18 May 2024

ಈಗ ಅಣಬೆ ಕೃಷಿ ಮಾಡಿ ಮೂರು ತಿಂಗಳಿನಲ್ಲಿ ಎರಡರಿಂದ ಮೂರು ಲಕ್ಷದ ರುಪಾಯಿವರೆಗೂ ಸಂಪಾದಿಸಿ…! Mushroom farming…

ಎಲ್ಲರಿಗೂ ನಮಸ್ಕಾರ ಬಂಧುಗಳೇ…

ನಾವು ರೈತರಿಗೆ ಮತ್ತು ಎಲ್ಲಾ ಕನ್ನಡಿಗರೇ ಸಹಾಯವಾಗುವಂತಹ ಲೇಖನ ಮತ್ತು ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದು ಇಂದಿನ ಈ ಒಂದು ಅಂಕಣದಲ್ಲಿ ನಾವು ಅಣಬೆ ಕೃಷಿ ಮತ್ತು ಲಾಭದಾಯಕತೆಯ ಬಗ್ಗೆ ಸಂಪೂರ್ಣವಾದ ಸಮಗ್ರ ಮಾಹಿತಿಯನ್ನು ತಿಳಿದುಕೊಳ್ಳಲು ಮುಂದಾಗೋಣ.

ನಾವು ಈ ಒಂದು ಲೇಖನದಲ್ಲಿ ಅಣಬೆ ಕೃಷಿಯಿಂದ ಲಾಭ ಪಡೆದುಕೊಳ್ಳುವುದು ಹೇಗೆ, ಮಾರಾಟ ಮಾಡುವುದು ಹೇಗೆ, ಕೃಷಿ ಪದ್ಧತಿ ಹಾಗೂ ಇತರೆ ಈ ಕೃಷಿಗೆ ಸಂಬಂಧಿಸಿದ ಅವಶ್ಯಕವಾದ ಸಮಗ್ರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ಒದಗಿಸಲಿದ್ದೇವೆ. ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆಯವರೆಗೂ ಓದಿ ನಿಮಗೆ ಉಪಯುಕ್ತವೆನಿಸಿದರೆ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಕುಟುಂಬದವರಿಗೂ ಎಲ್ಲರಿಗೂ ಹಂಚಿಕೊಳ್ಳಿ.

ನಮ್ಮ ಈ ವೆಬ್ ಸೈಟ್ ನಲ್ಲಿ ನಾವು ಪ್ರತಿನಿತ್ಯ ನಿಮಗೆ ಸಹಾಯ ವಾಗುವಂತಹ ಲೇಖನಗಳನ್ನು ಹಾಕುತ್ತಿದ್ದೇವೆ. ಬನ್ನಿ ಹಾಗಿದ್ದರೆ ತಡ ಮಾಡುವುದು ಬೇಡ ಜಾಗತಿಕವಾಗಿ ಟ್ರೆಂಡಿಂಗ್ ನಲ್ಲಿರುವ ಕೃಷಿ ಎಂದರೆ ಅಣಬೆ ಕೃಷಿ. ಈ ಅಣಬೆ ಕೃಷಿಯ ಸಮಗ್ರವಾದ ಮಾಹಿತಿಯನ್ನು ಹಿಡಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ.

Mushroom farming and profit :

ಒಬ್ಬ ರೈತನ ಕೃಷಿಯಲ್ಲಿ ಶ್ರೀಮಂತನಾಗಬೇಕೆಂದರೆ, ಅವನು ಕಾಲ ಕಾಲಕ್ಕೆ ತಕ್ಕಂತೆ ಕೃಷಿ ವಿಧಾನಗಳನ್ನು ಬದಲಿಸುತ್ತಾ ಹೋದರೆ ಮಾತ್ರ ಅವನು ಶ್ರೀಮಂತನಾಗಬಹುದು. ಹಳೆ ಕಾಲದ ಪದ್ಧತಿಗಳನ್ನು ಈಗಲೂ ಅನುಸರಿಸುತ್ತಾ ಬಂದರೆ ರೈತನ ಕೃಷಿ ಮಾಡುವುದು ಕೇವಲ ಹೊಟ್ಟೆ ಬಟ್ಟೆಗಾಗಿ ಮಾತ್ರ ಆಗುತ್ತದೆ.

ಒಬ್ಬ ರೈತನು ಉದ್ದಾರ ಆಗುವುದು ಯಾವಾಗವೆಂದರೆ, ಆಧುನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿಕೊಂಡು ಮಾರುಕಟ್ಟೆಗೆ ತಕ್ಕಂತೆ ಅವುಗಳನ್ನು ಮಾರಾಟ ಮಾಡುವುದರಿಂದ ಅಥವಾ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದರಿಂದ ಶ್ರೀಮಂತನಾಗಬಹುದು.

ಆದರೆ ಈಗಿನ ಕಾಲದಲ್ಲಿ ಇನ್ನೂ ಹಲವಾರು ರೈತರು ಹಳೆಯ ಪದ್ಧತಿಗಳನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ ಅಂತವರಿಗೆ ನಮ್ಮ ಈ ಕೆಳಗಿನ ಲೇಖನ ಉಪಯೋಗವಾಗಲಿವೆ ಎಂದು ಭಾವಿಸುತ್ತೇವೆ. ಏಕೆಂದರೆ ನಾವು ಈ ಲೇಖನದಲ್ಲಿ ಈ ಆಧುನಿಕ ಯುಗದಲ್ಲಿ ಅತ್ಯಂತ ಲಾಭದಾಯಕ ಮತ್ತು ಕಡಿಮೆ ಬಂಡವಾಳದಲ್ಲಿ ಅಥವಾ ಕಡಿಮೆ ಜಾಗದಲ್ಲಿ ಬೆಳೆಯಬಹುದಾದಂತಹ ಒಂದು ಕೃಷಿಯ ಬಗ್ಗೆ ನಿಮಗೆ ಹೇಳಿಕೊಡುತ್ತಿದ್ದೇವೆ. ಈ ಕೃಷಿಯ ಹೆಸರೆಂದರೆ ಅಣಬೆ ಕೃಷಿ.

ಅಣಬೆ ಕೃಷಿ ಬಗ್ಗೆ :

ಇತ್ತೀಚಿನ ದಿನಗಳಲ್ಲಿ ಅತ್ಯಂತ ಬೇಡಿಕೆ ಇರುವುದೆಂದರೆ ತಾಜಾ ಆರೋಗ್ಯಕರ ಮತ್ತು ಸಾವಯುವ ಉತ್ಪನ್ನಗಳಿಗೆ. ಇದನ್ನ ಇಂಗ್ಲಿಷ್ನಲ್ಲಿ ಮಶ್ರೂಮ್ ಕೃಷಿ ಎಂದು ಕೂಡ ಕರೆಯಲಾಗುತ್ತದೆ  Mushroom farming. ಈ ಅಣಬೆ ಕೃಷಿಯು ಪ್ರಾಚೀನ ಕಾಲದಿಂದಲೂ ಅತ್ಯಂತ ಆಕರ್ಷಕ ಇತಿಹಾಸವನ್ನು ಹೊಂದಿದೆ.

ಅಣಬೆ ಕೃಷಿಯ ಇತಿಹಾಸ

ಅಣಬೆ ಕೃಷಿಯನ್ನು ಸುಮಾರು 2000 ವರ್ಷಗಳ ಹಿಂದೆ ಚೀನಾದಲ್ಲಿ ಮೊದಲ ಬಾರಿಗೆ ಮಾಡಿದ್ದರು ಎಂದು ಭಾವಿಸಲಾಗಿದೆ. ಇನ್ನೊಂದು ಮುಖ್ಯ ವಿಶೇಷವೇನೆಂದರೆ ಅಣಬೆಯಲ್ಲಿ ಅನೇಕ ಔಷಧಿ ಗುಣಗಳಿವೆ ಎಂದು ಚೈನೀಸ್ ಹೇಳಿದ್ದರು.

16ನೇ ಶತಮಾನದಲ್ಲಿ ಈ ಅಣಬೆ ಕೃಷಿಯನ್ನು ಮೊದಲು ಯುರೋಪಿನಲ್ಲಿ ಬೆಳೆಸಲು ಪ್ರಾರಂಭಿಸಿತ್ತು. ಯುರೋಪ ನಲ್ಲಿ ಈ ಅಣಬೆಯನ್ನು, ಆರಂಭದಲ್ಲಿ ಅಲಂಕಾರಿಕ ಉದ್ದೇಶಗಳಿಗಾಗಿ ಉದ್ಯಾನವನಗಳಲ್ಲಿ ಬೆಳೆಯುತ್ತಿದ್ದರು ಎಂಬ ಮಾಹಿತಿ ಇದೆ. 1,700 ಕಾಲಕ್ಕೆ ಈ ಅಣಬೆ ಕೃಷಿಯು ಪ್ರಪಂಚದಾದ್ಯಂತ ಹೆಸರುವಾಸಿಯಾಗಲು ಪ್ರಾರಂಭ ಮಾಡಿದ್ದು.

ಈ ಒಂದು ಅಣಬೆ ಕೃಷಿಯನ್ನು ಒಳಾಂಗಣದಲ್ಲಿ ಬೆಳೆಸುವ ತಂತ್ರಗಳನ್ನು ಅಭಿವೃದ್ಧಿಪಡಿಸಲು ಆರಂಭಿಸಿದರು. ಒಳಾಂಗಣದಲ್ಲಿ ಬೆಳೆಯುವ ಈ ಮಶ್ರೂಮ್ ಫಾರ್ಮ್ ಗಳನ್ನು 18ನೇ ಶತಮಾನದಲ್ಲಿ ಫ್ರಾನ್ಸ್ ನಲ್ಲಿ ಸ್ಥಾಪಿಸಲಾಯಿತು ಎಂದು ಮಾಹಿತಿ ಇದೆ. ಫ್ರೆಂಚರು ಈ ಒಂದು ಅಣಬೆಗೆ ಅತಿ ಹೆಚ್ಚು ಒಲವು ಹೊಂದಿದ್ದರು ಮತ್ತು ಇಂದಿಗೂ ಕೂಡ ಹಲವು ತಂತ್ರಗಳನ್ನು ಅಭಿವೃದ್ಧಿಪಡಿಸಿ ಅಣಬೆ ಕೃಷಿಯನ್ನು ಬೆಳೆಯಲು ಇವರು ಅತ್ಯಂತ ಹೆಚ್ಚಿನ ಒಲವು ಹೊಂದಿದ್ದಾರೆ.

ಅವುಗಳಲ್ಲಿ ಕೆಲವೊಂದಿಷ್ಟು ಉದಾಹರಣೆಗಳನ್ನು ಕೊಡುವುದಾದರೆ ಮಿಶ್ರ ಗೊಬ್ಬರದ ಕುದುರೆ ಗೊಬ್ಬರದ ಮೇಲೆ ಅಣಬೆಗಳನ್ನು ಬೆಳೆಯುವುದು. 19ನೇ ಶತಮಾನದ ಉತ್ತರಾರ್ಧದಲ್ಲಿ ಈ ಅಣಬೆ ಕೃಷಿಯ ಒಂದು ಮಹತ್ವವು ಯುರೋಪ್ ಮತ್ತು ಉತ್ತರ ಅಮೆರಿಕದ ಹಲವಾರು ಭಾಗಗಳಿಗೆ ಹರಡಲು ಪ್ರಾರಂಭಿಸಿತ್ತು.

ಅಮೆರಿಕ ದೇಶದ ಯುನೈಟೆಡ್ ಸ್ಟೇಟ್ಸ್ ನಲ್ಲಿ ಮೊಟ್ಟ ಮೊದಲ ಬಾರಿಗೆ ವಾಣಿಜ್ಯ ಅಣಬೆ ಕೃಷಿಯನ್ನು 1896ರಲ್ಲಿ ಡಬ್ಲ್ಯೂ. ರಾಬಿನ್ಸನ್ ಅವರು ಪೆನ್ಸಿಲ್ವೆನಿಯಾದ ಕನೆಟ್ ನಲ್ಲಿ ಸ್ಥಾಪಿಸಿದ್ದಾರೆ. ಈಗಲೂ ಕೂಡ ಈ ಒಂದು ಪ್ರದೇಶವನ್ನು ವಿಶ್ವದ ಹಣವೇ ರಾಜಧಾನಿ ಎಂದು ಹೆಸರುವಾಸಿಯಾಗಿದ್ದು, 20ನೇ ಶತಮಾನದ ಹೊತ್ತಿಗೆ ಈ ಅಣಬೆ ಕೃಷಿಯು ಗಮನಾರ್ಹ ಒಂದು ಪ್ರಗತಿಯನ್ನು ಕಂಡು ಈ ಅಣಬೆ ಕೃಷಿಯನ್ನು ಮಾಡಲು ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗಲು ಪ್ರಾರಂಭಿಸಿದವು. ಹೊಸ ತಂತ್ರಜ್ಞಾನಗಳು ಆರಂಭವಾದಂತೆ ಅಣಬೆಯ ಹೊಸ ಹೊಸ ಪ್ರಭೇದಗಳನ್ನು ಅಭಿವೃದ್ಧಿಪಡಿಸಲು ಆರಂಭಿಸಿದರು.

ಅಣಬೆಯನ್ನು ಮರದ ಪುಡಿ ಅಥವಾ ಒಣಹುಲ್ಲಿನಂತಹ ಕ್ರಿಮಿ ನಾಶಕ ಬೆಳೆಯುವ ಮಾಧ್ಯಮದ ಬಳಕೆಯ ಜೊತೆಗೆ ಈ ಒಂದು ಅಣಬೆಯನ್ನು ಬೆಳೆಯಲು ಆರಂಭಿಸಿತು.

ಮರದ ಪುಡಿ ಮತ್ತು ಒಣ ಹುಲ್ಲಿನಂತಹ ಕ್ರಿಮಿನಾಶಕ ಬೆಳೆಯುವ ಮಾಧ್ಯಮದ ಜೊತೆಗೆ ಅಣಬೆ ಕೃಷಿಯನ್ನು ಬೆಳೆದಾಗ ಹೆಚ್ಚಿನ ಇಳುವರಿ ಮತ್ತು ಉತ್ತಮ ಗುಣಮಟ್ಟದ ಅಣಬೆ ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಈ ತರಹದ ಅಣಬೆ ಬೆಳೆಯುವ  ಕೃಷಿ ಪದ್ಧತಿಯು ಅತ್ಯಂತ ವ್ಯಾಪಕವಾಗಿ ಹರಡಿದ್ದು, ಇದು ಉತ್ತಮ ಗುಣಮಟ್ಟದ ಹಾಗೂ ಸ್ಥಿರವಾದ ಇಳುವರಿ ಅಣಬೆ ಬೆಳೆಯಲು ಸಹಾಯ ಮಾಡಿಕೊಟ್ಟಿತು.

ಅಣಬೆ ಕೃಷಿಯು ಇಂದಿನ ಕಾಲದಲ್ಲಿ ಅತ್ಯಂತ ವ್ಯಾಪಕವಾಗಿ ಹರಡುತ್ತಿದ್ದು ಏಕ ಜನರು ಇದನ್ನು ಉದ್ಯಮವಾಗಿ ಮಾಡಿಕೊಂಡಿದ್ದಾರೆ. ವಿಶ್ವದಾದ್ಯಂತ ಅಣಬೆ ಕೃಷಿಯನ್ನು ಅನೇಕರು ಬೆಳೆಯುತ್ತಿದ್ದು ವಾರ್ಷಿಕವಾಗಿ ಲಕ್ಷಾಂತರ ಟನ್ ಅಣಬೆ ಯನ್ನು ಅಣಬೆ ಕೃಷಿ ಮುಖಾಂತರ ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಹೆಚ್ಚಿನ ಲಾಭದ ಆದಾಯವನ್ನು ಕೂಡ ರೈತರ ಗಳಿಸುತ್ತಿದ್ದಾರೆ.

ನಾವು ಇಂದಿನ ಕಾಲದಲ್ಲಿ ಬೆಳೆಯುವ ಗೋವಿನ ಜೋಳ ರಾಗಿ ಸೂರ್ಯಕಾಂತಿ ಹತ್ತಿ ಭತ್ತ ಹಾಗೂ ಹಲವಾರು ಬೆಳೆಗಳಿಗೆ ವಿಸ್ತಾರವಾದ ಹೊಲ ಅಥವಾ ಜಾಗ ಬೇಕು. ಆದರೆ ಈ ಒಂದು ಅಣಬೆ ಕೃಷಿಯನ್ನು ಬೆಳೆಯಲು ಸಣ್ಣದಾದ ಜಾಗದಲ್ಲಿ ಬೆಳೆದು ಹೆಚ್ಚಿನ ಲಾಭವನ್ನು ಪಡೆಯುವ ಕೃಷಿ ಇದಾಗಿದೆ.

ಈ ಅಣಬೆ ಕೃಷಿಯನ್ನು ದೊಡ್ಡ ದೊಡ್ಡ ಒಳಾಂಗಣ ಸಾಕಣಿ ಕೇಂದ್ರಗಳಿಂದ ಹಿಡಿದು  ಸಣ್ಣ ಸಣ್ಣ ಮನೆಗಳು ಮತ್ತು ಉದ್ಯಾನಗಳಲ್ಲಿ ಸಣ್ಣ ಪ್ರಮಾಣದ ಕಾರ್ಯಾಚರಣೆಗಳವರೆಗೆ ಇದರ ಪ್ರಸಿದ್ಧತೆ ಹಬ್ಬಿದೆ. ಅಣಬೆಯನ್ನು ಊಟಕ್ಕೆ ಮಾತ್ರ ಬಳಸದೆ ಇದರ ಒಂದು ಪ್ರಯೋಜನವು ಔಷಧಿಗಳಿಗೂ ಕೂಡ ಬಳಸುತ್ತಿದ್ದಾರೆ.  ಇದರ ಪ್ರಯೋಜನವು ಪಾಕ ಶಾಲೆಯ ಬಳಕೆಯ ಮಾತ್ರ ಆಗದೆ ಇದರ ಜೊತೆಗೆ ಔಷಧದಲ್ಲಿ ಕೂಡ ಬಳಸುತ್ತಿದ್ದಾರೆ ಎಂಬುದು ಗಮನಾರ್ಹ ವಿಷಯ.

ಇದರ ಒಂದು ಲಾಭವನ್ನು ತಿಳಿದುಕೊಳ್ಳುತ್ತಿದ್ದ ಅನೇಕ ಜನರು ಹೆಚ್ಚಾಗುತ್ತಿದ್ದಂತೆ ಮುಂಬರುವ ದಿನಗಳಲ್ಲಿ ಈ ಒಂದು ಅಣಬೆ ಕೃಷಿಯು ಪ್ರಪಂಚನಾದ್ಯಂತ ಒಂದು ಉದ್ಯಮವಾಗಿ ಬೆಳೆಯಲಿದೆ.

ಅಣಬೆ ಕೃಷಿಯ ಲಾಭಗಳು : ಅಣಬೆ ಕೃಷಿಯ ಲಾಭಗಳನ್ನು ನೋಡುವುದಾದರೆ, ಹೇಳಿದರೆ ನೀವು ಅಚ್ಚರಿ ಪಡುವುದುಂಟು. ಅಣಬೆ ಕೃಷಿಯಲ್ಲಿ ಲಾಭಗಳು ವಿಶ್ವ ವ್ಯಾಪಕವಾಗಿ ಹರಡಿದ್ದು ಅವುಗಳಲ್ಲಿ ಕೆಲವೊಂದಿಷ್ಟನ್ನು ನಾವು ಈ ಕೆಳಗೆ ನೀಡಿದ್ದೇವೆ.

ಅಣಬೆ ಕೃಷಿಯು ಅಣಬೆ ಬೇಸಾಯವು ಹಲವಾರು ಪ್ರಯೋಜನಗಳನ್ನು ಹೊಂದಿದ್ದು ಇವುಗಳಲ್ಲಿ ಮೊದಲನೆಯದು

1. ಹೆಚ್ಚಿನ ಇಳುವರಿ:

ಅಣಬೆ ಕೃಷಿಯು ಇತರೆ ಕೃಷಿಗಳಿಗೆ ಹೋಲಿಸಿದರೆ ಹೆಚ್ಚಿನ ಲಾಭದಾಯಕ ಮತ್ತು ಹೆಚ್ಚು ಇಳುವರಿ ಹೊಂದಿರುವ ಕೃಷಿಯಾಗಿದೆ. ಅದಕ್ಕೆ ಎಂದು ಹೇಳುವುದಾದರೆ ನೀವು ಒಂದು ಎಕರೆ ಹತ್ತಿ ಅಥವಾ ಗೊಂಜಾಳ ಬೆಳೆಯುವ ರೊಕ್ಕದಲ್ಲಿ ಕೇವಲ ಸಣ್ಣ ಜಾಗದಲ್ಲಿ ಮಾತ್ರ ಅಷ್ಟೇ ದುಡ್ಡನ್ನು ನೀವು ಅಣಬೆ ಕೃಷಿಯಲ್ಲಿ ಗಳಿಸಬಹುದು. ಒಂದು ಸಣ್ಣ ಜಾಗದಲ್ಲಿ ನೀವು ಅತ್ಯಂತ ನಿಷ್ಠೆಯಿಂದ ಅಣಬೆ ಕೃಷಿಯನ್ನು ಮಾಡಿದರೆ ಗಮನಾರ್ಹ ಪ್ರಮಾಣದ ಅಣಬೆಗಳನ್ನು ಬೆಳೆಯಬಹುದು. ಅಣಬೆ ಕೃಷಿಯಲ್ಲಿ ಲಾಭಗಳು ಮಾತ್ರವಲ್ಲದೆ ಅನೇಕ ಸವಾಲುಗಳು ಕೂಡ ಇದ್ದು ಅವುಗಳನ್ನು ಲೇಖನದ ಮುಂದಿನ ಭಾಗದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ.

2. ಕಡಿಮೆ ಬಂಡವಾಳ ಹೂಡಿಕೆ, ಹೆಚ್ಚಿನ ಲಾಭ:

ನೀವು ಇತರೆ ಕೃಷಿಗಳನ್ನು ಬೆಳೆಯಲು ಹೆಚ್ಚಿನ ಬಂಡವಾಳ ಹೂಡಿಕೆಯ ಅವಶ್ಯಕತೆ ಇರುತ್ತದೆ. ಹೆಚ್ಚಿನ ಬಂಡವಾಳ ಹೂಡಿಕೆ ಮಾಡಿದರು ಕೂಡ ನೀವು ಹೆಚ್ಚಿನ ಲಾಭ ಪಡೆಯಲು ಸಾಧ್ಯವಿರುವುದಿಲ್ಲ.

ಆದರೆ ಈ ಒಂದು ಅಣಬೆ ಕೃಷಿಯಲ್ಲಿ ನೀವು ಕಡಿಮೆ ಬಂಡವಾಳ ಹೂಡಿಕೆಯ ಜೊತೆಗೆ ಹೆಚ್ಚಿನ ಲಾಭ ಪಡೆಯುವುದು ಅಣಬೆ ಕೃಷಿಯಲ್ಲಿ ಸಾಧ್ಯವಿದೆ. ಏಕೆಂದರೆ ಅಣಬೆ ಕೃಷಿಯನ್ನು ಬೆಳೆಯಲು ಬೇಕಾಗಿರುವ ಮೂಲಸೌಕರ್ಯಗಳು ಸರಳ ಮತ್ತು ಅಗ್ಗವಾಗಿವೆ. ಆದ್ದರಿಂದ ನೀವು ಸಣ್ಣ ಬಂಡವಾಳದಲ್ಲಿ ಒಂದು ಕೃಷಿಯನ್ನು ಮಾಡಲು ಇಚ್ಚಿಸಿದ್ದರೆ ಈ ಅಣಬೆ ಕೃಷಿಯು ನಿಮಗೆ ಹೇಳಿ ಮಾಡಿಸಿದಂತಿದೆ. ಒಂದು ಎಕರೆ ಹತ್ತಿಯನ್ನು ಬೆಳೆಯುವ ಅಥವಾ ಇತರೆ ಬೆಳೆಗಳನ್ನು ಬೆಳೆಯುವ ರೊಕ್ಕದಲ್ಲಿ ಅಣಬೆ ಕೃಷಿಯನ್ನು ಬೆಳೆದರೆ ಅದಕ್ಕಿಂತ ಎಷ್ಟೋ ಪಟ್ಟು ಲಾಭವನ್ನು ಈ ಅಣಬೆ ಕೃಷಿಯಲ್ಲಿ ನೀವು ಗಳಿಸಬಹುದಾಗಿದೆ.

3. ಸಣ್ಣ ಉತ್ಪಾದನಾ ಚಕ್ರ :

ಇತರೆ ಬೆಳೆಗಳನ್ನು ನೀವು ಬೆಳೆಯಲು ಅನೇಕ ವಾರಗಳಿಂದ ಹಿಡಿದು ತಿಂಗಳುಗಳ ವರೆಗೆ ಕಾಯಬೇಕಾಗುತ್ತದೆ. ಆದರೆ, ಅಣಬೆ ಕೃಷಿಯು ಸಣ್ಣ ಉತ್ಪಾದನಾ ಚಕ್ರವನ್ನು ಹೊಂದಿದ್ದು, ಸಣ್ಣ ಉತ್ಪಾದನಾ ಚಕ್ರ ಇದರ ಅರ್ಥವೇನೆಂದರೆ ಕೆಲವೇ ಕೆಲವು ವಾರಗಳಲ್ಲಿ ಅಣಬೆಗಳನ್ನು ಬೆಳೆದು ಕೊಯ್ಲು ಮಾಡಿ ಅಣಬೆಯನ್ನು ಪಡೆದು ಅಣಬೆ ಮಾರಬಹುದು. ಅಂದರೆ ಒಂದು ವರ್ಷಗಳ ಅವಧಿಯವರೆಗೆ ನೀವು ಬಹು ಕೊಯ್ಲುಗಳನ್ನು ಈ ಅಣಬೆ ಕೃಷಿಯಲ್ಲಿ ಪಡೆಯಬಹುದಾಗಿದೆ.

ಅಣಬೆ ಕೃಷಿಯು ಅತ್ಯಂತ ಲಾಭದಾಯಕವಾಗಿದ್ದು ನಿಮ್ಮ ಸಮಯವನ್ನು ಹಾಗೂ ನಿಮ್ಮ ಬಂಡವಾಳ ಹೂಡಿಕೆಯನ್ನು ಕೂಡ ಉಳಿಸುತ್ತದೆ. ಅದೇ ರೀತಿ ನಿಮ್ಮ ಹೂಡಿಕೆಗೆ ಮತ್ತು ನಿಮ್ಮ ಸಮಯಕ್ಕೆ ತಕ್ಕಂತೆ ಇದು ಲಾಭವನ್ನು ಕೂಡ ನೀಡಲಿದೆ.  ಅಣಬೆ ಕೃಷಿ ಇಷ್ಟೆಲ್ಲಾ ಲಾಭಗಳನ್ನು ಹೊಂದಿದ್ದು ನೀವು ಕೃಷಿಯನ್ನು ಆರಂಭಿಸುವುದು ಆದರೆ ಅಣಬೆ ಕೃಷಿಗೆ ನಿಮಗೆ ಹೇಳಿ ಮಾಡಿಸಿದಂತಾಗಿದೆ. ಆದ್ದರಿಂದ ಅಣಬೆ ಕೃಷಿಯನ್ನು ಈಗಲೇ ಬೆಳೆಯಲು ಆರಂಭಿಸಿ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭವನ್ನು ಪಡೆಯಿರಿ.

4. ಮಾರುಕಟ್ಟೆಯ ಬೇಡಿಕೆ :

ಅಣಬೆ ಕೃಷಿಯು ಬೇರೆ ಕೃಷಿಗಳಿಗೆ ಹೋಲಿಸಿದರೆ ಹೆಚ್ಚಿನ ಮಾರುಕಟ್ಟೆ ಬೇಡಿಕೆ ಹೊಂದಿದ್ದು ಜಾಗತಿಕವಾಗಿ ಇತರ ಒಂದು ಬೇಡಿಕೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಏಕೆಂದರೆ ನಿಮಗೆ ಗೊತ್ತಿರುವ ಹಾಗೆ ಹಣಬೆಯಲ್ಲಿ ಅನೇಕ ಪೋಷಕಾಂಶಗಳು ಮತ್ತು ಆರೋಗ್ಯಕರ ಪ್ರಯೋಜನವಾದ ಪ್ರೋಟೀನ್ಸ್ ಗಳು ಇದರಲ್ಲಿ ಲಭ್ಯವಿದ್ದು ಆರೋಗ್ಯ ಸರಿಯಾಗಿಟ್ಟುಕೊಳ್ಳಲು ಅನೇಕ ಜನರು ಅಣಬೆಯನ್ನು ಬಳಸುತ್ತಿದ್ದಾರೆ.

ಆದ್ದರಿಂದ ದಿನೇ ದಿನೇ ಇದರ ಒಂದು ಬೇಡಿಕೆ ಹೆಚ್ಚಾಗುತ್ತದೆ. ಬೇಡಿಕೆ ಹೆಚ್ಚಾದಂತೆ ಇದರ ಮೌಲ್ಯಗಳು ಕೂಡ ಹೆಚ್ಚಾಗುತ್ತದೆ. ಇತರೆ ಕೃಷಿಗಳಿಗೆ ಹೋಲಿಸಿದರೆ ಅಣಬೆ ಕೃಷಿ ಒಂದು ಬೆಸ್ಟ್ ಕೃಷಿ ಎಂದು ಕರೆದರೆ ತಪ್ಪಾಗಲಾರದು. ಅದೇ ರೀತಿ ಅಣಬೆಯು ಒಂದು ತಾಜಾ ಮತ್ತು ಸಂಸ್ಕರಿಸಿದ ಆಹಾರಕ್ಕಾಗಿ ಪ್ರಪಂಚಿನ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಇದರ ಒಂದು ರುಚಿಯು ಬೆಸ್ಟ್ ರುಚಿಯಾಗಿದ್ದು, ಅನೇಕ ಜನರು ಆಹಾರಕ್ಕಾಗಿ ಇದನ್ನು ಮೊದಲನೆಯ ಆಯ್ಕೆಯಾಗಿ ಪರಿಗಣಿಸುತ್ತಿದ್ದಾರೆ. ಆದ್ದರಿಂದ ಅಣಬೆ ಕೃಷಿಯು ಬೇರೆ ಕೃಷಿಗಳಿಗೆ ಹೋಲಿಸಿದರೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.

5. ಅಣಬೆಯಲ್ಲಿರುವ ಪೌಷ್ಟಿಕಾಂಶ ಮೌಲ್ಯಗಳು :

ಅಣಬೆಯು ಕಡಿಮೆ ಮೊತ್ತದ ಕ್ಯಾಲೋರಿಯನ್ನು ಹೊಂದಿದ್ದು ಹೆಚ್ಚಿನ ಮೊತ್ತದಲ್ಲಿ ಪ್ರೋಟೀನ್ ವಿಟಮಿನ್ ಡಿ ಪೊಟ್ಯಾಶಿಯಂ ಮತ್ತು ತಾಮ್ರದಂತಹ ಜೀವ ಸತ್ವಗಳನ್ನು ಹೊಂದಿದೆ. ಇದು ಹೊಂದಿರುವ ಹೆಚ್ಚಿನ ಮೊತ್ತದ ಪ್ರೊಟೀನ್ ವಿಟಮಿನ್ ಡಿ ಪೊಟ್ಯಾಶಿಯಂ ತಾಮ್ರದಂತಹ ಜೀವ ಸತ್ವಗಳು ಅಣಬೆಯಲ್ಲಿ ಸಮೃದ್ಧವಾಗಿವೆ. ಈ ತರಹದ ಹೆಚ್ಚಿನ ಪೌಷ್ಟಿಕಾಂಶ ಮೌಲ್ಯವನ್ನು ಹೊಂದಿರುವ ಅಣಬೆಯು ಆಂಟಿ ಆಕ್ಸಿಡೆಂಟ್ ಹೊಂದಿರುವ ಕಾರಣದಿಂದಾಗಿ ಮಾನವನ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಅಂದರೆ ಇಮುನಿಟಿ ಪವರ್ ( Immunity power ) ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ.

ಇದರ ಒಂದು ಪೌಷ್ಟಿಕಾಂಶದ ಮೌಲ್ಯವನ್ನು ತಿಳಿದ ಅನೇಕ ಜನರು ತಮ್ಮ ದಿನ ನಿತ್ಯದ ಆಹಾರಕ್ಕಾಗಿ ಅಣಬೆಯನ್ನೇ ಬಳಸುತ್ತಾರೆ ಎಂಬುದು ಗಮನಾರ್ಹ ವಿಷಯ.  ಆದ್ದರಿಂದ ಅಣಬೆ ಕೃಷಿಯು ಯಾವಾಗಲೂ ಉತ್ತಮ ಬೇಡಿಕೆಯನ್ನು ಹೊಂದಿದ್ದು ಅಂದರೆ ಯಾವಾಗ ಗ್ರೀನ್ ಡಿಮಾಂಡೇಬಲ್ ಫಾರ್ಮಿಂಗ್ ಎಂದು ಕೂಡ ಅಣಬೆ ಕೃಷಿಯನ್ನು ನಾವು ಕರೆಯಬಹುದು.

  ಅಣಬೆ ಕೃಷಿಯು ಇಷ್ಟೆಲ್ಲ ಲಾಭಗಳನ್ನು ಹೊಂದಿದ್ದು ನೀವು ಸರಿಯಾದ ಮಾರ್ಗವನ್ನು ಅನುಸರಿಸಿ ಅಣಬೆ ಕೃಷಿಯನ್ನು ಆರಂಭಿಸಿದರೆ ಆರ್ಥಿಕವಾಗಿ ಸದೃಢ ರಾಗುವುದಂತೂ ಖಚಿತ. ಅಣಬೆ ಕೃಷಿಯಲ್ಲಿ ಒಬ್ಬ ರೈತನು ಪಡೆಯುವ ಲಾಭವೂ ಅವನು ಬೆಳೆಯುವ ಉತ್ಪಾದನೆಯ ಪ್ರಮಾಣ ಮೇಲೆ ಅವಲಂಬಿಸಿರುತ್ತದೆ. ಸಣ್ಣ ಪ್ರಮಾಣದ ಕೃಷಿಯು ಲಾಭದಾಯಕವಾಗಿರಬಹುದು ಆದರೆ ನೀವು ಅದೇ ಅಣಬೆ ಕೃಷಿಯನ್ನು ಒಂದು ದೊಡ್ಡ ಪ್ರಮಾಣದಲ್ಲಿ ಉದ್ಯಮವಾಗಿ ಆರಂಭಿಸಿದರೆ ಆರ್ಥಿಕತೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯುವುದು ಖಚಿತವಾಗಿದೆ.

ಒಟ್ಟಾರೆ ಅಣಬೆ ಕೃಷಿಯ ಬಗ್ಗೆ ಹೇಳುವುದಾದರೆ ಇದು ಒಂದು ಲಾಭದಾಯಕ ಮತ್ತು ಸುಸ್ಥಿರ ಬೆಳೆಯಾಗಿದ್ದು ಇದನ್ನು ನೀವು ಸಣ್ಣ ಪ್ರಮಾಣದಲ್ಲಿ ಆರಂಭಿಸಿ ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೂಡ ಆರಂಭಿಸಬಹುದಾಗಿದೆ.

ಅಣಬೆ ಕೃಷಿಗೆ ಬೇಡಿಕೆ ಇದೆ ಎಂಬ ಕಾರಣದಿಂದ ನೀವು ಕೆಮಿಕಲ್ಸ್ ಅಥವಾ ಫರ್ಟಿಲೈಸರ್ಸ್ ಗಳನ್ನು ಬಳಸಿ ಕೃಷಿಯನ್ನು ಬೆಳೆಯುವುದಾದರೆ ಅದಕ್ಕೆ ಬೇಡಿಕೆ ಕಡಿಮೆ ಬರಬಹುದು. ಏಕೆಂದರೆ ಇಂದಿನ ಕಾಲದಲ್ಲಿ ಅನೇಕ ಜನರು ಬೇಡಿಕೆ ಇಡುವ ಕೃಷಿ ಎಂದರೆ ಸಾವಯುವ ಕೃಷಿ. ಅಂದರೆ ಯಾವುದೇ ಒಂದು ಉತ್ಪಾದನೆ ನೈಸರ್ಗಿಕವಾಗಿರಬೇಕು ಅಥವಾ ಸಾವಯುವ ಯಾಗಿರಬೇಕು ಎಂದು. ಆದ್ದರಿಂದ ನೀವು ಬೆಳೆಯುವ ಸಮಯದಲ್ಲಿ ಅಥವಾ ಕೃಷಿ ಮಾಡುವ ಸಮಯದಲ್ಲಿ ಪ್ರಾಮಾಣಿಕತೆಯಿಂದ ಸಾವಯುವವಾಗಿ ಬೆಳೆದು ಲಾಭವನ್ನು ಪಡೆಯಿರಿ. ಈ ಒಂದು ಕೃಷಿ ಒಬ್ಬ ರೈತನು ಇದನ್ನು ಬೆಳೆದು ದೊಡ್ಡ ಉದ್ಯಮಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ ಉದ್ಯಮವನ್ನು ಹುಡುಕುತ್ತಿರುವ ಅನೇಕ ಉದ್ಯಮಿಗಳಿಗೆ ಅಣಬೆ ಕೃಷಿ ಒಂದು ಅತ್ಯುತ್ತಮ ಆಯ್ಕೆಯಾಗಿದೆ.

ಇಲ್ಲಿಯವರೆಗೆ ನಾವು ಅಣಬೆ ಕೃಷಿಯ ಲಾಭಗಳನ್ನು ತಿಳಿದುಕೊಂಡೆವು. ಆದರೆ ಯಾವುದೇ ಕೃಷಿಯನ್ನು ನಾವು ಗಣನೆಗೆ ತೆಗೆದುಕೊಂಡರೆ ಅದರಲ್ಲಿ ಎಷ್ಟು ಲಾಭವಿರುತ್ತದೆಯೋ ಎಂದು ನೋಡುವುದಾದರೆ ಅದು ಕೃಷಿ ಮಾಡಲು ಸಮಗ್ರ ಮಾಹಿತಿ ನೀಡುವುದಿಲ್ಲ.

ಏಕೆಂದರೆ ನಾವು ಏನೇ ಆರಂಭ ಮಾಡಬೇಕಾದರೂ ಅದರ ಲಾಭವನ್ನು ಮಾತ್ರ ತಿಳಿದುಕೊಳ್ಳದೆ ಅದರಲ್ಲಿರುವ ಸವಾಲುಗಳನ್ನು ತೊಂದರೆಗಳೇನು ಎಂಬುದರ ಸಮಗ್ರ ಮಾಹಿತಿಯನ್ನು ಕೂಡ ತಿಳಿಯುವುದು ಕೊಳ್ಳುವುದು ಅತ್ಯಂತ ಉಪಕಾರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

ಅಣಬೆ ಕೃಷಿಯನ್ನು ಬೆಳೆಯಲು ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ ಕೂಡ ಇತ್ಯಾದಿ ಸವಾಲುಗಳನ್ನು ಕೂಡ ಹೊಂದಿದೆ. ಏಕೆಂದರೆ ಪ್ರತಿಯೊಂದು ಬೆಳೆಗಳಲ್ಲಿ ಕೂಡ ರೋಗಗಳ ನಿವಾರಣೆ ಕೀಟಗಳ ಕಾಟ ಹವಾಮಾನದಿಂದ ಬೆಳೆಗಳ ನಾಶ ಈ ಹತ್ತು ಹಲವಾರು ತೊಂದರೆಗಳಿದ್ದು ಅವುಗಳ ಒಂದು ಸಮಗ್ರ ಮಾಹಿತಿಯನ್ನು ಕೆಳಗಿನ ಅಂಕಣದಲ್ಲಿ ತಿಳಿದುಕೊಳ್ಳೋಣ.

ಮೊದಲಿಗೆ ನಾವು ಅಣಬೆ ಕೃಷಿಯಲ್ಲಿ ಹೆಚ್ಚಾಗಿ ಕಾಡುತ್ತಿರುವ ಒಂದು ಸವಾಲು ಎಂದರೆ ಕೀಟ ಮತ್ತು ರೋಗ ನಿಯಂತ್ರಣ. ಕೀಟ ಮತ್ತು ರೋಗ ನಿಯಂತ್ರಣವು ಅಣಬೆ ಕೃಷಿಗೆ ಮಾತ್ರ ಸೀಮಿತವಾಗದೆ ಹೆಚ್ಚು ಕಡಿಮೆ ಎಲ್ಲಾ ಕೃಷಿಗಳಲ್ಲಿಯೂ ಸಹ ಈ ರೋಗ ಮತ್ತು ಕೀಟಗಳ ಕಾಟ ಇದ್ದೇ ಇದೆ. ಇವುಗಳಿಗೆ ಅನೇಕ ಪರಿಹಾರಗಳು ಕೂಡ ಇವೆ. ಅಣಬೆ ಕೃಷಿಯಲ್ಲಿ ಹೆಚ್ಚಾಗಿ ಕಾಡುವ ತೊಂದರೆಯೆಂದರೆ ಕೀಟ ಮತ್ತು ರೋಗಗಳ ಕಾಟ.

ಅಣಬೆ ಕೃಷಿಯನ್ನು ಮಾಡುವುದಂದರೆ ಕೀಟ ಮತ್ತು ರೋಗಗಳ ನಿಯಂತ್ರಣ ಹೆಚ್ಚಿನ ಮಹತ್ವ ಇದೆ. ಅಣಬೆ ಕೃಷಿಯನ್ನು ಮಾಡುವುದಾದರೆ ಕಟ್ಟುನಿಟ್ಟಾದ ನೈರ್ಮಲ್ಯ ಅಭ್ಯಾಸಗಳನ್ನು ಪಾಲಿಸುವುದು ಕಡ್ಡಾಯ. ಏಕೆಂದರೆ ಕೀಟ ಮತ್ತು ರೋಗ ನಿಯಂತ್ರಣವು ಅಣಬೆ ಕೃಷಿಯಿಂದ ಬರುವ ಲಾಭದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ರೋಗ ಮತ್ತು ಕೀಟಗಳ ಕಾಟವು ಅಣಬೆ ಕೃಷಿಯ ಇಳುವರಿ ಮೇಲೆ ಹೆಚ್ಚಿನ ಪರಿಣಾಮ ಬೀರುವುದು ಖಂಡಿತ.

ಆದ್ದರಿಂದ ನೀವು ಅಣಬೆ ಕೃಷಿಯನ್ನು ಮಾಡುವಾಗ ಸಮಗ್ರವಾಗಿ ಅದರ ಬಗ್ಗೆ ಪರಿಶೀಲನೆ ನಡೆಸಿ ಅರ್ಹ ತಜ್ಞರಿಂದ ಇದರ ಬಗ್ಗೆ ಸಂಪೂರ್ಣ ಸಮಗ್ರ ಮಾಹಿತಿಯನ್ನು ಪಡೆದುಕೊಂಡು ನಂತರ ಅಣಬೆ ಕೃಷಿಯನ್ನು ಆರಂಭ ಮಾಡುವುದು ಹೆಚ್ಚು ಉತ್ತಮ.

ನಂತರದಲ್ಲಿ ಅಣಬೆ ಕೃಷಿಯಲ್ಲಿ ಹೆಚ್ಚಿನ ಸವಾಲು ಎಂದು ನೋಡುವುದಾದರೆ ಹವಾಮಾನ ಬದಲಾವಣೆ ಅಥವಾ ಹವಮಾನ ನಿಯಂತ್ರಣ. ಪ್ರತಿಯೊಂದು ಕೃಷಿಯನ್ನು ಮಾಡಲು ಪ್ರತಿಯೊಂದು ಬೆಳೆಗಳಿಗೆ ತನ್ನದೇ ಆದ ಒಂದು ತೇವಾಂಶ ತಾಪಮಾನದ ಅವಶ್ಯಕತೆ ಇರುತ್ತದೆ. ಪ್ರತಿ ಬೆಳೆಗಳು ಕೂಡ ತಮ್ಮದೇ ಆದ ಒಂದು ತಾಪಮಾನದಲ್ಲಿ ಬೆಳೆಯುತ್ತವೆ.

ಆದ್ದರಿಂದ ಅಣಬೆ ಕೃಷಿಯನ್ನು ಆರಂಭ ಮಾಡುವಾಗ ಹವಾಮಾನ ನಿಯಂತ್ರಣದ ಬಗ್ಗೆ ಮತ್ತು ಅಣಬೆ ಕೃಷಿಯು ಯಾವ ಒಂದು ತೇವಾಂಶ ಅಥವಾ ತಾಪಮಾನಕ್ಕೆ ಅಡ್ಜಸ್ಟ್ ಆಗುತ್ತದೆಯೋ ಎಂದು ಸಮಗ್ರವಾದ ಮಾಹಿತಿ ತಿಳಿದುಕೊಳ್ಳುವುದು ಬಹು ಅವಶ್ಯಕವಾಗಿದೆ. ನಂತರದಲ್ಲಿ ಕಾಡುವ ಒಂದು ಸವಾಲೆಂದರೆ, ಕಾರ್ಮಿಕರ ತೀವ್ರ. ಅಣಬೆ ಕೃಷಿಯನ್ನು ಆರಂಭ ಮಾಡಿದ ದಿನದಿಂದ ಹಿಡಿದು ಕೊಯ್ಲು ಮಾಡುವವರೆಗೂ ಗಮನಾರ್ಹ ಕೆಲಸ ಈ ಕೃಷಿಯಲ್ಲಿ ಕೂಡ ಇರುತ್ತದೆ.

ಇಂತಹ ಕೆಲಸವಿರುವ ಸಮಯದಲ್ಲಿ ಅಥವಾ ಸಮಯಕ್ಕೆ ಸರಿಯಾಗಿ ಕೆಲಸವಿರುವ ಸಮಯದಲ್ಲಿ ನಿಮಗೆ ಕಾರ್ಮಿಕರ ಸಮಸ್ಯೆ ಎದುರಾಗಬಹುದು. ಆದ್ದರಿಂದ ನೀವು ಕಾರ್ಮಿಕರನ್ನು ನಿರ್ವಹಣೆ ಮಾಡುವುದು ಅಣಬೆ ಕೃಷಿಯಲ್ಲಿ ಬಹು ಅವಶ್ಯಕವಾಗಿದೆ. ಉದಾಹರಣೆಯನ್ನು ನೋಡುವುದಾದರೆ ಕೊಯ್ಲು ಮಾಡುವ ಸಮಯದಲ್ಲಿ ನಿಮಗೆ ಕಾರ್ಮಿಕರ ಸಿಗದೇ ಹೋದರೆ ಮುಂದಿನ ದಿನ ಹವಾಮಾನ ಬದಲಾವಣೆಗಳಿಂದ ಅಥವಾ ಮಳೆಯಿಂದ ನಿಮ್ಮ ಅಣಬೆಯು ನಾಶವಾಗುವುದು ಕೆಲವೊಂದಿಷ್ಟು ಸಾಧ್ಯತೆಗಳಿರುತ್ತವೆ.

ಆದ್ದರಿಂದ ನೀವೇನು ಮಾಡಬೇಕೆಂದರೆ ಕೆಲವೊಂದಿಷ್ಟು ಕಾಯಂ ಕೂಲಿ ಕಾರ್ಮಿಕರನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದು ಅವಶ್ಯಕ. ಕೂಲಿ ಕಾರ್ಮಿಕರ ನಿಮ್ಮ ಕೆಲಸಕ್ಕೆ ಯಾವಾಗಲೂ ಬರಬೇಕೆಂದರೆ ಏನು ಮಾಡಬೇಕೆಂದರೆ ಅವರಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡುವುದು ಅವರನ್ನು ಕೂಡ ಕುಟುಂಬದ ಸದಸ್ಯರೆಂದು ಭಾವಿಸುವುದು ಅವರನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದಕ್ಕೆ ಸಹಾಯ ಮಾಡುವುದು.

ಏಕೆಂದರೆ ಪ್ರತಿಯೊಬ್ಬರೂ ಮಾಡುವ ಕೆಲಸಕ್ಕೆ ಅದರದೇ ಆದ ಒಂದು ಗೌರವವಿರುತ್ತದೆ. ಆದ್ದರಿಂದ ಅವರ ಕೆಲಸ ಮಾಡಿದ ನಂತರ ತಡ ಮಾಡದೆ ಅವರಿಗೆ ಸಲ್ಲಬೇಕಾದ ಕೂಲಿ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಅವಧಿಯ ಒಳಗೆ ಅವರಿಗೆ ಹಣವನ್ನು ನೀಡಿ ಅವರನ್ನು ಖುಷಿಪಡಿಸಿ. ಇನ್ನೊಂದು ವಿಷಯವೇನೆಂದರೆ ಬೇರೆಯವರು ಪ್ರತಿ ದಿನಕ್ಕೆ 300 ರೂಪಾಯಿ ನೀಡುತ್ತಿದ್ದರೆ ನೀವು ಎರಡು ನೂರು ರೂಪಾಯಿಯನ್ನು ನೀಡಿದರೆ ಅವರ ಮುಂದಿನ ನಿಮ್ಮ ಕೆಲಸಕ್ಕೆ ಬರುವುದಂತೂ ಸಾಧ್ಯವೇ ಇರುವುದಿಲ್ಲ.

ಆದ್ದರಿಂದ ನೀವೇನು ಮಾಡಬೇಕೆಂದರೆ ಬೇರೆಯವರು ನೀಡುವ ಒಂದು ದರದಲ್ಲಿ ಅವರಿಗೆ ಕೂಲಿ ಮೊತ್ತವನ್ನು ನೀಡಬೇಕಾಗುವುದು ಅವಶ್ಯಕ.
ನಂತರದಲ್ಲಿ ಅಣಬೆ ಕೃಷಿಯಲ್ಲಿ ಮತ್ತೊಂದು ಎದುರಿಸಬೇಕಾದ ಸವಾಲ್ ಎಂದರೆ ಅಣಬೆಯ ಬೆಲೆ ಏರಿಳಿತ. ಪ್ರತಿಯೊಂದು ಉತ್ಪನ್ನಗಳ ಬೆಲೆಯೂ ಮಾರುಕಟ್ಟೆಯ ಪೂರೈಕೆ ಮತ್ತು ಬೇಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ.

ಯಾವಾಗ ಮಾರುಕಟ್ಟೆಯಲ್ಲಿ ಪೊರೈಕೆ ಕಡಿಮೆ ಇರುತ್ತದೆಯೋ ಅಂದು ಉತ್ಪನ್ನಗಳ ಬೇಡಿಕೆ ಹೆಚ್ಚಿರುತ್ತದೆ. ಆದ್ದರಿಂದ ನಾವು ಕೃಷಿಯನ್ನು ಮಾಡುವಾಗ ಮಾರುಕಟ್ಟೆಯ ಬೇಡಿಕೆಗೆ ಅನುಸಾರವಾಗಿ ಕೃಷಿ ಮಾಡಬೇಕು. ನೀವು ಏನು ಮಾಡಬಹುದು ಎಂದರೆ ಅಣಬೆಯನ್ನು ಕೊಯ್ಲು ಮಾಡಿದ ನಂತರ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದರೆ ಅಥವಾ ಅಣಬೆಯ ಬೆಲೆ ಹೆಚ್ಚು ಇದ್ದರೆ ಮಾತ್ರ ಮಾರಾಟ ಮಾಡಿ.

ಒಂದು ವೇಳೆ ಬೇಡಿಕೆ ಕಡಿಮೆ ಇದ್ದು ಅದರ ಬೆಲೆ ಕಡಿಮೆ ಇದ್ದರೆ, ನೀವು ಸಮರ್ಪಕವಾದ ಅಣಬೆಯನ್ನು ಶೇಖರಿಡಿಸಲು ಅಥವಾ ಸಂಸ್ಕರಣೆ ಮಾಡಲು ಸರಿಯಾದ ಮಾರ್ಗವನ್ನು ಕಂಡುಹಿಡಿದುಕೊಂಡು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ನಂತರ ನೀವು ಹೆಚ್ಚಿನ ಲಾಭದಲ್ಲಿ ಮಾರಾಟ ಮಾಡಬಹುದು.

ಅಣಬೆಯನ್ನು ಸಂಸ್ಕರಿಸುವ ಅನೇಕ ವಿಧಾನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದನ್ನು ಅರಿತ ಪರಿಣಿತರಿಂದ ನೀವು ಇದರ ಬಗ್ಗೆ ಸಂಪೂರ್ಣವಾದ ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಅಣಬೆ ಕೃಷಿಯಲ್ಲಿ ಅನುಸರಿಸಬಹುದಾಗಿದೆ.

ಇಷ್ಟೆಲ್ಲ ಮಾಹಿತಿಯನ್ನು ತಿಳಿದುಕೊಂಡ ನಂತರ ಇದನ್ನು ಪ್ರತಿಯೊಬ್ಬ ಮಾನವನ್ನು ತಿನ್ನುವುದರಿಂದ ಅನೇಕ ಆರೋಗ್ಯ ಸಹಾಯವನ್ನು ಹೊಂದಿದ್ದು ಅಣೆಬೆಯು ಪೋಷಕಾಂಶಗಳಲ್ಲಿ ಬಹಳ ಸಮೃದ್ಧವಾದ ಬೆಳೆಯಾಗಿದೆ. ಅಣಬೆಯು ವಿಟಮಿನ್ ಬಿ ಮತ್ತು ಡಿ, ತಾಮ್ರ ಪೊಟ್ಯಾಶಿಯಂ ಮತ್ತು ಸೆಲೆನಿಯಂ ಗಳಂತಹ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಉತ್ತಮ ಮೂಲವಾಗಿದೆ.

ಇದನ್ನು ತಿನ್ನುವುದರಿಂದ ಮಾನವನ ಪ್ರತಿರಕ್ಷಣಾ ವ್ಯವಸ್ಥೆಯು ಉತ್ತೇಜಿಸುತ್ತದೆ ಹಾಗೂ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಈ ಎಲ್ಲಾ ಸಮಗ್ರವಾದ ಮಾಹಿತಿಯನ್ನು ತಿಳಿದುಕೊಂಡ ನಂತರ  ನಮಗೆ ತಿಳಿಯುವುದೇನೆಂದರೆ ಅಣಬೆ ಕೃಷಿ ಒಂದು ಉತ್ತಮ ಕೃಷಿಯಾಗಿದ್ದು ಇದನ್ನು ಉತ್ತಮ ಮಟ್ಟದಲ್ಲಿ ನೀವು ಬೆಳೆಯುವುದಾದರೆ ರೈತನು ಉದ್ಯಮಿಯಾಗುವುದಂತೂ ಖಂಡಿತ.

ಅಣಬೆ ಕೃಷಿಯಲ್ಲಿ  ಮತ್ತೊಂದು ಮುಖ್ಯವಾದ ವಿಚಾರವೇನೆಂದರೆ ಮಾರಾಟ ಮಾಡುವುದು. ಅಣಬೆಯನ್ನು ಬೆಳೆದ ನಂತರ ಮಾರಾಟ ಮಾಡಲು ನೀವು ನಿಮ್ಮದೇ ಅಣಬೆಯನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯುವುದು ಖಂಡಿತ.

ಮೌಲ್ಯವರ್ಧನೆ ಮಾಡುವುದರ ಜೊತೆಗೆ ಬೇರೆ ಬೇರೆ ಮಾರುಕಟ್ಟೆಯಲ್ಲಿ ಇದರ ಬೆಲೆಯನ್ನು ತಿಳಿದು, ಎಲ್ಲಿ ಇದರ ಲಾಭ ಹೆಚ್ಚಾಗಿದೆಯೋ ಅಂತಹ ಜಾಗದಲ್ಲಿ ನೀವು ಅಣಬೆಯನ್ನು ಮಾರಾಟ ಮಾಡಿದರೆ ಅಣಬೆ ಕೃಷಿ ಒಂದು ಉತ್ತಮ ಕೃಷಿಯಾಗಿ ಒಬ್ಬ ರೈತನನ್ನು ಉದ್ಯಮನಾಗಿ ಮಾಡುವುದು.

ಅಣಬೆ ಕೃಷಿಯ ಬಗ್ಗೆ ಇಷ್ಟೆಲ್ಲ ಸಮಗ್ರವಾದ ಮತ್ತು ಸಹಕಾರಿಯದ ಮಾಹಿತಿಯನ್ನು ತಿಳಿದುಕೊಂಡ ನಂತರ ನಮಗೆ ಕೊನೆಯದಾಗಿ ತಿಳಿಯುವುದೇನೆಂದರೆ ಅಣಬೆ ಕೃಷಿಯೊಂದು ಉತ್ತಮ ಮತ್ತು ಲಾಭದಾಯಕ ಕೃಷಿಯಾಗಿದೆ..

ಭಾರತ ದೇಶವು ಒಂದು ಕೃಷಿ ಪ್ರಧಾನತೀಶವಾಗಿದ್ದು ಇಲ್ಲಿ ಬಹುತೇಕವಾಗಿ ಅರವತ್ತು% ನಷ್ಟು ರೈತರು ಕೃಷಿ ಅವಲಂಬಿತರಾಗಿದ್ದಾರೆ. ಅದಕ್ಕೆ ಅಲ್ಲದೆ ಭಾರತದಿಂದ ಅತಿಹೆಚ್ಚಿನ ಕೃಷಿ ಧಾನ್ಯಗಳು ಹಾಗೆ ವಿವಿಧ ಪದಾರ್ಥಗಳು ಬೇರೆ ದೇಶಗಳಿಗೆ ರಕ್ತ ಆಗುತ್ತಿದ್ದು ಇದರಿಂದಾಗಿ ಭಾರತದ ದೇಶದಕೃಷಿ ಪ್ರಧಾನ ದೇಶವಾಗಿದೆ. ಅದಕ್ಕಾಗಿ ರೈತರಿಗೆ ಅತಿ ಹೆಚ್ಚಿನ ಲಾಭ ತೆಗೆದುಕೊಳ್ಳಲು ಇದೀಗ ಅಣಬೆ ಕೃಷಿಯು ಮಾರ್ಗವಾಗಿದ್ದು ಇದರಿಂದಾಗಿ ಕಡಿಮೆ ಜಾಗ ಬಳಸಿಕೊಂಡು ರೈತರು ಕೇವಲ ಮೂರರಿಂದ ನಾಲ್ಕು ತಿಂಗಳಲ್ಲಿ ಒಂದರಿಂದ ಎರಡು ಲಕ್ಷ ವರೆಗೂ ಲಾಭವನ್ನು ಪಡೆದುಕೊಳ್ಳಬಹುದು..

ಅದಕ್ಕಾಗಿ ಇತರರಿಗೂ ಈ ಅಳಬೆಕುಸಿಯ ಬಗ್ಗೆ ಮಾಹಿತಿಯನ್ನು ನೀಡಿ ರೈತರು ಲಾಭ ಪಡೆದುಕೊಳ್ಳುವಲ್ಲಿ ಸಫಲರಾಗಿ

Leave a Reply

Your email address will not be published. Required fields are marked *