18 May 2024

ಶೇರು ಮಾರುಕಟ್ಟೆಯ ಬಗ್ಗೆ ನಿಮಗೆಷ್ಟು ಗೊತ್ತು…! ಇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ದುಡ್ಡು ಮಾಡುವುದು ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…! ಷೇರು ಮಾರುಕಟ್ಟೆಯಲ್ಲಿ ಹಣ ಮಾಡುವವರಿಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ….!

ನಮಸ್ಕಾರ ಬಂಧುಗಳೇ.

ನಾವು ಪ್ರತಿನಿತ್ಯ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ರೈತರಿಗೆ ಮತ್ತು ಎಲ್ಲ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನು ನೀಡುತ್ತಿದ್ದ ಇಂದಿನ ಈ ಒಂದು ಅಂಕಣದಲ್ಲಿ ನಾವು ಷೇರು ಮಾರುಕಟ್ಟೆಯಿಂದ ಹಣ ಗಳಿಸುವುದು ಹೇಗೆ ಮತ್ತು ಶೇರು ಮಾರುಕಟ್ಟೆಯಲ್ಲಿ ಹಣ ಗಳಿಸುವ ಲಾಭಗಳು ಮತ್ತು ಹಣವನ್ನು ಹೂಡಿಕೆ ಮಾಡಲು ಬೇಕಾಗಿರುವ ಕೆಲವೊಂದಿಷ್ಟು ಮುಖ್ಯ ಸಲಹೆಗಳನ್ನು ನಾವು ಈ ಲೇಖನದಲ್ಲಿ ನಮ್ಮ ಎಲ್ಲಾ ಆತ್ಮೀಯ ಬಾಂಧವರಿಗೆ ನೀಡಲಿದ್ದೇವೆ.

ಆದ್ದರಿಂದ ನೀವು ಈ ಒಂದು ಮುಖ್ಯ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನ ಕೊನೆಯ ಭಾಗದವರೆಗೂ ಓದಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

ಮೊಟ್ಟ ಮೊದಲಿಗೆ ನಾವು ಷೇರು ಎಂದರೆ ಅಥವಾ stock market ಎಂದರೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

ಷೇರು ಎಂದರೆ ಒಂದು ಕಂಪನಿಯಲ್ಲಿ ಒಬ್ಬ ವ್ಯಕ್ತಿಯು ಖರೀದಿಸಬಹುದಾದ ಕಂಪನಿಯ ಒಂದು ತುಂಡು ಇದ್ದಂತೆ. ಉದಾಹರಣೆಗೆ ನಾವು ಹೇಳಬೇಕೆಂದರೆ ನೀವು ಒಂದು ಅಂಗಡಿಯನ್ನು ತೆರೆಯಲು ಇಚ್ಚಿಸುತ್ತೀರಿ ಆದರೆ ನಿಮ್ಮ ಬಳಿ ಅಂಗಡಿಯನ್ನು ತೆರೆಯುವಷ್ಟು ಸಾಕಷ್ಟು ಹಣವಿರುವುದಿಲ್ಲ. ಆದ್ದರಿಂದ ನೀವೇನು ಮಾಡುತ್ತೀರಿ ಎಂದರೆ ನಿಮ್ಮ ಕುಟುಂಬದ ಸದಸ್ಯರಿಂದ ಹಣವನ್ನು ಎರವಲು ಪಡೆಯುತ್ತೀರಿ.

ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಅಂಗಡಿಯನ್ನು ತೆರೆಯಲು ನಿಮಗೆ ಕೊಟ್ಟ ಹಣವು ನಿಮ್ಮ ಅಂಗಡಿಯ ಷೇರು ಎಂದು   ಕರೆಯಲ್ಪಡುತ್ತದೆ. ಒಂದು ವೇಳೆ ನಿಮ್ಮ ಅಂಗಡಿಯಲ್ಲಿ ಹೆಚ್ಚು ಲಾಭ ಬಂದರೆ ಅವರಿಗೆ ಲಾಭ ಮೊತ್ತವನ್ನು ಸಿಗುತ್ತದೆ.

ಅದೇ ಒಂದು ವೇಳೆ ನಿಮ್ಮ ಅಂಗಡಿಯಲ್ಲಿ ನೀವು ಹಾನಿಯನ್ನು ಸಂಭವಿಸಿದರೆ ಆಹ ನೀವು ನಿಮ್ಮ ಕುಟುಂಬದವರಿಗೂ ಕೂಡ ಪೆಟ್ಟು ಬೀಳುತ್ತದೆ. ಅಂದರೆ ನಿಮ್ಮ ಕುಟುಂಬದವರು ನಿಮ್ಮ ಅಂಗಡಿ ಮೇಲೆ ಹೂಡಿಕೆ ಮಾಡಿದ್ದರು. ಇದರ ಅರ್ಥ ನಿಮ್ಮ ಕುಟುಂಬದವರು ಸಹ ನಿಮ್ಮ ಅಂಗಡಿಯ ಸ್ವಲ್ಪ ಭಾಗದ ಪಾಲನ್ನು ಹೊಂದಿರುತ್ತಾರೆ.

ಅವರು ನಿಮ್ಮ ಅಂಗಡಿಯ ಷೇರುದಾರರು ಎಂದು ತೋರಿಸಲು ಅವರಿಗೆ ಷೇರು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ನಿಮ್ಮ ಕುಟುಂಬದವರು ನಿಮ್ಮ ಅಂಗಡಿಯ ಮೇಲೆ ಹೂಡಿಕೆ ಮಾಡಿರುವ ಹಣವು ಅಥವಾ ಮೌಲ್ಯವು ನಿಮ್ಮ ಅಂಗಡಿಯ ಮೇಲೆ ಆಗುವ ಲಾಭ ಅಥವಾ ಹಾನಿಯ ಮೇಲೆ ಡಿಪೆಂಡ್ ಆಗಿರುತ್ತದೆ. ಅಂಗಡಿಯವ ಬಹಳಷ್ಟು ಲಾಭವನ್ನು ಗಳಿಸಿದರೆ ನಿಮ್ಮ ಕುಟುಂಬದವರ ಷೇರ್ ನ ಮೌಲ್ಯವು ಹೆಚ್ಚುತ್ತದೆ.

ಅದೇ ಒಂದು ವೇಳೆ ನಿಮ್ಮ ಅಂಗಡಿಯವ ಹಾನಿಯನ್ನು ಸಂಭವಿಸಿದರೆ ನಿಮ್ಮ ಕುಟುಂಬದವರ ಷೇರ್ ನ ಮೌಲ್ಯವು ಕಡಿಮೆಯಾಗುತ್ತದೆ. ಅಂಗಡಿಯವ ಅಥವಾ ಕಂಪನಿಯವರು ಲಾಭವನ್ನು ಗಳಿಸಿದ ಮೌಲ್ಯವನ್ನು, ಕಂಪನಿಯವರು ಅಥವಾ ಅಂಗಡಿಯವರು ಡಿವಿಡೆಂಡ್ ಮೂಲಕ ತನ್ನ ಗ್ರಾಹಕರಿಗೆ ಹಂಚುತ್ತಾರೆ.

ಷೇರು ಮಾರುಕಟ್ಟೆಯಲ್ಲಿ ಅಥವಾ ಸ್ಟಾಕ್ ಮಾರ್ಕೆಟ್ನಲ್ಲಿ ಸಾರ್ವಜನಿಕರು ವ್ಯಾಪಾರ ಮಾಡುವ ಒಂದು ಕಂಪನಿಯ ಷೇರುಗಳನ್ನು ಜನರು ಐಪಿಓ ಮೂಲಕ ಖರೀದಿಸಬಹುದು.

ಯಾವುದೇ ಒಂದು ಕಂಪನಿಯ ಷೇರು ಗಳನ್ನು ಖರೀದಿಸಲು, ನೇರವಾಗಿ ಖರೀದಿಸಲು ಸಾಧ್ಯವಿಲ್ಲ. ನೀವು ಕಂಪೆನಿಯ ಷೇರುಗಳನ್ನು ಖರೀದಿಸುವುದಾದರೆ ಬ್ರೋಕರ್ ಗಳ ಮೂಲಕವೇ ಕರಿಸಬಹುದಾಗಿದೆ.

ಅನೇಕ ಜನರಿಗೆ ಸ್ಟಾಕ್ ಮಾರ್ಕೆಟ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಲಭ್ಯವಿರದ ಕಾರಣ ಅನೇಕ ಜನರು ಸ್ಟ್ರಾಕ್ ಮಾರ್ಕೆಟ್ನಲ್ಲಿ ಹಣವನ್ನು ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ ಜಗತ್ತಿನ ಅತ್ಯಂತ ನಂಬರ್ ಒಂದು ಶ್ರೀಮಂತರಾಗಿರುವ ವಾರೆನ್ ಬಫೆಟ್ ರವರು ಜಗತ್ತಿನ ನಂಬರ್ ಒನ್ ಶ್ರೀಮಂತರಾಗಿರುವ ಕಾರಣವೆಂದರೆ ಅವರ ಸಣ್ಣ ವಯಸ್ಸಿನಿದ್ದಾಗಿನಿಂದಲೇ ಸ್ಟಾಕ್ ಮಾರ್ಕೆಟ್ ಇನ್ವೆಸ್ಟಿಂಗ್ ಸ್ಟಾರ್ಟ್ ಮಾಡಿದ್ದರು.

ಈಗ ನಂಬರ್ ಒನ್ ಶ್ರೀಮಂತನಾಗಲು ಕಾರಣ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದು. ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದು ಎಷ್ಟು ಲಾಭದಾಯಕವಾಗಿರುತ್ತದೆಯೋ ಅಷ್ಟೇ ರಿಸ್ಕ್ ಅನ್ನು ಕೂಡ ಬಂದಿದೆ.

ಆದ್ದರಿಂದ ಪ್ರತಿಯೊಬ್ಬರೂ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವ ಮುನ್ನ ಸ್ಟಾಕ್ ಮಾರ್ಕೆಟಿನ ಬಗ್ಗೆ ಸಮಗ್ರವಾದ ಮಾಹಿತಿಯನ್ನು ತಿಳಿದುಕೊಂಡು ಯಾವುದೇ ಸ್ಟಾಕ್ ನಲ್ಲಿ ಇನ್ವೆಸ್ಟ್ ಮಾಡುವ ಮುಂಚೆ ಅದರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ತಿಳಿದುಕೊಂಡ ನಂತರವೇ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದು ಬಹು ಉತ್ತಮ.

ಸ್ಟಾಕ್ ಮಾರ್ಕೆಟ್ನಲ್ಲಿ ಹೆಚ್ಚು ಲಾಭವಿದೆ ಎಂಬ ಕಾರಣದಿಂದ ಅನೇಕ ಜನರು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳದೆ ಲಾಭವಿದೆ ಎಂಬ ಆಸೆಯಿಂದ ಹೂಡಿಕೆ ಮಾಡಲು ಮುಂದಾಗುತ್ತಾರೆ ಆದರೆ ಇದು ಯಾವುದು ನಿಮ್ಮ ಲಾಭಕ್ಕೆ ಬರುವುದಿಲ್ಲ.
ಒಂದು ಮುಖ್ಯವಾದ ಅಂಶವನ್ನು ನಾವು ತಿಳಿದುಕೊಳ್ಳಬೇಕೆಂದರೆ ಷೇರು ಮಾರುಕಟ್ಟೆಯಲ್ಲಿ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವು ಹೆಚ್ಚು ಇದೆ ಎಂಬುದನ್ನು ಯಾವತ್ತೂ ಮರೆಯದಿರಿ. ನೀವು ಷೇರು ಮಾರುಕಟ್ಟೆ ಬಗ್ಗೆ ತಿಳಿಯದೆ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಲು ಮುಂದಾದರೆ ನಿಮ್ಮ ಎಲ್ಲಾ ಹಣವನ್ನು ಕಳೆದುಕೊಳ್ಳುವುದು ಖಂಡಿತ.

ಆದ್ದರಿಂದ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಅದರ ಬಗ್ಗೆ ಅಥವಾ ಷೇರು ಮಾರುಕಟ್ಟೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಅಥವಾ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳುವುದು ಅತಿ ಲಾಭಕರವಾಗಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬೇಕಾಗಿರುವ ಮುಖ್ಯ ಅಂಶ:

ಜಗತ್ತಿನ ನಂಬರ್ ಒನ್ ಶ್ರೀಮಂತ ವ್ಯಕ್ತಿಯಾದ ವಾರೆನ್ ಬಫೆಟ್ ರವರು  ಜಗತ್ತಿನ ನಂಬರ್ ಒನ್ ಶ್ರೀಮಂತ ವ್ಯಕ್ತಿಯಾಗಲು ಮುಖ್ಯ ಕಾರಣ ಅವರು ಸಣ್ಣ ವಯಸ್ಸಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದರು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ, ಮುಖ್ಯವಾಗಿ ನಿಮಗೆ ಬೇಕಾಗಿರುವುದು ತಾಳ್ಮೆ. 

ಈ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರತಿಯೊಬ್ಬ ವ್ಯಕ್ತಿಗೂ ಬೇಕಾಗಿರುವ ಮುಖ್ಯ ಅಂಶವೆಂದರೆ ಅದು ತಾಳ್ಮೆ. ಏಕೆಂದರೆ ಕೆಲವೊಂದಿಷ್ಟು ಜನರು ಏನು ಮಾಡುತ್ತಾರೆಂದರೆ ತಾವು ಹೂಡಿಕೆ ಮಾಡಿರುವ ಕಂಪನಿಯ ಷೇರ್ ನ ಸಮಗ್ರವಾದ ಮಾಹಿತಿಯನ್ನು ತಿಳಿದುಕೊಳ್ಳದೆ ಹೂಡಿಕೆ ಮಾಡಿಬಿಡುತ್ತಾರೆ.

ಆದರೆ ಇದು ತಪ್ಪು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬೇಕಾಗಿರುವುದು ತಾಳ್ಮೆ ಮತ್ತು ದೀರ್ಘಾವಧಿಯ ಹೂಡಿಕೆಗಳ ಜೊತೆಗೆ ಸೇರು ಮಾರುಕಟ್ಟೆಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ವಾರೆನ್ ಬಫೆಟ್ ನವರ ಮುಖ್ಯ ಸೂತ್ರಗಳು :
ಜಗತ್ತಿನ ನಂಬರ್ ಒನ್ ಶ್ರೀಮಂತರಾಗಿರುವ ವಾರೆನ್ ಬಫೆಟ್ ರವರು ಶ್ರೀಮಂತರಾಗಿದ್ದು ಒಂದು ಮುಖ್ಯ ಕಾರಣದಿಂದ. ಅದೇನಂದರೆ ದೀರ್ಘಾವಧಿ ಯೋಜನೆಗಳಿಗೆ ಅಂಟಿಕೊಳ್ಳುವುದು. ನೀವು ನೋಡುವ ಹಾಗೆ ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ಬ ವ್ಯಕ್ತಿ ನೆಟ್ಟ ಮರ ಗಿಡಗಳಿಂದ ಇಂದು ಆರಾಮವಾಗಿ ಅನೇಕರು ನೆರಳನ್ನು ಪಡೆಯುತ್ತಾರೆ.

ಪ್ರಸ್ತುತವಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದು, ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಲಾಭವನ್ನು ಪಡೆಯಬೇಕಾದರೆ ದೀರ್ಘಾವಧಿಯ ಬಗ್ಗೆ ಯೋಚಿಸಬೇಕಾದದ್ದು. ಇತ್ತೀಚಿನ ಜನರಿಗೆ ಇರುವುದು ಅಲ್ಪಾವಧಿಯಲ್ಲಿನ ಚಂಚಲತೆ ಮತ್ತು ಅನಿಶ್ಚಿತತೆ ಬಗ್ಗೆ ನಮ್ಮ ಗಿಳು . 

ಆದ್ದರಿಂದ ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಹೆಚ್ಚಿನ ಲಾಭ ಪಡೆಯಬೇಕೆಂದರೆ ಅದು ದೀರ್ಘಾವಧಿ ಕಾಲದಲ್ಲಿ ಲಾಭವಿದೆಯೋ ಇಲ್ಲವೋ ಎಂಬುದನ್ನು ಯೋಚಿಸಬೇಕಾದದ್ದು ಬಹುಮುಖ್ಯ ಅಂಶವಾಗಿದೆ.

ನಿಮ್ಮ ಮೇಲೆ ನೀವು ಹೂಡಿಕೆ ಮಾಡಿಕೊಳ್ಳಿ :
ಜಗತ್ತಿನ ನಂಬರ್ ಒನ್ ಶ್ರೀಮಂತರಾಗಿರುವ ವಾರೇನ್ ಬಫೆಟ್ ರವರು ಹೇಳುವ ಪ್ರಕಾರ , ಪ್ರತಿಯೊಬ್ಬ ವ್ಯಕ್ತಿಯು ತನ್ನ ಮೇಲೆ ತಾನು ಹೂಡಿಕೆ ಮಾಡಿಕೊಳ್ಳಬೇಕು ಅಂದಾಗ ಮಾತ್ರ ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ.

ಅದೇ ರೀತಿ ವಾರೆನ್ ಬಫೆಟ್ ರವರು ಹೇಳುವುದು ಏನೆಂದರೆ, ನೀವು ಈಗ ಇರುವುದಕ್ಕಿಂತ ನಿಮ್ಮ ಮೌಲ್ಯವನ್ನು 50ರಷ್ಟು ಹೆಚ್ಚಿಸಿಕೊಳ್ಳಲು ಬೇಕಾದ ಒಂದು ಮುಖ್ಯ ಮಾರ್ಗವೆಂದರೆ ನಿಮ್ಮ ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು. ಯಾವುದೇ ಒಬ್ಬ ವ್ಯಕ್ತಿ ಯಾವುದೇ ಒಂದು ಕ್ಷೇತ್ರದಲ್ಲಿ ಬೆಳೆಯಬೇಕಾದರೆ ಮಾತಿನ ಒಂದು ಕಲೆ ಅತ್ಯಂತ ಮುಖ್ಯವಾದ ಪ್ರಾಮುಖ್ಯತೆ ಹೊಂದಿರುತ್ತದೆ.

ಷೇರು ಮಾರುಕಟ್ಟೆಯಲ್ಲಿ ಹಣ ಗಳಿಸಲು ಕೆಲವೊಂದಿಷ್ಟು ಪ್ರಮುಖ ಸಲಹೆಗಳು ಈ ಕೆಳಗಿವೆ :

1. ಯಾವುದಾದರೂ ಒಂದು ಕಂಪನಿಯಲ್ಲಿ ಹೂಡಿಕೆ ಮಾಡುವ ಮುಂಚೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯಿರಿ :

ಯಾವುದೇ ಒಂದು ಕಂಪನಿಯಲ್ಲಿ ನೀವು ಷೇರುಗಳನ್ನು ಖರೀದಿಸುವ ಮುಂಚೆ ಆ ಒಂದು ಕಂಪನಿಯ ಸಮಗ್ರವಾದ ಸಂಶೋಧನೆ ಮಾಡುವುದು ಅತಿ ಅವಶ್ಯಕ. ನೀವು ಹೂಡಿಕೆ ಮಾಡಲು ಬಯಸುವ ಕಂಪನಿಯ ನಿವ್ವಳ ಆದಾಯ ಈಕೆಯ ಬೆಳವಣಿಗೆ ಇಕ್ವಿಟಿ ಅನುಪಾತಕ್ಕೆ ಸಾಲ ಲಾಭದ ಮಾರ್ಜಿನ್ ಮತ್ತು ಡಿವಿಡೆಂಟ್ ಹೀಗೆ ಹಲವಾರು ಫಂಡಮೆಂಟಲ್ ನಿಯಮಗಳನ್ನು ಮೊಟ್ಟ ಮೊದಲು ಅರಿತುಕೊಳ್ಳುವುದು ಅತಿ ಅವಶ್ಯಕ.

2.  ಭಯಪಡಬೇಡಿ ಮತ್ತು ಅವಸರ ಮಾಡಬೇಡಿ.


ಅನೇಕ ಜನರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ನಂತರ, ತಮ್ಮ ಷೇರ್ ನ ಮೌಲ್ಯವು ಅಥವಾ ಸ್ಟಾಕ್ ಮಾರುಕಟ್ಟೆ ಇದ್ದಕ್ಕಿದ್ದಂತೆ ಕುಸಿತಗೊಂಡಾಗ ಅನೇಕರು ಭಯಪಟ್ಟು ತಮ್ಮ ಎಲ್ಲಾ ಶೇರುಗಳನ್ನು ಮಾರಾಟ ಮಾಡಿ ಬಿಡುತ್ತಾರೆ. ಹೀಗೆ ಮಾಡುವುದು ತಪ್ಪು ಎಂದು ಅನೆಕ ತಜ್ಞರು ಹೇಳಿದ್ದಾರೆ. ಮಾರುಕಟ್ಟೆಯು ನಿಗದಿತ ಸಮಯಕ್ಕೆ ಕುಸಿತಾಗ ಮತ್ತೆ ಏರಿಕೆಗೊಳ್ಳುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಆದ್ದರಿಂದ ನೀವು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಭಯಪಡುವುದಕ್ಕಿಂತ ಸಂಶೋಧನೆ ಮಾಡುವುದು ಅತಿ ಅವಶ್ಯಕವಾಗಿರುತ್ತದೆ.

3. ಯಾವ ಉದ್ಯಮಗಳಲ್ಲಿ ನೀವು ಹೂಡಿಕೆ ಮಾಡಬೇಕೆಂಬುರೋದನ್ನು ನಿರ್ಧರಿಸಿ :


ನೀವು ಹೂಡಿಕೆ ಮಾಡುವುದು ಯಾವ ಉದ್ಯಮ ವಲಯದಲ್ಲಿ ಮಾಡಿದರೆ ಬಹು ಉತ್ತಮವಾಗಿರುತ್ತದೆ ಎಂದು ಮೊದಲ ನೀವು ನಿರ್ಧರಿಸಿ ನಂತರ ಹೂಡಿಕೆ ಮಾಡುವುದು ಅತಿ ಅವಶ್ಯಕ.

ಷೇರು ಮಾರುಕಟ್ಟೆಯ ತಜ್ಞರ ಪ್ರಕಾರ ಫುಲ್ ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುವುದಾದರೆ ಅದರ ಒಂದು ಮಾನದಂಡವನ್ನು ನಿರ್ಧರಿಸಲು ಸುಲಭವಾಗಿದ್ದರೂ ಸಹ ಕರಡಿ ಮಾರುಕಟ್ಟೆಯಲ್ಲಿ ಈ ಪ್ರಮುಖ ಅಂಶಗಳು ಕಾಣೆಯಾಗುವುದು.

ಆದ್ದರಿಂದ ನೀವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸ್ಥೂಲ ಆರ್ಥಿಕ ಕಾರ್ಯಕ್ಷಮತೆ ಮತ್ತು ಶೇರುಗಳ ಸಾಪೇಕ್ಷ ಬಲವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಅಗ್ರ ಸಲಹೆ ನೀಡುತ್ತಾರೆ.

4. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಷೇರುಗಳನ್ನು ಖರೀದಿಸಿ.


ಯಾವುದೇ ಒಂದು ಕಂಪನಿಯ ಶೇರಿನ ಮೌಲ್ಯವು ಕಡಿಮೆ ಇದ್ದಾಗ ಅವುಗಳನ್ನು ಪೆನ್ನಿ ಸ್ಟಾಕ್ಸ್ ಗಳೆಂದು ಕರೆಯಲಾಗುತ್ತದೆ. ಈ ಒಂದು ಶೇರುಗಳಲ್ಲಿ ಹೂಡಿಕೆ ಮಾಡುವುದು ಎಷ್ಟು ಲಾಭದಾಯಕವೂ ಅಷ್ಟೇ ಅಪಾಯಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

5. ವಿಶ್ವಾಸಾರ್ಹ ಮತ್ತು ಉತ್ತಮ ಬ್ರೋಕರ್ ಗಳನ್ನು ಆಯ್ಕೆ ಮಾಡಿಕೊಳ್ಳಿ :

ಸ್ಟಾಕ್ ಮಾರ್ಕೆಟ್ನಲ್ಲಿ ಇನ್ವೆಸ್ಟ್ ಮಾಡಲು ಅಥವಾ ಹೂಡಿಕೆ ಮಾಡಲು ಮುಖ್ಯ ಪಾತ್ರ ವಹಿಸುವುದು ಬ್ರೋಕರ್ಸ್. ಆದ್ದರಿಂದ ನಾವು ಹೂಡಿಕೆ ಮಾಡುವ ಮುಂಚೆ ಯಾವುದು ಉತ್ತಮ ಬ್ರೋಕರ್ ಎಂದು ನಾವು ಆಯ್ಕೆ ಮಾಡಿಕೊಳ್ಳುವುದು ಬಹು ಮುಖ್ಯವಾಗಿರುತ್ತದೆ.

ಬಹು ಮುಖ್ಯವಾದ ಬ್ರೋಕರ್ ಗಳನ್ನು ಆಯ್ಕೆ ಮಾಡಲು ಹಲವಾರು ಮಾನದಂಡಗಳಿದ್ದು ಅವುಗಳನ್ನು ನೀವು ತಜ್ಞರಿಂದ ಕೇಳಿ ಪಡೆಯಬಹುದು ಅಥವಾ ಸ್ವತಃ ಸಂಶೋಧನೆ ಮಾಡಬಹುದು.

ಮಾರುಕಟ್ಟೆಯನ್ನು ಪ್ರವೇಶಿಸುವ ಮೊದಲು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳುವುದು ಬಹು ಮುಖ್ಯವಾಗಿದೆ :

ಷೇರು ಮಾರುಕಟ್ಟೆಯಲ್ಲಿ ಅನೇಕ ಜನರು ಹೂಡಿಕೆ ಮಾಡುತ್ತಿಲ್ಲ ಏಕೆಂದರೆ ಷೇರು ಮಾರುಕಟ್ಟೆಯ ಬಗ್ಗೆ ಅವರಿಗೆ ಕಾಡುತ್ತಿರುವ ಭಯ ಮತ್ತು ಅದರ ಬಗ್ಗೆ ಇಲ್ಲದ ಜ್ಞಾನ. ಷೇರು ಮಾರುಕಟ್ಟೆಯ ಬಗ್ಗೆ ಗೊತ್ತಿಲ್ಲದ ಜ್ಞಾನ ನಿಮಗೆ ಭಯ ಬೀತರನ್ನಾಗಿ ಉಂಟು ಮಾಡುತ್ತದೆ. ಅದಕ್ಕೆ ಒಬ್ಬ ಷೇರು ಮಾರುಕಟ್ಟೆಯ ಪರಿಣಿತ ಹೇಳುವುದೇನೆಂದರೆ ಕಣ್ಣಿಗೆ ಕಾಣದ ದೇವರಿಗಿಂತ ಕಣ್ಣಿಗೆ ಕಾಣುವ ದೆವ್ವ ಉತ್ತಮ ವೆಂದು.

ಹಾಗೂ ಅವರ ಹೇಳುವುದು ಮತ್ತೊಂದು ವಿಷಯವೇನೆಂದರೆ ಶೇರು ಮಾರುಕಟ್ಟೆಯಲ್ಲಿ ನೀವು ಎಷ್ಟು ಹೆಚ್ಚಿನ ಸಮಯವನ್ನು ಕಳೆಯುತ್ತಿರೋ ಅಷ್ಟೇ ಅದರ ಬಗ್ಗೆ ಒಂದು ಆಳವಾದ ಜ್ಞಾನವನ್ನು ಪಡೆಯುತ್ತೀರಿ. ಆದ್ದರಿಂದ ನೀವು ನಿಜವಾದ ಹಣದಿಂದ ಹೂಡಿಕೆ ಮಾಡುವ ಮುಂಚೆ ಪೇಪರ್ ಟ್ರೇಡಿಂಗ್ ಮಾಡಬಹುದು ಅಥವಾ ಡೆಮೋ ಅಕೌಂಟ್ ನಿಂದ ಟ್ರೇಡಿಂಗ್ ಮಾಡಬಹುದು.

ಅನೇಕ ಜನರು ಹೆದರಲು ಮತ್ತೊಂದು ಕಾರಣವೇನೆಂದರೆ ಮೂಲ ಬಂಡವಾಳ ಎಲ್ಲಿ ಮೊಳಕೆ ಹೋಗಿಬಿಡುತ್ತದೆಯೋ ಎಂಬ ಕಾರಣದಿಂದ.
ಷೇರು ಮಾರುಕಟ್ಟೆಯಲ್ಲಿ ಲಾಭಗಳಿಸಲು ಮೊದಲು ನಾವು  ಷೇರು ಮಾರುಕಟ್ಟೆಯ ಬಗ್ಗೆ ಒಂದು ಉತ್ಸಾಹವನ್ನು ಹೊಂದಿರಬೇಕು ಮತ್ತು ಅದರ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಲು ಹಸಿವು ಹೊಂದಿರಬೇಕು.

ಮಾರುಕಟ್ಟೆಯಲ್ಲಿ ಗೆಲ್ಲುವ ಅಥವಾ ಕಳೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ನೀವು ಮೂಲಭೂತ ನಿಯಮಗಳನ್ನು ತಿಳುವಳಿಕೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಅದೇ ರೀತಿ ಶೇರು ಮಾರುಕಟ್ಟೆಗೆ ಸಂಬಂಧಿಸಿದ ಕೆಲವೊಂದಿಷ್ಟು ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿರಬೇಕು.

ಷೇರು ಮಾರುಕಟ್ಟೆಗೆ ಪ್ರವೇಶಿಸುವ ಮುಂಚೆ ಮಾಡಿಕೊಳ್ಳಬೇಕಾದ ಸಿದ್ಧತೆಗಳು ಮತ್ತು ಆಲೋಚನೆಗಳನ್ನು ತಿಳಿದುಕೊಳ್ಳೋಣ.

ಷೇರು ಮಾರುಕಟ್ಟೆಯನ್ನು ಪ್ರವೇಶಿಸುವ ಮುಂಚೆ ಇಲ್ಲಿ ಕೆಳಗಿರುವ ಒಂದಿಷ್ಟು ಪ್ರಮುಖ ಅಂಶಗಳನ್ನು ಗಮನಿಸುವುದು ಮತ್ತು ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹು ಉತ್ತಮವಾಗಿರುತ್ತದೆ. ಷೇರು ಮಾರುಕಟ್ಟೆಯು ಏರಳಿತ  ಕಾರಣಗಳನ್ನು ತಿಳಿದುಕೊಳ್ಳುವುದು ಅವುಗಳನ್ನು ನಿರ್ಣಯಿಸುವ ಸಾಮರ್ಥ್ಯ ಯಾವುದಕ್ಕೆ ಇದೆ ಎಂದು ತಿಳಿದುಕೊಳ್ಳುವುದು ಬಹು ಅವಶ್ಯಕತೆ.

ಷೇರು ಮಾರುಕಟ್ಟೆಯ ಬಗ್ಗೆ ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಕಲಿಯುವುದನ್ನು ಯಾವತ್ತು ನಿಲ್ಲಿಸಬೇಡಿ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಇಂದು ನಿಮಗೆ ಹಾನಿಯನ್ನು ಉಂಟುಮಾಡಬಹುದು, ಆದರೆ ಅದರ ಬಗ್ಗೆ ಹೊಂದಿರುವ ನಿಮ್ಮ ಜ್ಞಾನ ಒಂದಲ್ಲ ಒಂದು ದಿನ ನಿಮಗೆ ಹೊಟ್ಟೆಯ ಊಟ ಹಾಕೆ ಹಾಕುತ್ತದೆ.

ನೀವು ಷೇರು ಮಾರುಕಟ್ಟೆಯನ್ನು ಪ್ರವೇಶಿಸಲು ಯೋಚಿಸಿದರೆ ಈ ಒಂದು ಲೇಖನವನ್ನು ಒಂದು ತಿಂಗಳು ಅಥವಾ ಒಂದು ವಾರಗಳ ಮಟ್ಟಿಗೆ ಓದಿ ನಂತರ ಬಿಟ್ಟರೆ ಯಾವುದೇ ಪ್ರಯೋಜನವಾಗುವುದಿಲ್ಲ.

ಏಕೆಂದರೆ ಕಲಿಕೆಯು ಒಂದು ನಿರಂತರ ಪ್ರಕ್ರಿಯೆಯಾಗಿದ್ದು. ಕಲಿಯುವುದನ್ನು ಯಾವತ್ತು ಬಿಡಬೇಡಿ. ಕಲಿಯುತ್ತಾ ಹೋದಂತೆ ನಿಮ್ಮ ಜ್ಞಾನವು ಹೆಚ್ಚುತ್ತದೆ . ನಿಮ್ಮ ಜ್ಞಾನ ಹೆಚ್ಚಾದಂತೆ ನಿಮ್ಮ ಎಕ್ಸ್ಪೀರಿಯನ್ಸ ಕೂಡ ಹೆಚ್ಚಾಗುತ್ತದೆ. ಜಗತ್ತಿನಲ್ಲಿ ಅನುಭವಕ್ಕಿಂತ ಮತ್ತೊಂದು ಹೂಡಿಕೆ ಯಾವುದು ಇಲ್ಲ.

ನಮ್ಮ ನಿರ್ಧಾರವು ಮಾರುಕಟ್ಟೆಗೆ ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ಆಧಾರದ ಮೇಲೆ ಮಾರುಕಟ್ಟೆಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ವಿಶ್ಲೇಷಿಸಬೇಕಾಗಿ ವಿದು ಅತಿ ಅವಶ್ಯಕ.

ಮಾರುಕಟ್ಟೆಯನ್ನು ಪ್ರವೇಶಿಸುವ ಮುಂಚೆ ಶೇರುಗಳನ್ನು ಖರೀದಿಸಲು ಮುಖ್ಯವಾಗಿ ಬೇಕಾಗಿರುವ ಬ್ರೋಕರೇಜ್ ಕಂಪನಿಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಅವಶ್ಯಕ.

ಹಿಂದಿನ ಕಾಲದಲ್ಲಿ ಕಂಪನಿಗಳ ಷೇರುಗಳನ್ನು ಖರೀದಿಸುವುದು ಹಲವು ದಿನಗಳ ಕೆಲಸವಾಗಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ  ಯಾವುದೇ ಕಂಪನಿಯ ಶೇರುಗಳನ್ನು ನೀವು ಕೆಲವೇ ಕೆಲವು ನಿಮಿಷಗಳಲ್ಲಿ ಖರೀದಿಸಬಹುದಾಗಿದೆ.

ಅದೇ ರೀತಿ ಹಿಂದಿನ ಕಾಲದಲ್ಲಿ ಯಾವುದೇ ಕಂಪನಿಯ ಶೇರು ಖರೀದಿಸಬಹುದಾದರೆ ಅನೇಕ ದಿನಗಳ ಕೆಲಸದ ಜೊತೆಗೆ ಹಲವಾರು ಕಾಗದಪತ್ರಗಳನ್ನು ನೀವು ಹೊಂದಿರಬೇಕಾಗುತ್ತದೆ. ಆದರೆ ಇಂದಿನ ಈ ಡಿಜಿಟಲ್ ಯುಗದಲ್ಲಿ ನಿಮ್ಮ ಮೊಬೈಲ್ ನಲ್ಲಿ ಕಂಪನಿಯ ಶೇರುಗಳನ್ನು ಖರೀದಿಸಿ ಷೇರು ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ.

ಅದೇ ರೀತಿ ಇಂದಿನ ಯುಗದಲ್ಲಿ ಅನೇಕ ಬ್ಯಾಂಕುಗಳು ಕೂಡ ಡಿಮ್ಯಾಟ್ ಅಕೌಂಟ್ ಗಳನ್ನು ತೆರೆದು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುತ್ತಿವೆ. ಶೇರು ಮಾರುಕಟ್ಟೆಯಲ್ಲಿ ನಾವು  ಹೂಡಿಕೆ ಮಾಡಲು ಬೇಕಾಗಿರುವುದು ಡಿಮ್ಯಾಟ್ ಅಕೌಂಟ್.

ಡಿಮ್ಯಾಟ್ ಅಕೌಂಟ್ ಅನ್ನು ತೆರೆಯಲು ಅನೇಕ ಬ್ಯಾಂಕುಗಳು ಸಹಾಯ ಮಾಡುತ್ತಿದ್ದು, ಅದೇ ರೀತಿ ಅನೇಕ ಖಾಸಗಿ ಕಂಪನಿಗಳು ಕೂಡ ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಯಾವ ಬ್ರೋಕರ್ಸ್ ಕಂಪನಿಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಯಾವುದೇ ಕಾರಣಕ್ಕೂ ಸಾಲ ಮಾಡಿ ಹೂಡಿಕೆ ಮಾಡಬೇಡಿ.

ಏಕೆಂದರೆ ನಾವು ಇಂದಿನ ಕಾಲದಲ್ಲಿ ಅನೇಕ ವಿದ್ಯಾರ್ಥಿಗಳು ಷೇರು ಮಾರುಕಟ್ಟೆಯಲ್ಲಿರುವ ಲಾಭದ ಬಗ್ಗೆ ತಪ್ಪು ಕಲ್ಪನೆಗಳನ್ನು ತೆಗೆದುಕೊಂಡು ಅದರ ಬಗ್ಗೆ ಯಾವುದೇ ಪೂರ್ವ ಜ್ಞಾನವಿಲ್ಲದೆ ತಮ್ಮ ಗೆಳೆಯರೊಂದಿಗೆ ಅಥವಾ ಇತರೆ ಸಹಾಯಕರೊಂದಿಗೆ ಸಾಲವನ್ನು ಪಡೆದು ಹೂಡಿಕೆ ಮಾಡಿ ಅನೇಕರು ಹಾನಿ ಮಾಡಿಕೊಂಡದ್ದನ್ನು ನಾವು ನೋಡಿದ್ದೇವೆ.

ಆದ್ದರಿಂದ ನೀವು ಹೂಡಿಕೆ ಮಾಡುವ ಮುಂಚೆ ನಿಮ್ಮ ಬಳಿ ನಿಮ್ಮದೇ ಆದ ಹಣವಿದ್ದರೆ ಮಾತ್ರ ಹೂಡಿಕೆಯನ್ನು ಆರಂಭಿಸಿ. ತಜ್ಞರು ಹೇಳುವ ಪ್ರಕಾರ ಸಾಲದಿಂದ ಮಾಡಿದ ಹೂಡಿಕೆ ಯಾವತ್ತೂ ಹೂಡಿಕೆ ಎಂದು ಕರೆಸಿಕೊಳ್ಳುವುದಿಲ್ಲ. ಆದ್ದರಿಂದ ನಾನು ನಿಮಗೆ ಸಲಹೆ ನೀಡುವುದು ಏನೆಂದರೆ ನಿಮ್ಮ ಸ್ವಂತ ಹಣದಿಂದ ಅಥವಾ ನೀವು ದುಡಿದ ಹಣದಿಂದ ಹೂಡಿಕೆಯನ್ನು ಮಾಡಿ. ಆಗ ನಿಮ್ಮ ಹೂಡಿಕೆಗೆ ಒಂದು ಮೌಲ್ಯವಿರುತ್ತದೆ.

ಇಷ್ಟೆಲ್ಲ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡ ನಂತರ ನೀವು ಕೂಡ ಹೂಡಿಕೆ ಮಾಡುವುದರ ಬಗ್ಗೆ ಆಸೆಯನ್ನು ಹೊಂದುತ್ತೀರಿ. ಆದರೆ ಇದು ತಪ್ಪು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಜಗತ್ತಿನ ಅತ್ಯಂತ ಪ್ರಸಿದ್ಧವಾದ ಐಫೆಲ್ ಟವರ್, ತಾಜ್ ಮಹಲ್ ನಂತಹ ಪ್ರಸಿದ್ಧವಾದ ಒಂದು ಕಟ್ಟಡಗಳನ್ನು ಒಂದೇ ದಿನದಲ್ಲಿ ಕಟ್ಟಲು ಯಾವತ್ತೂ ಸಾಧ್ಯವಾಗಿಲ್ಲ.

ಅದಕ್ಕೆ ಅದರದ್ದೇ ಆದ ಒಂದು ಪರಿಶ್ರಮ ಒಂದು ಸಮಯ ಒಂದು ಕಠಿಣ ಪರಿಶ್ರಮವನ್ನು ನೀಡಬೇಕಾಗುತ್ತದೆ. ಈ ಮುಂದಿನ ಅಂಕಣದಲ್ಲಿ ನಾವು ಷೇರು ಮಾರುಕಟ್ಟೆಯಲ್ಲಿ ಎಲ್ಲಿ ಹೂಡಿಕೆ ಮಾಡಬೇಕು ಮತ್ತು ಷೇರು ಮಾರುಕಟ್ಟೆಯಲ್ಲಿ ಯಾವ ವಿಧಾನಗಳು ಅಸ್ತಿತ್ವದಲ್ಲಿವೆ ಎಂಬುದನ್ನು ತಿಳಿದುಕೊಳ್ಳೋಣ.

ಮೊಟ್ಟ ಮೊದಲ ನಾವು ರಿಲಯನ್ಸ್ ಎಂಬ ಕಂಪನಿಯ ಬಗ್ಗೆ ತಿಳಿದುಕೊಳ್ಳೋಣ. ರಿಲಯನ್ಸ್ ಎಂಬ ಪ್ರಸಿದ್ಧ ಕಂಪನಿಯು ಸೆಬಿಯಲ್ಲಿ ಒಪ್ಪಿಗೆ ಪಡೆದುಕೊಂಡ ಕಂಪನಿ ಯಾಗಿದ್ದು. 

ಭಾರತೀಯ ಶೇರು ಮಾರುಕಟ್ಟೆ ಎರಡು ಸ್ಟಾಕ್ ಎಕ್ಸ್ಚೇಂಜ್ ಗಳನ್ನು ಹೊಂದಿದ್ದು ಅವುಗಳ ಹೆಸರು ಈ ಕೆಳಗಿನಂತಿವೆ.

1. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ( National Stock Exchange )


2. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ( Bombay Stock Exchange )

ಯಾವುದೇ ಒಬ್ಬ ವ್ಯಕ್ತಿಯು ಒಂದು ಕಂಪನಿಯ ಶೇರುಗಳನ್ನು ಖರೀದಿಸಬೇಕೆಂದರೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಪ್ರಮುಖ ಪಾತ್ರ ವಹಿಸುತ್ತವೆ. ಶೇರುಗಳನ್ನು ಕಳುಹಿಸುವಾಗ ಈ ಎರಡು ಎಕ್ಸ್ಚೇಂಜ್ಗಳು ನೇರವಾಗಿ ಹೂಡಿಕೆದಾರರಿಗೆ ಮಾರಾಟ ಮಾಡುವುದಿಲ್ಲ. ಅದರ ಬದಲಾಗಿ ಹೂಡಿಕೆ ಮಾಡಲು ಕೆಲವೊಂದಿಷ್ಟು ಕಂಪನಿಗಳ ಅವಶ್ಯಕತೆ ಇರುತ್ತದೆ.

ಅವುಗಳ ಹೆಸರೇ ಬ್ರೋಕರೇಜ್ ಕಂಪೆನಿಗಳು.  NSE/BSE ಅನುಮೋದಿತ ಬ್ರೋಕರೇಜ್  ಸಂಸ್ಥೆಗಳಿಂದ ಮಾತ್ರ ನಾವು ಶೇರುಗಳನ್ನು ಖರೀದಿಸಬಹುದಾಗಿದೆ. ಈ ಬ್ರೋಕರ್ ಸಂಸ್ಥೆಗಳು ಜನರನ್ನು ಭೇಟಿ ಮಾಡಿ ತಮ್ಮ ಸಂಸ್ಥೆಯಿಂದ ಸ್ಟಾಕುಗಳನ್ನು ಖರೀದಿಸಲು ಜನರಿಗೆ ಭೇಟಿ ಮಾಡುತ್ತವೆ.

ನೀವು ಷೇರುಗಳನ್ನು ಖರೀದಿಸಬೇಕಾದರೆ ಮೊದಲು ಬ್ರೋಕರೇಜ್ ಕಂಪನಿಗಳಲ್ಲಿ ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. ಉತ್ತರದಲ್ಲಿ ನೀವು ಸ್ಟಾಕ್ ಎಕ್ಸ್ಚೇಂಜ್ ಗಳನ್ನು ಸಂಪರ್ಕಿಸಬಹುದಾಗಿದೆ. ಶೇರ್ ಮಾರ್ಕೆಟ್ ಎಂದರೇನು ಎಂಬ ಸಮಗ್ರ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಇದನ್ನು ಒಂದು ಉದಾಹರಣೆಯೊಂದಿಗೆ ನಿಮಗೆ ತಿಳಿಸಬಯಸುತ್ತೇವೆ.

ಉದಾಹರಣೆಗೆ ನೀವು ಯಾವುದಾದರೂ ಒಂದು ಅಂಗಡಿಗೆ ಹೋಗಿ ಹಣ ಕೊಟ್ಟರೆ ಹಣ್ಣು ಸಿಗುತ್ತದೆ. ಯಾವುದೇ ಕಂಪನಿಯು ತನ್ನ ಷೇರುಗಳನ್ನು ನೀಡುವುದರ ಮೊದಲು ಅದರ ಬೆಲೆಯನ್ನು ನಿಮಗೆ ತಿಳಿಸುತ್ತದೆ. ನೀವು ಆ ಕಂಪನಿಯ ಶೇರುಗಳನ್ನು ಖರೀದಿಸಿದರೆ ಆ ಕಂಪನಿಯೊಂದಿಗೆ ವರ್ಚುಯಲ್ ಪಾಲುದಾರಿಕೆಯನ್ನು ಪಡೆಯುತ್ತೀರಿ.

ಒಂದು ರೀತಿಯ ವರ್ಚುವಲ್ ಓನರ್ಶಿಪ್ ಅಥವಾ ಮಾಲಿಕ ಎಂದು ಕೂಡ ಕರೆಯಬಹುದಾಗಿದೆ. ಅನೇಕ ಕಂಪನಿಗಳು ಲಕ್ಷಗಳಷ್ಟು ಶೇರುಗಳನ್ನು ನೀಡುತ್ತವೆ, ಆದರೂ ಕೂಡ ನೀವು ಆ ಕಂಪನಿಯಲ್ಲಿ ಒಂದು ಸಣ್ಣ ಶೇಕಡವಾರು ಪ್ರಮಾಣವನ್ನು ಮಾತ್ರ ತೆಗೆದುಕೊಳ್ಳುತ್ತೀರಿ.

ಷೇರು ಮಾರುಕಟ್ಟೆ ಒಂದು ಉದಾಹರಣೆಯನ್ನು ಹೇಳುವುದಾದರೆ ಅತ್ಯಂತ ಪ್ರತಿಷ್ಠಿತ ಬ್ರೋಕರ್ಸ್ ಕಂಪನಿಯಾದ ಜಿರೋದಾ ಕಂಪನಿಯಿಂದ ನೀವು ಒಂದು ಸಾವಿರ ರಿಲಯನ್ಸ್ ಕಂಪನಿ ಶೇರುಗಳನ್ನು ಖರೀದಿಸಲು ನೀವು ಹಣವನ್ನು ಪಾವತಿಸುತ್ತೀರಿ. ಈ ಬ್ರೋಕರ್ಸ್ ಕಂಪನಿಯು ಈ ಹಣವನ್ನು ತೆಗೆದುಕೊಂಡು ಸ್ಟಾಕ್ ಎಕ್ಸ್ಚೇಂಜ್ ಗಳಿಗೆ ನೀಡಿದರೆ, ಟಾಕ್ ಎಕ್ಸ್ಚೇಂಜ್ ಅವರು ಆ ಹಣವನ್ನು ರಿಲಯನ್ಸ್ ಕಂಪೆನಿಗೆ ಕೊಟ್ಟು ಸಾವಿರ ಶೇರುಗಳನ್ನು ಖರೀದಿಸಿ ನಿಮಗೆ ಕೊಡುತ್ತಾರೆ. 

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಕೆಲವೊಂದಿಷ್ಟು ಪುಸ್ತಕಗಳ ಅಗತ್ಯತೆ ಹೂಡಿಕೆ ದಾರರಿಗೆ ಇದ್ದೇ ಇರುತ್ತದೆ. ಈ ಪುಸ್ತಕಗಳನ್ನು ಓದುವುದರಿಂದ ನಿಮಗೆ ಶೇರು ಮಾರುಕಟ್ಟೆ ಹೆಚ್ಚಿನ ಜ್ಞಾನ ತಿಳಿಯುವುದಲ್ಲದೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರ ಸಮಗ್ರ ಮಾಹಿತಿಯನ್ನು ಈ ಪುಸ್ತಕಗಳು ನಿಮಗೆ ತಿಳಿಸುತ್ತವೆ.

ಒಂದಿಷ್ಟು ಪುಸ್ತಕಗಳ ಪಟ್ಟಿ ಈ ಕೆಳಗಿದೆ.

ಬುದ್ಧಿವಂತ ಹೂಡಿಕೆದಾರ ( Intelligent Investor ), ಸಂಪತ್ತಿನ ಸರಳ ಮಾರ್ಗ ( the simple path to wealth ),
ವಾರೆನ್ ಬಫೆಟ್ ವೇ ( Warren Buffet way ) ಸೇರಿದಂತೆ ಹಲವಾರು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು  ಪುಸ್ತಕಗಳನ್ನು ಓದುವುದರಿಂದ ಷೇರು ಮಾರುಕಟ್ಟೆಯ ಕೆಲವೊಂದಿಷ್ಟು ಉತ್ತಮ ಮಾಹಿತಿಗಳನ್ನು ನೀವು ತಿಳಿದುಕೊಂಡು ಹೆಚ್ಚಿನ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದಾಗಿದೆ. ಆದ್ದರಿಂದ ಈ ಪುಸ್ತಕಗಳನ್ನು ಖರೀದಿಸಿಕೊಂಡು ಓದಲು ಆರಂಭಿಸಿ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಶ್ರೀಮಂತರಾಗಿರಿ ನಿಮ್ಮ ಜೀವನವನ್ನು ಸುಖಮಯ ವಾಗಿಸಿಕೊಳ್ಳಿ.

ಎಲ್ಲಾ ಬಂದುಗಳಿಗೆ ಕೊನೆಯವರೆಗೂ ನಮ್ಮ ಈ ಲೇಖನವನ್ನು ಓದಿದ ನಿಮಗೆ ಧನ್ಯವಾದಗಳು. ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ದಿನನಿತ್ಯ ನಾವು ಸಾರ್ವಜನಿಕರಿಗೆ ಸಹಾಯವಾಗುವಂತಹ ಲೇಖನಗಳನ್ನು ಪ್ರತಿನಿತ್ಯ ನೀಡುತ್ತಿದ್ದೇವೆ.

ನಿಮ್ಮೆಲ್ಲರಿಗೂ ಈ ಲೇಖನಗಳು ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಈ ಮಾಹಿತಿಯನ್ನು ಹಂಚಿಕೊಂಡು ಎಲ್ಲರಿಗೂ ಜ್ಞಾನವನ್ನು ಹಂಚುವಂತರಾಗಿ. ಇದೇ ರೀತಿ ನಾವು ನಮ್ಮ ವೆಬ್ಸೈಟ್ನಲ್ಲಿ ಇನ್ನೂ ಅನೇಕ ವಿಷಯಗಳ ಬಗ್ಗೆ ಸಂಪೂರ್ಣ ಸಹಾಯ ಮಾಡುವ  ಒಂದು ಮಾಹಿತಿಯನ್ನು ದಿನನಿತ್ಯ ನಿಮಗೆ ನೀಡಲು ನಾವು ಬಯಸುತ್ತೇವೆ. 

ನಿಮಗೆ ಈ ಎಲ್ಲಾ ಮಾಹಿತಿಗಳು ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳಿ.

ಕರುನಾಡ ಜನತೆಗೆ ನಮಸ್ಕಾರಗಳು…

ಪ್ರಸ್ತುತ 21ನೇ ಶತಮಾನದಲ್ಲಿ ಆನ್ಲೈನ್ ಮುಖಾಂತರ ಹಣ ಗಳಿಸುವುದು ಒಂದು ಟ್ರೆಂಡಿಂಗ್ ಆಗಿದ್ದು ಇದೀಗ ಶೇರು ಮಾರುಕಟ್ಟೆಯಲ್ಲಿ ಕೂಡ ಅತಿ ಹೆಚ್ಚಿನ ಧ್ಯಾನ ಹೊಂದಿದರೆ ನೀವು ಅತಿ ದೊಡ್ಡ ಮೊತ್ತದ ಹಣವನ್ನು ಕೂಡ ಇಲ್ಲಿ ಗಳಿಸಬಹುದಾಗಿದೆ…

ಶೇರು ಮಾರುಕಟ್ಟೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನೀವು ಅತಿ ಸುಲಭವಾಗಿ ದುಡ್ಡನ್ನು ಮಾಡಿಕೊಳ್ಳಬಹುದು. ಹೌದು ಸ್ನೇಹಿತರೆ, ಶೇರು ಮಾರುಕಟ್ಟೆ ಕೂಡ ಒಂದು ಆನ್ಲೈನ್ ಮುಖಾಂತರ ಗಳಿಸುವ ವಿಧವಾಗಿದ್ದು ಇದರಲ್ಲಿ ಅತಿ ಹೆಚ್ಚಿನ ಜನರು ಹಣವನ್ನು ಗಳಿಸುತ್ತಿದ್ದಾರೆ ಅದರಂತೆ ಸ್ವಲ್ಪವು ಜ್ಞಾನ ಇಲ್ಲದೆ ಕೂಡ ಜನರು ಇಲ್ಲಿ ಹಣವನ್ನು ಕಳೆದುಕೊಳ್ಳುತ್ತಿದ್ದು ಅಂತಹ ತಪ್ಪನ್ನು ಮಾಡಬೇಡಿ.

ಶುರು ಮಾರುಕಟ್ಟೆಯಲ್ಲಿ ಅದರದೇ ಆದಂತಹ ಸ್ವಲ್ಪ ನಿಯಮಗಳಿದ್ದು ಆ ನಿಯಮಗಳು ಸಾರವಾಗಿ ನೀವು ಕೆಲಸ ಮಾಡಿದರೆ ಮಾತ್ರ ನಿಮ್ಮ ಕೈಗೆ ದುಡ್ಡು ಬಂದು ಸೇರುತ್ತದೆ…

ಶುರು ಮಾರುಕಟ್ಟೆ ಅತಿ ಸುಲಭವಾಗಲಿ ಎಂದು ಅತಿ ಹೆಚ್ಚಿನ ಆಪ್ ಗಳು ಇದ್ದು ಅದರ ಸಂಪೂರ್ಣ ಮಾಹಿತಿ ಈಗಾಗಲೇ ನಿಮಗೆ ಮೇಲ್ಗಡೆ ತಿಳಿಸಿದ್ದು ಇದರ ಮಾಹಿತಿಯನ್ನು ಪಡೆದುಕೊಂಡು ನೀವು ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹಣ ಗಳಿಸಬಹುದಾಗಿದೆ.

ಚೇರು ಮಾರುಕಟ್ಟೆಯ ಪ್ರತಿ ಮಾಹಿತಿಯೂ ಕೂಡ ಈ ಮೇಲ್ಕಂಡಂತೆ ಇದ್ದಿದ್ದು ಅದರ ಬಗ್ಗೆ ಸ್ವಲ್ಪ ಹರಿವನ್ನು ಮೂಡಿಸಿಕೊಂಡು ನೀವು ಕೂಡ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಹಾಗೆ ಹಣವನ್ನು ಗಳಿಸುವಲ್ಲಿ ಸಫಲರಾಗಿರಿ…

ಶುರು ಮಾರುಕಟ್ಟೆಯಂತೆ ಹಾಗೆ ನೆಟ್ವರ್ಕ್ ಮಾರ್ಕೆಟಿಂಗ್ ಹಾಗೆ ಲಾಗಿನ್ ಯೂಟ್ಯೂಬ್ ಮುಖಾಂತರ ಕೂಡ ನೀವು ಹಣ ಗಳಿಸಬಹುದಾಗಿದೆ ಆದರೆ ಈ ಎಲ್ಲಾ ರೀತಿಯ ಆನ್ಲೈನ್ ಮುಖಾಂತರ ಹಣ ಗಳಿಸಬೇಕೆಂದರೆ ಸ್ವಲ್ಪ ಜ್ಞಾನ ಅತಿ ಅವಶ್ಯಕವಾಗಿದೆ…

ಕೇವಲ ಕೆಲಸ ಮಾತ್ರವಲ್ಲದೆ ಸೈಡ್ ಇನ್ಕಮ್ ಗಳಿಸಲು ಇಚ್ಛಿಸುವವರು ಇಂತಹ ಆನ್ಲೈನ್ ಪ್ಲಾಟ್ಫಾರ್ಮ್ ಮುಖಾಂತರ ಹಣ ಗಳಿಸಬಹುದಾಗಿದೆ..

Leave a Reply

Your email address will not be published. Required fields are marked *