ಕೇಳಬಾರದು ಎಂಬ ಉದ್ದೇಶದಿಂದ ಈ ಯೋಜನೆಯ ಹೆಣ್ಣು ಮಕ್ಕಳಿಗೆ ಅತ್ಯಂತ ಸಹಕಾರಿಯಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳಿಗೆ ರೂ.2000: ನೀಡುತ್ತಿದ್ದು ಅಂದರೆ ವರ್ಷಕ್ಕೆ 24 ಸಾವಿರ ರೂಪಾಯಿಯ ಆರ್ಥಿಕ ಸಹಾಯವನ್ನು ಸರ್ಕಾರವು ಎಲ್ಲಾ ಅರ್ಹ ಮಹಿಳೆಯರಿಗೆ ನೀಡುತ್ತಿದೆ. ಒಟ್ಟಾರೆ ಒಂದುವರೆ ಕೋಟಿ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. 

ಈ ಯೋಜನೆಯನ್ನು ಜಾರಿಗೆ ತರಲು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು 2023 ಮೇ 26ರಂದು ಅಧಿಕೃತವಾಗಿ ಜಾರಿಗೆಗೊಳಿಸಲು ನಿರ್ಧಾರ ಕೈಗೊಂಡಿತು. ಈ ಒಂದು ಆದೇಶಕ್ಕೆ ಸಚಿವ ಸಂಪುಟದ ತಿರುಮಲದಂತೆ ರಾಜ್ಯಪಾಲರ ಒಂದು ಹಾಗೂ ಸರ್ಕಾರದ ಜಂಟಿ ಕಾರ್ಯದರ್ಶಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸವೀಕರಣ ಇಲಾಖೆ ಜಂಟಿ ಕಾರ್ಯದರ್ಶಿಯಾದ ಬಿ ಎಂ ಚಂದ್ರಶೇಖರ್ ಅವರು ಈ ಒಂದು ಆದೇಶಕ್ಕೆ ಹತ್ತಾಕ್ಷರವನ್ನು ನೀಡಿದ್ದಾರೆ.

ಈ ಒಂದು ಯೋಜನೆಯನ್ನು ಜಾರಿಗೆ ತರುವುದಕ್ಕಿಂತ ಮುಂಚೆ ಅನೇಕ ಜನರು ಟೀಕೆಯನ್ನು ವ್ಯಕ್ತಪಡಿಸಿದ್ದರು.

ಇದು ಒಂದು ಯೋಜನೆಯೇ?

ಎಂದು ಹಲವರು ಟೀಕೆ ಮಾಡಿದ್ದುಂಟು. ಎಲ್ಲ ಟೀಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಬಹುಮತದಿಂದ ಆರಿಸಿ ಬಂದಂತಹ ಕಾಂಗ್ರೆಸ್ ಪಕ್ಷವು ಯೋಜನೆಯನ್ನು ಜಾರಿಗೆ ತಂದೇ ಬಿಟ್ಟಿತು. ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಶಾಲಿ ನಾಯಕರಾದ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಹೇಳಬೇಕೆಂದರೆ ಇವರು ಒಬ್ಬ ಪ್ರಭಾವಶಾಲಿ ನಾಯಕರು ಮತ್ತು ಮಾತಿನ ಮೇಲೆ ಗಮ್ಮತ್ತು ಹೀಗೆ ಅವರ ಬಗ್ಗೆ ಹೇಳುತ್ತಾ ಹೋದರೆ ಅನೇಕ ಉತ್ತಮ ನಾಯಕ ಎಂದು ಹೇಳಬಹುದು. ಇವರ ಹಿಂದಿನ ಆಡಳಿತದಲ್ಲಿ ಸತತ ಐದು ವರ್ಷಗಳ ಕಾಲ ಒಬ್ಬ ಪ್ರಭಾವಶಾಲಿ ನಾಯಕರಾಗಿ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷವನ್ನು ಉತ್ತಮದ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಚುನಾವಣೆಗಿಂತ ಮುಂಚೆ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜನರ ಮುಂದೆ ವ್ಯಕ್ತಪಡಿಸಿದಾಗ ಹಲವಾರು ಟೀಕೆಗಳು ಬಂದಿದ್ದುಂಟು. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು. ಈಗಾಗಲೇ ಅನೇಕ ಜನರು ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಅನೇಕ ಮಹಿಳೆಯರಿಗೆ ಈ ಲಾಭವು ದೊರಕುತ್ತಿಲ್ಲ ಏಕೆಂದರೆ ಅದಕ್ಕೆ ಹಲವಾರು ಸಮಸ್ಯೆಗಳಿರಬಹುದು.

ಅವುಗಳಲ್ಲಿ ಒಂದು ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ಸಮಸ್ಯೆ. ಇನ್ನು ಹಲವು ಕಾರಣಗಳಿದ್ದು ಅವುಗಳಲ್ಲಿ ಬ್ಯಾಂಕ್ ಖಾತೆಗೆ  ಆಧಾರ್ ಕಾರ್ಡ ಲಿಂಕ್ ಇರದೆ ಇರುವಂತಹ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಅನೇಕ ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ಅರ್ಜಿ ಸಲ್ಲಿಸಿದರು ಕೂಡ ಅನೇಕ ಮಹಿಳೆಯರಿಗೆ ಇದು ದೊರಕುತ್ತಿಲ್ಲ. ಈ ಸಮಸ್ಯೆಗೆ ಒಂದು ಮುಖ್ಯವಾದ ಪರಿಹಾರವೇನೆಂದರೆ ರಾಜ್ಯ ಸರ್ಕಾರವು ಈ ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡು, ಗ್ರಾಮ ಪಂಚಾಯಿತಿನಲ್ಲಿ ಅದಾಲತ್ ಆರಂಭಿಸಿದೆ. ಡಿಸೆಂಬರ್ 27ರಿಂದ 29 ರವರೆಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕ್ಯಾಂಪ್ ಗಳನ್ನು ಆರಂಭಿಸಿದ್ದು, ಫಲಾನುಭವಿಗಳಿಗೆ ಸ್ಥಳದಲ್ಲಿಯೇ ತಮ್ಮ ತೊಂದರೆಗಳಿಗೆ ಪರಿಹಾರವನ್ನು ನೀಡುವ ವ್ಯವಸ್ಥೆ ಇದಾಗಿದೆ.

ಈ ಒಂದು ಕ್ಯಾಂಪ್ ನಲ್ಲಿ, ಅನೇಕ ಇಲಾಖೆಯ ಅಧಿಕಾರಿಗಳು ಆಗಮಿಸಲಿದ್ದು, ನಿಗದಿಪಡಿಸಿದ ದಿನಾಂಕದಂದು ನಿಮ್ಮ ಹತ್ತಿರವಿರುವ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇತ್ತೀಚಿಗೆ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿಗೆ ಹೋಗಲು ಸಾಧ್ಯವಾಗದಿದ್ದರೆ ನಿಮ್ಮ ಹತ್ತಿರವಿರುವ ಅಥವಾ ನಿಮ್ಮ ಊರಿನ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಅಥವಾ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿ ನಿಮ್ಮ ತೊಂದರೆಯನ್ನು ಅವರಿಗೆ ಹೇಳಿಕೊಳ್ಳಬಹುದು. ಅವರು ಈ ಒಂದು ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸುತ್ತಾರೆ ಮತ್ತು ಶೀಘ್ರದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುವುದು.
ಈ ಗೃಹಲಕ್ಷ್ಮಿ ಯೋಜನೆಗೆ ಇನ್ನು ಹಲವಾರು ಅಪ್ಡೇಟ್ಗಳನ್ನು ಸರ್ಕಾರ ತರುತ್ತಿದ್ದು, ಅದಕ್ಕೆ ಪಿಂಕ್ ಕಾರ್ಡ್ ಎಂಬ ಹೊಸ ಕಾರ್ಡನ್ನು ಸರ್ಕಾರವು ಜಾರಿಗೆಗೊಳಿಸಲಿದೆ. ಈ ಕಾರ್ಡ್ ಮೇಲೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಫೋಟೋ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಫೋಟೋ ಮತ್ತು ಸಾವಿರ ರೂಪಾಯಿ ಎಂದು ಬರೆದ ಅಕ್ಷರ ಹೊಂದಿದೆ. ಈ ಕಾರ್ಡ್ ನ ಮೇಲೆ ಒಂದು ಕ್ಯೂಆರ್ ಕೋಡ್ ಸ್ಕ್ಯಾನರ್ ಇರುತ್ತದೆ .

ಕ್ಯೂಆರ್ ಕೋಡ್ ಸ್ಕ್ಯಾನರ್ ಮುಖಾಂತರ ನಿಮ್ಮ ಪ್ರತಿ ತಿಂಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾದ ಹಣದ ವಿವರ ಮತ್ತು ಪ್ರಸ್ತುತ ಸ್ಟೇಟಸ್ ಅನ್ನು ಅಥವಾ ಪ್ರಸ್ತುತ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದಾಗಿ. ಹೀಗೆ ಈ ಒಂದು ಪ್ರತಿಯೊಂದು ಯೋಜನೆಯು ರಾಜ್ಯದ ಸಾರ್ವಜನಿಕರ ಒಂದು ಹಿತಾಸಕ್ತಿಯಿಂದ ಸರ್ಕಾರವು ಜಾರಿಗೆ ಗೊಳಿಸುತ್ತದೆ. ನೀವೆಲ್ಲರೂ ಈ ಯೋಜನೆಗಳನ್ನು ಉಪಯೋಗಿಸಿಕೊಂಡು ಇದರ ಲಾಭವನ್ನು ಪಡೆದುಕೊಂಡು ಸದೃಢರಾಗಿರಿ.

3. ಸ್ತ್ರೀ ಶಕ್ತಿ – ಉಚಿತ ಪ್ರಯಾಣ ನಮ್ಮ ಪ್ರಮಾಣ   – ಉಚಿತ ಪ್ರಯಾಣದ ಜೊತೆಗೆ ಸುರಕ್ಷಿತ ಪ್ರಯಾಣ.

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಯೋಜನೆಗಲ್ಲಿ ಒಂದಾದ, ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸಲು ಈ ಯೋಜನೆಯನ್ನು ಜಾರಿಗೆಗೊಳಿಸಿತು. ಅನೇಕ ಯೋಜನೆಗಳಿಗೆ ಹಲವಾರು ನಿಯಮಗಳು ಇರುತ್ತವೆ . ಆದರೆ ಈ ಒಂದು ಯೋಜನೆಗೆ ಯಾವುದೇ ರೀತಿಯ ಅನೇಕ ನಿಯಮಗಳಿಲ್ಲ.

ಈ ಯೋಜನೆಯ ಅಡಿಯಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಮಹಿಳೆಯರಿಗೆ ಕರ್ನಾಟಕ ಸರ್ಕಾರದ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ದೊರಕಿಸಿಕೊಡುವ ಯೋಜನೆ ಇದಾಗಿದ್ದು , ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮಹಿಳೆಯರು ಯಾವುದೇ ರೀತಿಯ ಅರ್ಜಿಯನ್ನು ಹಾಕುವಂತಿಲ್ಲ, ಯಾವುದೇ ವರ್ಗಕ್ಕೆ ಮಾತ್ರ ಮೀಸಲಿಲ್ಲ. ಈ ಒಂದು ಯೋಜನೆಯ ರಾಜ್ಯದ ಎಲ್ಲಾ ಮಹಿಳೆಯರಿಗೆ ಅನ್ವಯವಾಗಲಿದ್ದು, ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

ಕರ್ನಾಟಕ ರಾಜ್ಯದ ನಿವಾಸಿಯಾಗಿರುವಂತಹ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗಲಿದೆ. ಅಂದರೆ ಈ ಲಾಭವನ್ನು ಪಡೆಯಲು ನೀವು ಕರ್ನಾಟಕ ರಾಜ್ಯ ಸರ್ಕಾರದ ಬಸ್ಸುಗಳಾದ ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ಕೇವಲ ನಿಮ್ಮ ಆಧಾರ್ ಕಾರ್ಡ್ ತೋರಿಸಿದರೆ ಸಾಕು. ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಬೇಕಾದರೂ ನೀವು ಉಚಿತವಾಗಿ ಪ್ರಯಾಣವನ್ನು ಸಾಗಿಸಬಹುದು.

ಈ ಒಂದು ಯೋಜನೆಯ ಒಂದು ಮುಖ್ಯವಾದ ಉದ್ದೇಶವೇನೆಂದರೆ, ಹೆಣ್ಣು ಮಕ್ಕಳು ಸಹ ಹೊರಗಿನ ಜಗತ್ತಿನ ಒಂದು ಜ್ಞಾನವನ್ನು ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕಾಂಗ್ರೆಸ್ ಪಕ್ಷದ ಈ ಒಂದು ಯೋಜನೆಗೆ ಪ್ರತಿ ವರ್ಷ 35,000 ಕೋಟಿಗಿಂತ ಹೆಚ್ಚಿನ ಹಣ ಬೇಕಾಗುವುದೆಂದು ಮೂಲಗಳು ತಿಳಿಸಿವೆ. ಈ ಒಂದು ಯೋಜನೆಯಿಂದ ಮಹಿಳೆಯರು ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲಿ ಬೇಕಾದರೂ ತಮ್ಮ ಪ್ರಯಾಣವನ್ನು ಸಾಗಿಸಬಹುದು.

ಈ ಒಂದು ಉಚಿತ ಪ್ರಯಾಣ ಸೇವೆಯು ಕರ್ನಾಟಕ ರಾಜ್ಯದಲ್ಲಿ ಮಾತ್ರ ಸೀಮಿತವಾಗಿದ್ದು ನೀವು ಅಂತರ್ ರಾಜ್ಯ ಪ್ರಯಾಣ ಮಾಡುತ್ತಿದ್ದರೆ ಈ ಯೋಜನೆ ಅನ್ವಯವಾಗುವುದಿಲ್ಲ. ಅದೇ ರೀತಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಈ ಯೋಜನೆಯು ಹೈಟೆಕ್ ಸರ್ಕಾರಿ ಬಸ್ಸುಗಳಾದಂತಹ ಒಲವು ರಾಜ ಹಂಸ ಈ ತರಹದ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೇವೆ ಸೌಲಭ್ಯ ಇರುವುದಿಲ್ಲ. ಇದೇ ರೀತಿ ಮಹಿಳೆಯರು ಈಗಾಗಲೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಆರಂಭಿಸಿದ್ದು ಸರ್ಕಾರವು ನೂರಕ್ಕೆ ನೂರರಷ್ಟು ಸಾಧಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂಬ ಹೇಳುವುದಕ್ಕೆ ಸಾಧ್ಯವಾಗುತ್ತಿದೆ.

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ಈ ಒಂದು ಮಹಿಳಾ ಸಬಲೀಕರಣ ಸಂಬಂಧಿಸಿದ ಯೋಜನೆಗಳಾದ ಗೃಹಲಕ್ಷ್ಮಿ ಉಚಿತ ಪ್ರಯಾಣ ಯೋಜನೆಗಳಿಂದ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಒಲವಿದ್ದು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಗೆಲ್ಲಲು ಬಹು ಮುಖ್ಯ ಸಹಾಯ ಮಾಡಿತು.  ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಉಚಿತ ಪ್ರಯಾಣ ನಮ್ಮ ಪ್ರಮಾಣ ಎಂಬ ಯೋಜನೆಯ ಕೂಡ ಒಂದಾಗಿದ್ದು, ಈ ಎಲ್ಲ ಯೋಜನೆಗಳಿಗೆ ಸರ್ಕಾರವು 50,000 ಕೋಟಿ ಖರ್ಚಾಗಬಹುದೆಂದು ತಮ್ಮ ಸಭೆಯಲ್ಲಿ ಹೇಳಿಕೊಂಡಿದ್ದರು.

ಎಲ್ಲಾ ಯೋಜನೆಗಳು ಬಡವರ ಹಿತಾಸಕ್ತಿಯಲ್ಲಿದ್ದು ಕರ್ನಾಟಕ ರಾಜ್ಯದಲ್ಲಿ ಇನ್ನೂ ಇತರ ಹಲವಾರು ಯೋಜನೆಗಳು ಜಾರಿಗೆ ಬರಲಿವೆ. ಈ ಯೋಜನೆ ಜಾರಿಗೆ ಬಂದ ನಂತರ ಅನೇಕ ಯುವಕರು ಬೇಸರಗೊಂಡಿದ್ದು ಉಂಟು. ಇದನ್ನು ಅರಿತು ಸರ್ಕಾರವು ಒಂದು ವೇಳೆ ಪುರುಷರಿಗೂ ಕೂಡ ಉಚಿತ ಬಸ್ ಸೇವೆ ಎನ್ನು ಒದಗಿಸಿದರೆ ಸರ್ಕಾರವು ಹಾನಿಯಾಗುವುದಂತೂ ಗ್ಯಾರಂಟಿ. ಇತ್ತೀಚಿಗೆ ನೀವು ಎಲ್ಲಿ ನೋಡಿದರೂ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರೇ ಕಾಣುತ್ತಾರೆ. ಉಚಿತ ಬಸ್ ಸೇವೆ ಒದಗಿಸಿದ್ದರಿಂದ ಅನೇಕರಿಗೆ ಲಾಸ್ ಆಗಿದ್ದು ಉಂಟು ಅದರಲ್ಲಿ ಆಟೋ ಚಾಲಕರಿಗೆ ಬಹಳ ಹೊಡೆತ ಬಿದ್ದಿದೆ. ಇದನ್ನು ಹೊರತುಪಡಿಸಿದರೆ ಈ ಯೋಜನೆಯು ಅತ್ಯಂತ ಉಪಕಾರಿ ಯೋಜನೆಯಾಗಿದೆ.

4.  ಅನ್ನ ಭಾಗ್ಯ ಯೋಜನೆ :


ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳ್ಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯು ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ನೀಡುವ ಯೋಜನೆ ಇದಾಗಿದೆ.  ಯೋಜನೆಯಿಂದ ಅನೇಕ ಬಡ ಕುಟುಂಬಗಳಿಗೆ ಸಹಾಯ ವಾಗಿದ್ದು ಪ್ರತಿಯೊಬ್ಬ ಬಿಪಿಎಲ್ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ನೀಡುವ ಯೋಜನೆ ಇದಾಗಿದೆ.

ಇಲ್ಲಿಯವರೆಗೆ ರಾಜ್ಯ ಸರ್ಕಾರವು ಪ್ರತಿ ತಿಂಗಳು ಐದು ಕೆಜಿ ಅಕ್ಕಿಯನ್ನು ಮಾತ್ರ ಕೊಡುತ್ತಿತ್ತು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡಲು ಸಾಧ್ಯವಾಗದೆ, 5 ಕೆ.ಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿಯ ಹೊರತಾಗಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ಒಬ್ಬ ಸದಸ್ಯರಿಗೆ ಪ್ರತಿ ತಿಂಗಳ 170 ಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲು ಮುಂದಾಯಿತು.

ಏಕೆಂದರೆ ಸರ್ಕಾರವು ಪ್ರತಿಯೊಬ್ಬರಿಗೆ 10 ಕೆಜಿ ಕೊಡಲು ಸಾಧ್ಯವಾಗದಿತ್ತು. ಆದ್ದರಿಂದ ಕಾಂಗ್ರೆಸ್ ಪಕ್ಷವು ಪ್ರತಿಯೊಬ್ಬ ಸದಸ್ಯರಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ಪ್ರತಿ ತಿಂಗಳು ಅವರ ಖಾತೆಗೆ ನೇರವಾಗಿ ಜನ ಮಾಡಲು ಆರಂಭಿಸಿತು. ಈ ಯೋಜನೆಯ ಸಹಾಯದಿಂದ ಅನೇಕ ಬಡ ಕುಟುಂಬಗಳಿಗೆ ಹಸಿವು ಇಲ್ಲದಂತೆ ಜೀವನ ನಡೆಸಲು ಈ ಯೋಜನೆ ಸಹಾಯಕವಾಗಿದೆ. ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿಯೊಬ್ಬ ಫಲಾನುಭವಿಗಳು ಈ ಯೋಜನೆಯ ಅಡಿಯಲ್ಲಿ ಬರುವ ಹಣ ಮತ್ತು ಪ್ರತಿ ತಿಂಗಳು 5 ಕೆಜಿ ಅಕ್ಕಿಯನ್ನು ಪಡೆದುಕೊಳ್ಳುತ್ತಿದ್ದಾರೆ.

5. ಗೃಹ ಜ್ಯೋತಿ ಯೋಜನೆ :

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜೋತಿ ಯೋಜನೆಯು ಅತ್ಯಂತ ಜನ ಹಿತ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಕೊಡುವ ಯೋಜನೆ ಇದಾಗಿದೆ.

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮುಂಚೆ ಪಂಚ ಗ್ಯಾರಂಟಿ ಯೋಜನೆಗಲ್ಲಿ ಈ ಒಂದು ಯೋಜನೆಯ ಬೃಹತ್ ಯೋಜನೆ ಯಾಗಿತ್ತು. ಅನೇಕ ಬಡ ಕುಟುಂಬಗಳು ಪ್ರತಿ ತಿಂಗಳು ಕರೆಂಟ್ ಬಿಲ್ಲನ್ನು ಕಟ್ಟಲಾಗದೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಈ ಸಮಸ್ಯೆಯನ್ನು ಅರಿತ ಕಾಂಗ್ರೆಸ್ ಪಕ್ಷವು ಪ್ರತಿ ತಿಂಗಳು ಅರ್ಹ ಕುಟುಂಬಗಳಿಗೆ  ಎರಡುನೂರು ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡಲು ಆರಂಭಿಸಿದೆ. ಒಂದು ವೇಳೆ ನೀವು 200 ಯೂನಿಟ್ ಗಿಂತ ಹೆಚ್ಚಿನ ಕರೆಂಟ್ ಅನ್ನು ಉಪಯೋಗಿಸಿದರೆ ಹೆಚ್ಚಾದ ಮೊತ್ತವನ್ನು ನೀವು ಬಿಲ್ ಕಟ್ಟಬೇಕಾಗುತ್ತದೆ. ಒಂದು ವೇಳೆ ನೀವು 200 ಯೂನಿಟ್ ಗಿಂತ ಕಡಿಮೆ ಉಪಯೋಗಿಸಿದರೆ ವಿದ್ಯುತ್ ಇಲಾಖೆಗೆ ಯಾವುದೇ ನಯಾ ಪೈಸೆ ಕೂಡ ಬಿಲ್ ಕಟ್ಟುವಂತಿಲ್ಲ. ಈ ಯೋಜನೆಯು ವಾಣಿಜ್ಯ ವಿಭಾಗಗಳಿಗೆ ಅನ್ವಯಿಸುವುದಿಲ್ಲ.

ಕೇವಲ ಕುಟುಂಬಗಳಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇಂತಹ ಯೋಜನೆಗಳನ್ನು ಉಪಯೋಗಿಸಿಕೊಂಡು ನಿಮ್ಮ ಜೀವನವನ್ನು ಸಾಗಿಸಿ. ಒಟ್ಟಾರೆ ಹೇಳಬೇಕೆಂದರೆ ಕಾಂಗ್ರೆಸ್ ಪಕ್ಷವು ಈ ವರ್ಷದ ಚುನಾವಣೆಯಲ್ಲಿ ಗೆದ್ದ ನಂತರ ತಾವು ಪ್ರಣಾಳಿಕೆಯಲ್ಲಿ ಹೇಳಿಕೊಂಡ ಎಲ್ಲವನ್ನು ಸಾಧಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಒಂದು ಮೇಲಿನ ಲೇಖನದಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ 5 ಪಂಚ ಗ್ಯಾರಂಟಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನಾವು ತಿಳಿದುಕೊಂಡೆವು. ಈ ಎಲ್ಲಾ ಯೋಜನೆಗಳಿಂದ ಅನೇಕ ಬಡ ಕುಟುಂಬಗಳಿಗೆ ಬಹಳ ಸಹಾಯಕವಾಗಿದ್ದು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ಜನರ ನಂಬಿಕೆಗೆ ಹೆಸರಾಯಿತು.

ಈ ಎಲ್ಲಾ ಯೋಜನೆಗಳನ್ನು ನಾವು ಸರಿಯಾದ ಮಾರ್ಗದಲ್ಲಿ ಉಪಯೋಗಿಸಿಕೊಂಡು ನಮ್ಮ ರಾಜ್ಯದ ಹೆಸರನ್ನು ದೇಶಾದ್ಯಂತ ಉತ್ತಮ ರಾಜ್ಯ ಎಂದು ಕರೆಸಿಕೊಳ್ಳುವ ಮಟ್ಟದಲ್ಲಿ ನಾವು ಎಲ್ಲರೂ ಕೈಜೋಡಿಸಬೇಕು. ಅನೇಕ ಜನರು ಈ ಯೋಜನೆಗಳಿಗೆ ಅರ್ಹರೆಲ್ಲದಿದ್ದರೂ ತಪ್ಪು ಮಾರ್ಗದಲ್ಲಿ ಈ ಯೋಜನೆಗೆ ಅರ್ಹರಾಗಲು ತಪ್ಪು ಕೆಲಸ ಮಾಡುತ್ತಿದ್ದಾರೆ .

ಅದೇನೆಂದರೆ ತಾವು ಬಿಪಿಎಲ್ ಕಾರ್ಡಿಗೆ ಅರ್ಹರಿಲ್ಲದಿದ್ದರೂ ಕೂಡ ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿ ಸಿಕ್ಕು ಬೀಳುತ್ತಿದ್ದಾರೆ. ಈ ಎಲ್ಲವನ್ನು ಅರಿತ ಸರ್ಕಾರವು ಹೊಸ ರೇಷನ್ ಬಿಪಿಎಲ್ ಕಾರ್ಡ್ಗಳನ್ನು ಕೊಡುವುದರಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುತ್ತಿದೆ. ಆದ್ದರಿಂದ ನೀವು ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನೀವು ಅರ್ಹರಿದ್ದರೆ ಮಾತ್ರ ಅರ್ಜಿ ಸಲ್ಲಿಸಿ. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಇರುವುದು ಬಹು ಅವಶ್ಯಕವಾಗಿದ್ದು, ಮತ್ತು ನಿಮ್ಮ ಆಧಾರ್ ಕಾರ್ಡಿಗೆ ನೀವು ಉಪಯೋಗಿಸುತ್ತಿರುವ ಮೊಬೈಲ್ ನಂಬರ್ ಲಿಂಕ್ ಇರಬೇಕು.

ಇಲ್ಲದಿದ್ದರೆ ನಿಮ್ಮ ಹತ್ತಿರದ ಗ್ರಾಹಕರ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಿ.

ಕನ್ನಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕದ ಗ್ಯಾರಂಟಿಗಳನ್ನು ನೀಡಲಾಗಿದ್ದು ಇದರಲ್ಲಿ ಈಗ ಯುವ ನಿಧಿ ಮಾತ್ರ ಉಳಿದಿದ್ದು ಇದೀಗ ಯುವನಿಧಿ ಯೋಜನೆಗೂ ಕೂಡ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ…

ಅರ್ಜಿ ಸಲ್ಲಿಸಬೇಕೆಂದರೆ 2023 ನೇ ಸಾಲಿನ ವರ್ಷದಲ್ಲಿ ಪದವೀಧರ ಹೊಂದಿರಬೇಕು ಹಾಗೆ ಇದಕ್ಕಿಂತ ಮುಂಚೆ ಪದವೀಧರ ಹೊಂದಿದಂತಹ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುವುದಿಲ್ಲ…

ಡಿಪ್ಲೋಮಾ ವಿದ್ಯಾರ್ಥಿಗಳಿಗೆ 15 ನೂರು ರೂಪಾಯಿಗಳು ಹಾಗೆ ಪದವಿ ಹೊಂದಿರುವಂತಹ ವಿದ್ಯಾರ್ಥಿಗಳಿಗೆ 3000 ವನ್ನು ಸರ್ಕಾರವು ಈಗಾಗಲೇ ಘೋಷಿಸಿದ್ದು ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ…

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಇದು ಆಗಿದ್ದರಿಂದ ಡಿಸೆಂಬರ್ 26 2023 ನೇ ತಾರೀಖಿನಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಅಂತಿಮ ದಿನಾಂಕವನ್ನು ಸರ್ಕಾರವು ಸ್ಪಷ್ಟೀಕರಿಸಿಲ್ಲ…

ಅದಕ್ಕಾಗಿ ಅರ್ಜಿ ಸಲ್ಲಿಸುವವರು ಮೊದಲು ನಿಮ್ಮ ಹತ್ತಿರ ಇರುವಂತಹ ಡಾಕ್ಯುಮೆಂಟ್ಸ್ಗಳನ್ನು ವೆರಿಫೈ ಮಾಡಿಕೊಳ್ಳಿ ಅಂದರೆ ನಿಮ್ಮ ಹತ್ತಿರ ನಿಮ್ಮ ಆಧಾರ್ ಕಾರ್ಡ್ ಹಾಗೆ ನಿಮ್ಮ ಪ್ರಾವಿಜನಲ್ ಮಾರ್ಕ್ಸ್ ಕಾರ್ಡ್ ನಿಮ್ಮ ಇತ್ತೀಚಿನ ಭಾವಚಿತ್ರ ಇರಬೇಕಾಗುತ್ತದೆ..

ಈ ಮೇಲ್ಕಂಡ ಡಾಕ್ಯುಮೆಂಟ್ಸ್ ನಿಮ್ಮ ಹತ್ತಿರವಿದ್ದರೆ ನೀವು ಅತಿ ಸುಲಭವಾಗಿ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತೀರಿ..

ಕರ್ನಾಟಕ ರಾಜ್ಯ ಸರ್ಕಾರದಿಂದ 10 ಹಲವಾರು ಯೋಜನೆಗಳು ಬರುತ್ತಿದ್ದು ಇದೀಗ ಯುವ ನಿಧಿಗೆ ಚಾಲನೆಯನ್ನು ನೀಡಿದ್ದು ವಿದ್ಯಾರ್ಥಿಗಳಿಗೆ ನಿರುದ್ಯೋಗ ಹೋಗಲಾಡಿಸಲು ಇದನ್ನು ಮಹತ್ವದ ಘೋಷಣೆಯಾಗಿದ್ದು ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾಗಿದೆ..

ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ನಲ್ಲಿ ಇರುವಂತಹ ಮಾಹಿತಿಯನ್ನು ಓದಿಕೊಳ್ಳಿ ಹಾಗೆ ಏನಾದರೂ ತೊಂದರೆಯಾದಲ್ಲಿ ನಮ್ಮನ್ನು ಸಂಪರ್ಕಿಸಿ ಧನ್ಯವಾದಗಳು..

ಇನ್ನು ಮುಂದೆ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಹೀಗೆ ಪ್ರಮುಖ ಮಾಹಿತಿಯನ್ನು ನೀಡುತ್ತಿದ್ದು ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ…

Leave a Reply

Your email address will not be published. Required fields are marked *