18 May 2024

ಪಿಎಂ ಕಿಸಾನ್ ನೋಂದಣಿ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆ…! ರೈತರಿಗೆ ಗುಡ್ ನ್ಯೂಸ್…! ಹಲವು ಬದಲಾವಣೆಗಳ ಬಗ್ಗೆ ಈಗಲೇ ತಿಳಿಯಿರಿ…!

ಪಿಎಂ ಕಿಸಾನ್ ಸಮ್ಮಾನ್ ನಿಧಿ

ಎಲ್ಲರಿಗೂ ನಮಸ್ಕಾರ ಬಂಧುಗಳೇ. ಈ ಒಂದು ನಮ್ಮ ಜಾಲತಾಣದಲ್ಲಿ ನಾವು ಪ್ರತಿಯೊಬ್ಬರಿಗೆ ಸಹಾಯವಾಗುವಂತಹ ಲೇಖನಗಳನ್ನು ನಿಮಗೆ ನೀಡುತ್ತಿದ್ದು ಬಹು ಮುಖ್ಯವಾಗಿ ರೈತರಿಗೆ ಸಹಾಯವಾಗುವಂತಹ ಲೇಖನಗಳನ್ನು ನಾವು ಒದಗಿಸುತಿದ್ದೇವೆ.

ಇಂದಿನ ಈ ಲೇಖನದಲ್ಲಿ ದೇಶ್ಯಾದ್ಯಂತ ರೈತರ ಅಚ್ಚುಮೆಚ್ಚಿನ ಯೋಜನೆಯಾಗಿರುವಂತಹ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪ್ರಧಾನ ಮಂತ್ರಿಗಳ ರೈತರ ಗೌರವ ನಿಧಿ ಎಂಬ ಈ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಭಾರತ ದೇಶದ ಎಲ್ಲಾ ಅರ್ಹರ ರೈತರಿಗೆ  ವಾರ್ಷಿಕವಾಗಿ ಕಂತುಗಳಲ್ಲಿ 6000 ಕೊಡುವ ಯೋಜನೆ ಇದಾಗಿದೆ. ಈ ಯೋಜನೆಯನ್ನು ಜಾರಿಗೆ ತರಲು 2019ರ ಮಧ್ಯಂತರ ಬಜೆಟ್ ನಲ್ಲಿ ಪಿಯುಶ್ ಗೋಯಲ್ ಅವರು ಜಾರಿಗೆ ತರಲು ಸಕಲ ಸಿದ್ಧತೆ ಮಾಡಿದ್ದರು.

ಈ ಯೋಜನೆಯನ್ನು ಜಾರಿಗೆ ತರಲು ಅನೇಕ ಜನರು ಕಾರಣಿಕರ್ತರಾಗಿದ್ದಾರೆ. ಅವರುಗಳಲ್ಲಿ ಪ್ರಮುಖ ಹೆಸರುಗಳೆಂದರೆ ಐಎಎಸ್ ಆಫೀಸರ್ ಆದಂತಹ ವಿವೇಕ್ ಅಗ್ರವಾಲ್ ರವರು ಪ್ರಮುಖ ವ್ಯಕ್ತಿಗಳಾಗಿದ್ದಾರೆ. ಇನ್ನು ಅನೇಕ ಜನರು ಈ ಒಂದು ಯೋಜನೆಯನ್ನು ಜಾರಿಗೆ ತರಲು ಕಾರಣರಾಗಿದ್ದಾರೆ.

ಪಿಎಂ ಕಿಸಾನ್ ಯೋಜನೆಯ ಒಂದು ಇತಿಹಾಸವನ್ನು ನೋಡುವುದಾದರೆ, ಈ ಯೋಜನೆಯು ಅಧಿಕೃತವಾಗಿ ಜಾರಿಗೆ ಬಂದಿದ್ದು 2019 ಫೆಬ್ರವರಿ 1 ರಂದು.

ಅಂದರೆ ಈ ಯೋಜನೆ ಜಾರಿಗೆ ಬಂದ ಇಲ್ಲಿಗೆ ಹೆಚ್ಚು ಕಡಿಮೆ ನಾಲ್ಕು ವರ್ಷಗಳು ಪೂರೈಕೆಯಾಗಿದೆ. ಈ ಯೋಜನೆಯ ಅನೇಕ ರೈತರ ಮೆಚ್ಚುಗೆಯನ್ನು ಪಡೆದಿದ್ದು, ರೈತರಿಗೆ ಬಹಳ ಅನುಕೂಲಕರವಾಗಿದೆ. ಈ ಸರ್ಕಾರವು ಕೊಡುವ ಈ ರೂ. 6000 ವರ್ಷಕ್ಕೆ ಸಣ್ಣ ಮೊತ್ತವಾಗಿರಬಹುದು.

ಆದರೆ ಅನೇಕ ಬಡ ಕುಟುಂಬಗಳ ಸಣ್ಣ ಪುಟ್ಟ ಖರ್ಚುಗಳಿಗೆ ಜೀವನ ನಡೆಸಲು ಸಹಾಯವಾಗಿದೆ ಎಂದು ತಿಳಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ತರಹದ ಯೋಜನೆಯನ್ನು ತೆಲಂಗಾಣ ಸರ್ಕಾರವು ಇವರಿಗಿಂತ ಮೊದಲೇ ಜಾರಿಗೆ ಬಳಿಸಿತ್ತು. ತೆಲಂಗಾಣ ಸರ್ಕಾರವು ಜಾರಿಗೆ ಗೊಳಿಸಿದ ರೈತ ಹಿತ ಯೋಜನೆ ಹೆಸರು ” ರೈತ ಬಂದು “.

ಈ ಯೋಜನೆಯ ಅಡಿಯಲ್ಲಿ ತೆಲಂಗಾಣ ಸರ್ಕಾರವು ಅರ್ಹ ರೈತರಿಗೆ ಆರ್ಥಿಕ ಸಹಾಯವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸುತಿತ್ತು.

ಈ ಯೋಜನೆಯು ಸಹ ಅನೇಕ ರೈತರ ಮೆಚ್ಚಿಯನ್ನು ಪಡೆದು, ಅದೇ ರೀತಿ ಈ ಯೋಜನೆಗೆ ಅನೇಕ ಪುರಸ್ಕಾರಗಳು ಸಹಿತ ಒಲಿದು ಬಂದಿವೆ. ಇದೇ ರೀತಿ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯು ಅತ್ಯುತ್ತಮ ಯೋಜನೆಯಾಗಿದ್ದು ಅನೇಕ ರೈತರ ಪಾಲಿನ ಬಹು ಸಹಾಯಕವಾಗಿದೆ.

ಈ ಯೋಜನೆಯನ್ನು 2018-19ರ ಮತ್ತೆ ಜಾರಿಗೆ ತರಲು 20 ಸಾವಿರ ಕೋಟಿ ರೂಪಾಯಿಯನ್ನು ಮಂಜೂರು ಮಾಡಲಾಯಿತು. ಈ ಯೋಜನೆಯನ್ನು ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಶ್ರೀ ಮಾನ್ಯ ಪ್ರಧಾನ ಮಂತ್ರಿ ಆವರಾದ ನರೇಂದ್ರ ಮೋದಿಯವರು ಮೊಟ್ಟ ಮೊದಲು ಮೊದಲ ಬಾರಿಗೆ   ಭಾರತ ದೇಶದ ಉತ್ತರ ಪ್ರದೇಶ ರಾಜ್ಯದಲ್ಲಿ ಬರುವ ಗೋರಕ್ ಪುರ್ ಎಂಬ ನಗರದಲ್ಲಿ 2,000 ಯನ್ನು ಅಂದರೆ ಪಿಎಂ ಕಿಸಾನ್ ಯೋಜನೆಯ ಮೊದಲನೇ ಕಂತಿನ ಹಣವನ್ನು ಒಂದು ಕೋಟಿಗೂ ಹೆಚ್ಚು ರೈತರಿಗೆ ವರ್ಗಾಯಿಸುವ ಮೂಲಕ ಈ ಯೋಜನೆಯನ್ನು ಆರಂಭಿಸಿದರು.

ಉತ್ತರ ಪ್ರದೇಶ ರಾಜ್ಯದ ಗೋರಕ್ಪುರ್ ನಗರದಲ್ಲಿ ಈ ಯೋಜನೆಯನ್ನು ಚಾಲನೆ ನೀಡಿದ್ದು 2,000 ಅನ್ನು ಒಂದು ಕೋಟಿ ರೈತರಿಗೂ ಹೆಚ್ಚು ರೈತರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದರು.

ಪಿ ಎಂ ಕಿಸಾನ್ ಯೋಜನೆಯ ಮಹತ್ವ :

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಸಾಲ ಮನ್ನಾ ಮಾಡುವ ಸರ್ಕಾರದ ಯೋಜನೆಗಳಿಗಿಂತ ಅತ್ಯಂತ ಉಪಯುಕ್ತವಾಗಿದೆ. 
ಏಕೆಂದರೆ ಸಾಲ ಮನ್ನಾ ಮಾಡುವುದರಿಂದ ರೈತರು ಇನ್ನಷ್ಟು ಆಲಸಿಯಾಗಿ ಸಾಲವನ್ನು ಹೆಚ್ಚು ಮಾಡುತ್ತಾ ಹೋಗುತ್ತಾರೆ. ಸಾಲ ಮನ್ನಾ ಮಾಡುವುದರಿಂದ ರೈತರಿಗೆ ಸಹಾಯವಾಗುತ್ತದೆ ಖಂಡಿತ ಆದರೆ ಈ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯು ರೈತರ ಸಣ್ಣಪುಟ್ಟ ಖರ್ಚುಗಳಿಗೆ ಟ್ರ್ಯಾಕ್ಟರ್ ಡೀಸೆಲ್ ಖರ್ಚುಗಳಿಗೆ ಅತ್ಯಂತ ಉಪಕಾರಿಯಾಗಿದೆ.

ಅದೇ ರೀತಿ ಬಡ ರೈತರಿಗೆ ಇದು ಬಹಳ ಉಪಯುಕ್ತ  ಯೋಜನೆಯಾಗಿದ್ದು , ಇದನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿಸುವ ಸಾಧ್ಯತೆಗಳಿವೆ. ಸದ್ಯಕ್ಕೆ ಕೇಂದ್ರ ಸರ್ಕಾರದಿಂದ ಅರ್ಹರ ರೈತರಿಗೆ ಪ್ರತಿ ವರ್ಷ ಡಿ ಬಿ ಟಿ ಮುಖಾಂತರ ರೈತರ ಖಾತೆಗೆ ನೇರವಾಗಿ ಮೂರು ಕಂತಗಳಲ್ಲಿ 6 ಸಾವಿರ ರೂಪಾಯಿಯನ್ನು ಹಾಕುತ್ತಿದ್ದಾರೆ. ಅಂದರೆ ಒಂದು ಕಂತಿಗೆ 2000 ಯನ್ನು ಹಾಕುತ್ತಿದ್ದು ಮೂರು ಕಂತ ಎಂದರೆ ಆರು ಸಾವಿರ ರೂಪಾಯಿಗಳ ಒಟ್ಟು ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಡಿಬಿಟಿಯ ಮುಖಾಂತರ ರೈತರ ಖಾತೆಗೆ ಜಮಾ ಮಾಡುತ್ತಿದ್ದಾರೆ.

ಇದೇ ರೀತಿ ತೆಲಂಗಾಣ ಸರ್ಕಾರವು ಕೂಡ ರೈತ ಬಂಧು ಎಂಬ ಯೋಜನೆಯ ಹೆಸರಿನಲ್ಲಿ ಇದೇ ರೀತಿಯ ಯೋಜನೆಯನ್ನು ಜಾರಿಗೆಗೊಳಿಸಿತ್ತು. ಯೋಜನೆಯ ಕೂಡ ಅನೇಕ ರೈತರ ಪಾಲಿಗೆ ಬಹಳ ಉಪಕಾರಿಯಾಗಿದ್ದು. ಇನ್ನು ರೈತ ಬಂದು ಯೋಜನೆಯನ್ನು ಜಾರಿಗೆ ತಂದ ತೆಲಂಗಾಣ ಸರ್ಕಾರದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬೇಕೆಂದರೆ ತೆಲಂಗಾಣ ಸರ್ಕಾರವು ಅನೇಕ ರೈತ ಬಂದು ಅಥವಾ ರೈತ ಹಿತ ಯೋಜನೆಗಳನ್ನು ಸಾಲು ಸಾಲಿಗೆ ಜಾರಿಗೆ ತರುತ್ತಿದ್ದು ಇನ್ನು ಹಲವಾರು ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆ ಇದೆ.

ಈ ಎಲ್ಲಾ ಯೋಜನೆಗಳನ್ನು ರೈತರು ಲಾಭವನ್ನು ಪಡೆದುಕೊಂಡು ತಮ್ಮ ಜೀವನವನ್ನು ಹಸನಾಗಿಸಿಕೊಳ್ಳಿ. ಪ್ ಎಂ ಕಿಸಾನ್ ಯೋಜನೆಯ ವರ್ಷಕ್ಕೆ 6000 ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರವು ಕೂಡ ರೈತರ ಖಾತೆಗೆ ಅರ್ಹರಿರುವ ರೈತರ ಖಾತೆಗೆ ವರ್ಷಕ್ಕೆ 4000 ಹೆಚ್ಚುವರಿ ಮೊತ್ತವನ್ನು ರೈತರ ಖಾತೆಗೆ ಹಾಕುತ್ತಿದೆ. ಏಕೆಂದರೆ ಈ ಹಣವು ರೈತರಿಗೆ  ಸಣ್ಣಪುಟ್ಟ ಖರ್ಚುಗಳಾದ, ಕೂಲಿ ಕಾರ್ಮಿಕರಿಗೆ ಕೊಡಲು ಟ್ಯಾಕ್ಟರ್ ಗೆ ಡೀಸೆಲ್ ಹಾಕಿಸಲು ಇತರೆ ಸಣ್ಣ ಪುಟ್ಟ ಖರ್ಚುಗಳಿಗೆ ಸಹಾಯ ಮಾಡಲಾಗುತ್ತದೆ.

ಈ ಯೋಜನೆಯ ಅಧಿಕೃತವಾಗಿ ಜಾರಿಗೆ ಬಂದ ದಿನಾಂಕ ಯಾವಾಗ?


ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಅಧಿಕೃತವಾಗಿ ಜಾರಿಗೆಗೊಂಡ ದಿನಾಂಕ ವೆಂದರೆ 24ನೇ ಫೆಬ್ರವರಿ 2019 ರಂದು. ಇದನ್ನು ಮೊದಲ ಬಾರಿಗೆ ಉತ್ತರ ಪ್ರದೇಶದ ರಾಜ್ಯದ ಗೋರಕ್ ಪುರ್ ಎಂಬ ನಗರದಲ್ಲಿ ಜಾರಿಗಿಗೊಳಿಸಲಾಗಿತ್ತು. ಈ ಒಂದು ಯೋಜನೆಯು ಅಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭಾರತ ಸರ್ಕಾರದ ಕೇಂದ್ರ ವಲಯದ ಯೋಜನೆಯಾಗಿದೆ. ಯೋಜನೆಯ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಒಂದು ಆದಾಯದ ಮೂಲವನ್ನು ಹೆಚ್ಚಿಹೊಳಿಸಲು ಸಹಕಾರಿಯಾಗಿದ್ದು ಈ ಯೋಜನೆಯ ಬಿಜೆಪಿ ಸರ್ಕಾರದ ಅತ್ಯಂತ ಪ್ರಬಲ ನಾಯಕನಾಗಿರುವ ಶ್ರೀ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ  ಆಡಳಿತದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿತ್ತು.

ಈ ಯೋಜನೆಯನ್ನು ಜಾರಿಗೆ ಗೊಳಿಸುವ ಸಮಯದಲ್ಲಿ ವಿರೋಧ ಪಕ್ಷದ ಅನೇಕ ನಾಯಕರು ಈ ಒಂದು ಯೋಜನೆಗೆ  ಅನೇಕರು ಟೀಕೆ ವ್ಯಕ್ತಪಡಿಸಿದ್ದು ಉಂಟು. ಆದರೆ ಪ್ರಧಾನ ಮಂತ್ರಿಯವರಾದ ಶ್ರೀ ಮಾನ್ಯ ನರೇಂದ್ರ ಮೋದಿಯವರು  ಈ ಕಾಂಜಿಪಿಂಜಿ ಟೀಕೆಗಳಿಗೆಲ್ಲ ಅವರು ಲೆಕ್ಕಿಸದೆ ಈ ಯೋಜನೆಯನ್ನು ಅಂತೂ ಇಂತೂ ಜಾರಿಗೆ ತಂದೇಬಿಟ್ಟರು. ಅದೇ ರೀತಿ ಈ ಯೋಜನೆಯು ಅನೇಕ ರೈತರ ಮೆಚ್ಚುಗೆಯನ್ನು ಕೂಡ ಗಳಿಸಿದೆ. ಈ ಒಂದು ಯೋಜನೆಯನ್ನು ಅಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಇದರ ವ್ಯಾಪ್ತಿಯನ್ನು ಸುಮಾರು 14 ವರೆ ಕೋಟಿ ರೈತರಿಗೆ ಹೆಚ್ಚಿಸುವ ಸಾಧ್ಯತೆಗಳಿವೆ. 

ಜಾರಿಗೆ ತರಲು ಸರಿ ಸುಮಾರು 87,000 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದಾರೆ ಎಂದು ವಿವಿಧ ಮೂಲಗಳು ಹೇಳಿವೆ.

ಈ ಯೋಜನೆಗಳಿಗೆ ಯಾರೆಲ್ಲಾ ಅರ್ಹತೆ ಹೊಂದಿರುತ್ತಾರೆ?

ಯಾವುದೇ ಸರ್ಕಾರವು ಒಂದು ಯೋಜನೆಯನ್ನು ಜಾರಿಗೆಗೋಳಿಸುವ ಮುನ್ನ ಆ ಯೋಜನೆಗೆ ಅರ್ಹತೆಗಳನ್ನು ಮಾನ್ಯಗೊಳಿಸುತ್ತದೆ. ಅಂದರೆ ಪ್ರತಿಯೊಂದು ಯೋಜನೆಗೂ ಕೂಡ ಅದರದೇ ಆದ ಒಂದು ಅರ್ಹತೆಗಳನ್ನು ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅದೇ ರೀತಿ ಈ ಒಂದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದಿಷ್ಟು ಅರ್ಹತೆಗಳನ್ನು ನಿಗದಿಪಡಿಸಿದ್ದಾರೆ.

ಈ ಯೋಜನೆಯ ಅರ್ಹತೆಗಳನ್ನು ನಾವು ನೋಡುವುದಾದರೆ ಅರ್ಹತೆಗಳು ಈ ಕೆಳಗಿನಂತಿವೆ. ಈ ಯೋಜನೆಗೆ ಒಂದು ವೇಳೆ ನೀವು ಅರ್ಜಿ ಸಲ್ಲಿಸುವುದಾದರೆ ಈ ಕೆಳಗಿನ ಅರ್ಹತೆಗಳನ್ನು ಒಮ್ಮೆ ಸಂಪೂರ್ಣವಾಗಿ ಓದಿ ನೀವು ಅರ್ಹ ಎನಿಸಿದರೆ ಈ ಕೂಡಲೇ ನಾವು ಮುಂದಿನ ಭಾಗದಲ್ಲಿ ತಿಳಿಸಿರುವ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಅರ್ಜಿ ಸಲ್ಲಿಸಲು ಮುಂದಾಗಿರಿ.

ಈಗ ನಾವು ಈ ಕೆಳಗಿನ ಒಂದು ಅಂಕಣದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರಿರುತ್ತಾರೆ ಎಂದು ನೋಡುವುದಾದರೆ ಅರ್ಹತೆಗಳು ಈ ಕೆಳಗಿನಂತಿರುತ್ತವೆ.

ಮೊದಲನೆಯ ಅರ್ಹತೆಯನ್ನು ನೋಡುವುದಾದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ರೈತನಾಗಿರಬೇಕು. ಅಭ್ಯರ್ಥಿಯು ರೈತನಾಗಿದ್ದರೆ ಅಥವಾ ಅವನ ಹೆಸರಿನಲ್ಲಿ ಹೊಲವಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ನೀವು ರೈತರಿದ್ದರೂ ಕೂಡ ಅದರಲ್ಲಿ ಅನೇಕ ಒಂದು ವರ್ಗಗಳು ಬರುತ್ತವೆ. ಅವುಗಳಲ್ಲಿ ಸಣ್ಣ ರೈತನು, ಅತಿ ಸಣ್ಣ ರೈತನ ಮಧ್ಯಮ ರೈತನು ಎಂಬ ಅನೇಕ ವರ್ಗಗಳನ್ನು ಮಾಡಲಾಗುತ್ತದೆ. ಆದರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಮಾತ್ರ ಅರ್ಹರಿರುತ್ತಾರೆ.

ಅದೇ ರೀತಿ ಮತ್ತೊಂದು ಅರ್ಹತೆಯನ್ನು ನೋಡುವುದಾದರೆ ಯೋಜನೆಗೆ ಅರ್ಜಿ ಸಲ್ಲಿಸಲು ಒಬ್ಬ ರೈತನ ಹೆಸರಿನಲ್ಲಿ ಎರಡು ಹೆಕ್ಟರಿಗಿಂತ ಕಡಿಮೆ ಭೂಮಿಯನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಇರುತ್ತಾರೆ.

ಒಂದು ವೇಳೆ ನೀವು ಸಣ್ಣ ಮತ್ತು ಮಧ್ಯ ಪ್ರಮಾಣದ ರೈತರಾಗಿದ್ದು ಮತ್ತು ಎರಡು ಹೆಕ್ಟರ್ಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದರೆ ಈ ಕೂಡಲೇ ನೀವು ಅರ್ಜಿ ಸಲ್ಲಿಸಲು ಅರ್ಹರಿರುತ್ತೀರಿ. ನೀವು ಈಗ ಈ ಅಂಶಗಳನ್ನು ನೋಡಿದ ನಂತರ ಅರ್ಹರೆನಿಸಿದರೆ ಈ ಕೂಡಲೇ ನಿಮ್ಮ ಹತ್ತಿರವಿರುವ ಕೃಷಿ ಇಲಾಖೆಗೆ ಭೇಟಿ ನೀಡಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಇರುವ ಅಧಿಕಾರಿಗಳೊಂದಿಗೆ ಮಾತನಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೀವು ಅರ್ಹರೆನಿಸಿದರೆ ಅರ್ಜಿ ಸಲ್ಲಿಸಲು  ಈ ಕೆಳಗಿನ ದಾಖಲಾತಿಗಳು ಅತಿ ಅವಶ್ಯಕವಾಗಿರುತ್ತವೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ದಾಖಲಾತಿಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡು ನೀವು ಅರ್ಜಿ ಸಲ್ಲಿಸಲು ಮುಂದಾಗಿರಿ.

ಈಗ ಅರ್ಜಿ ಸಲ್ಲಿಸುವ ಪ್ರಮುಖ ದಾಖಲಾತಿಗಳನ್ನು ನೋಡುವುದಾದರೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳ ಪಟ್ಟಿ ಈ ಕೆಳಗಿನಂತಿವೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲಾತಿಗಳು:
ಅರ್ಜಿ ಸಲ್ಲಿಸಲು ಪ್ರಮುಖವಾಗಿ  ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿರುವ ಹೊಲದ ಉತಾರ ಅಥವಾ ಆರ್ ಟಿ ಸಿ ಪ್ರಮಾಣ ಪತ್ರ ಅಥವಾ ಭೂ ಹಿಡುವಳಿ ಪತ್ರಗಳು.

ಅಂದರೆ ರೈತನ ಹೆಸರಿನಲ್ಲಿರುವ ಹೊಲದ ಉತಾರದ ಮಾಹಿತಿಗಳು ಅತಿ ಅವಶ್ಯಕವಾಗಿರುತ್ತವೆ. ಅದೇ ರೀತಿ ಅರ್ಜಿ ಸಲ್ಲಿಸಲು ರೈತನ ಬ್ಯಾಂಕ್ ಖಾತೆ ವಿವರಗಳು, ಅರ್ಜಿ ಸಲ್ಲಿಸುವಾಗ ರೈತನ ಯಾವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇರುತ್ತದೆ ಅದೇ ಬ್ಯಾಂಕ್ ಖಾತೆಯ ವಿವರಗಳನ್ನು ಅರ್ಜಿ ಸಲ್ಲಿಸಲು ನೀಡಬೇಕಾಗುತ್ತದೆ. ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಅರ್ಜಿದಾರನ ಆಧಾರ್ ಕಾರ್ಡ್ ಬಹು ಅವಶ್ಯಕತೆ.

ಅದೇ ರೀತಿ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಅತಿ ಅವಶ್ಯಕವಾಗಿರುತ್ತದೆ. ಎಂದರೆ ಅರ್ಜಿ ಸಲ್ಲಿಸುವಾಗ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಈ ಓಟಿಪಿಯನ್ನು ಹೇಳಿದ ನಂತರ ಮಾತ್ರ ನೀವು ಅರ್ಜಿ ಸಲ್ಲಿಸಲು ಮುಂದುವರಿಸಬಹುದು.

ಇದೇ ರೀತಿ ಇನ್ನು ಹೆಚ್ಚಿನ ದಾಖಲಾತಿಗಳನ್ನು ನೋಡುವುದಾದರೆ ರೇಷನ್ ಕಾರ್ಡ್ ಪೌರತ್ವ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಇತ್ಯಾದಿಯ ಅಗತ್ಯ ದಾಖಲಾತಿಗಳನ್ನು ನೀವು ರೆಡಿ ಮಾಡಿಕೊಂಡು ಅರ್ಜಿ ಸಲ್ಲಿಸಲು ಮುಂದಾಗಿರಿ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರಿರುವುದಿಲ್ಲ :

ಇಲ್ಲಿಯವರೆಗೆ ನಾವು ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲಾತಿಗಳ ಬಗ್ಗೆ ತಿಳಿದುಕೊಂಡೆವು. ಅದೇ ರೀತಿ ಯಾವುದೇ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೊಂದಿಗೆ, ಅನರ್ಹತೆಗಳನ್ನು ಕೂಡ ನಿಗದಿಪಡಿಸಿರುತ್ತಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅನರ್ಹತೆಗಳನ್ನು ನಾವು ನೋಡುವುದಾದರೆ, ಅರ್ಜಿ ಸಲ್ಲಿಸಲು ಅನರ್ಹತೆಗಳು ಪಟ್ಟಿ ಈ ಕೆಳಗಿನಂತಿದೆ.

ಅರ್ಜಿ ಸಲ್ಲಿಸಲು ಜಿಲ್ಲಾ ಪಂಚಾಯತ್ ನಲ್ಲಿ ಮಾಜಿ ಹಾಗೂ ಹಾಲಿ ಅಧ್ಯಕ್ಷರು ಅವರ ಹೆಸರಿನಲ್ಲಿ ಹೊಲ ಹೊಂದಿದ್ದರೂ ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.  ಜಿಲ್ಲಾ ಪಂಚಾಯತ್ ಅಧ್ಯಕ್ಷರ ಜೊತೆಗೆ ಮಹಾನಗರ ಪಾಲಿಕೆಗಳ ಮಾಜಿ ಮತ್ತು ಹಾಲಿ ಮೇಯರ್ ಗಳು ಕೂಡ  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುವುದಿಲ್ಲ.

ಅದೇ ರೀತಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಒಂದು ಸೇವೆಯನ್ನು ನೀವು ಸಲ್ಲಿಸುತ್ತಿದ್ದರೆ ಅಥವಾ ಆಸೆವೆಯಿಂದ ನಿವೃತ್ತಿಯನ್ನು ಹೊಂದಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅರ್ಹತೆಯನ್ನು ಹೊಂದಿರುವುದಿಲ್ಲ.

ಅದೇ ರೀತಿ ಇಂಜಿನಿಯರ್ಗಳು ವೈದ್ಯರು ಅಥವಾ ಸರ್ಕಾರಿ ಶಿಕ್ಷಕರು, ನಮ್ಮ ಹೆಸರಿನಲ್ಲಿ ಹೊಲ ಹೊಂದಿದ್ದರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುವುದಿಲ್ಲ. ಅದೇ ರೀತಿ ಇವೆಲ್ಲರನ್ನೂ ಹೊರತುಪಡಿಸಿ ಒಂದು ವೇಳೆ ನೀವು ತೆರಿಗೆಯನ್ನು ಪಾವತಿಸುತ್ತಿದ್ದರೆ ನೀವು ಅರ್ಹತೆಯನ್ನು ಹೊಂದಿರುವುದಿಲ್ಲ.

ಅದೇ ರೀತಿ ಯಾವುದೇ ಪ್ರಕಾರದ ಸೌಲಭ್ಯದ ಸ್ಥಳ ಮಾಲೀಕರು ಪಿ ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಹತೆಯನ್ನು ಹೊಂದಿರುವುದಿಲ್ಲ. ಎಲ್ಲಾ ಪ್ರಸ್ತುತ ಅಥವಾ ನಿರ್ವೃತ್ತ ಹೊಂದಿದ ಅಧಿಕಾರಿಗಳು ಹಾಗೂ ನಿಯಮಿತ ಉದ್ಯೋಗಿಗಳು ಅರೆಕಾಲಿಕ ಉದ್ಯೋಗಗಳು ಗ್ರೂಪ್ ಡಿ ಉದ್ಯೋಗಿಗಳು ಹೊರತುಪಡಿಸಿ.
ಅದೇ ರೀತಿ ರಾಜಕೀಯ ನಾಯಕರಾದಂತಹ ಮಾಜಿ ಮತ್ತು ಹಾಲಿ ರಾಜ್ಯ ಸಚಿವರು ಲೋಕಸಭಾ ಸಚಿವರು ರಾಜ್ಯ ಲೆಜೆಸ್ಟೆಟಿವ್ ಕೌನ್ಸಿಲ್ ಮಾಜಿ ಅಥವಾ ಪ್ರಸ್ತುತ ಸದಸ್ಯರು ಸರ್ಕಾರದ ಹಿಂದಿನ ಮತ್ತು ಹಾಲಿ ಮೇಯರ್ ಅಥವಾ ಜಿಲ್ಲಾ ಪಂಚಾಯತ್ ಹಿಂದಿನ ಅಥವಾ ಹಾಲಿ ಅಧ್ಯಕ್ಷರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುವುದಿಲ್ಲ.

ಈ ಒಂದು ಲೇಖನದಲ್ಲಿ ನಾವು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಅನರ್ಹತೆಗಳನ್ನು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನಂತರ ಮಾತ್ರ ಅರ್ಜಿ ಸಲ್ಲಿಸಬೇಕು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಅರ್ಹ ಮತ್ತು ಫಲಾನುಭವಿಗಳಿಗೆ ಪ್ರತಿ ವರ್ಷ ಮೂರು ಕಂತಗಳಲ್ಲಿ ಸಾವಿರ ರೂಪಾಯಿಯನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡುತ್ತಿದ್ದು, ಅಂದರೆ ಒಂದು ಕಂತಿಗೆ 2,000 ರೂಪಾಯಿಯನ್ನು ರೈತರ ಖಾತೆಗೆ ನೇರವಾಗಿ ಡೈರೆಕ್ಟ ಬೆನಿಫಿಟ್ ಟ್ರಾನ್ಸ್ಫರ್ ಅಥವಾ ಡಿ ಬಿ ಟಿ ಮುಖಾಂತರ ರೈತರ ಖಾತೆಗೆ ನೇರವಾಗಿ ಆಧಾರ್ ಕಾರ್ಡ್ ನಂಬರ್ ಮುಖಾಂತರ ಹಣವನ್ನು ವರ್ಗಾವಣೆ ಮಾಡುತ್ತಿದೆ.

ಈ ಯೋಜನೆಗೆ ನೀವು ಅರ್ಹತೆಯನ್ನು ಹೊಂದಿರದೆ ಇದ್ದರೆ ಯಾವುದೇ ಕಾರಣಕ್ಕೂ ನೀವು ಅರ್ಜಿ ಸಲ್ಲಿಸಬೇಡಿ. ಏಕೆಂದರೆ  ಕೆಲವಂದಿಷ್ಟು ಜನರು ತಾವು ರೈತರು ಅಥವಾ ಸಣ್ಣ ಪ್ರಮಾಣದ ರೈತರು ಎಂದು ತಪ್ಪು ದಾರಿ ಹಿಡಿದು ಸುಳ್ಳು ದಾಖಲಾತಿಗಳನ್ನು ಮಾಡಿಸಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಇಂಥವರು ಸರ್ಕಾರದ ಕಣ್ಣಿಗೆ ಬಿದ್ದರೆ ಶಿಕ್ಷೆಯನ್ನು ಅನುಭವಿಸುವುದು ಮಾತ್ರ ಗ್ಯಾರಂಟಿ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮುಂಚೆ ನೀವು ಅರ್ಹತೆಯನ್ನು ಹೊಂದಿದ್ದೀರಾ ಇಲ್ಲವಾ ಎಂದು ಸರಿಯಾಗಿ ಗಮನಿಸಿಕೊಂಡ ನಂತರವೇ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಿ.

ನೀವು ಅರ್ಹತೆಯನ್ನು ಹೊಂದಿರದೆ ಅರ್ಜಿ ಸಲ್ಲಿಸಿದರೆ ನಿಮಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಜಾರಿಗೆ ತಂದ ಮುಖ್ಯ ಉದ್ದೇಶವೇನೆಂದರೆ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ರೈತರಿಗೆ ಒಂದು ಆರ್ಥಿಕ ಸಹಾಯವನ್ನು ನೀಡಲು. ಈ ಒಂದು ಯೋಜನೆಗೆ ಈಗಾಗಲೇ ಅನೇಕ ಜನರು ಅರ್ಜಿ ಸಲ್ಲಿಸಿದ್ದು ಪ್ರತಿ ವರ್ಷ 3ಕಂಥಗಳಲ್ಲಿ ಅಂದರೆ ಪ್ರತಿ ವರ್ಷಕ್ಕೆ ಆರು ಸಾವಿರ ರೂಪಾಯಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಒಂದು ಹಣವು ಸಣ್ಣಪುಟ್ಟ ಖರ್ಚುಗಳಾದ ಅಥವಾ ವೆಚ್ಚಗಳಾದ ಗೊಬ್ಬರ ಬೀಜಗಳು ಟ್ರ್ಯಾಕ್ಟರ್ ಮತ್ತು ಡೀಸೆಲ್ ಖರ್ಚಿಗೆ ಈ ಹಣವನ್ನು ಉಪಯೋಗಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೀತಿ ರೈತರಿಗೆ ಸಹಾಯವಾಗುವಂತಹ ಇನ್ನು ಹಲವಾರು ರೈತ ಹಿತ ಯೋಜನೆಗಳು ಕೇಂದ್ರ ಸರ್ಕಾರದಿಂದ ಜಾರಿಗೆಗೊಂಡಿದ್ದು ಅವುಗಳಲ್ಲಿ ಮತ್ತೊಂದು ಪ್ರಮುಖವಾದ ಯೋಜನೆ ಎಂದರೆ ” ಕಿಸಾನ್ ಸಮೃದ್ಧಿ ಕೇಂದ್ರಗಳು  “.

ಕಿಸಾನ್ ಸಮೃದ್ಧಿ ಕೇಂದ್ರಗಳು :

ಭಾರತ ಕೇಂದ್ರ ಸರ್ಕಾರವು ರೈತರಿಗೆ ಒಂದು ಸಣ್ಣ ಪುಟ್ಟ ಖರ್ಚುಗಳಿಗೆ ಆರ್ಥಿಕ ಸಹಾಯ ನೀಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿತ್ತು. ಅದೇ ರೀತಿ ಮತ್ತೊಂದು ಯೋಜನೆಯನ್ನು ನಾವು ನೋಡುವುದಾದರೆ ಕಿಸಾನ್ ಸಮೃದ್ಧಿ ಕೇಂದ್ರಗಳು ಎಂಬ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ.

ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ರೈತರಿಗೆ ರಾಸಾಯನಿಕ ಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ನೀಡಲು. ಇಲ್ಲಿಯವರೆಗೆ ಕೇಂದ್ರ ಸರ್ಕಾರವು 600 ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಅನುಷ್ಠಾನಗೊಳಿಸಿದ್ದು, ಈ ಯೋಜನೆಯ ಅಡಿಯಲ್ಲಿ ” ಒಂದು ರಾಷ್ಟ್ರ ಒಂದು ರಸ ಗೊಬ್ಬರ ” ಎಂಬ ಹೆಸರಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ್ದರು. ಯೋಜನೆಯನ್ನು ಆರಂಭಿಸುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ ಎಂಬ ಘೋಷಣೆಗಳ ಮೂಲಕ ಈ ಯೋಜನೆಯನ್ನು ಜಾರಿಗೆ ತಂದಿತ್ತು.

ರೈತರಿಗೆ ಸಹಾಯವಾಗುವಂತಹ ಕರ್ನಾಟಕದ ಅತಿ ಉಪಯುಕ್ತ ಯೋಜನೆ :

ಕಳೆದ ಬಾರಿ ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಸಚಿವರಾದ, ಹಿರೆಕೆರೂರು ತಾಲೂಕು ಮತ ಕ್ಷೇತ್ರದ ಎಂಎಲ್ಎ ಅವರಾದ ಶ್ರೀಮಾನ್ಯ ಬಿಸಿ ಪಾಟೀಲ್ ರವರು ಒಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದರು. ಅದೇನೆಂದರೆ ಡೀಸೆಲ್‍ನ ಕರ್ಚಿಗೆ ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ ಐದು ಎಕರೆಯವರೆಗೆ ರೈತರ ಖಾತೆಗೆ ನೇರವಾಗಿ ಹಣವನ್ನು ಸಂದಾಯ ಮಾಡುವ ಈ ಯೋಜನೆಯನ್ನು ಶ್ರೀಮಾನ್ಯ ಬಿಸಿ ಪಾಟೀಲ್ ರವರು ಜಾರಿಗೆ ತಂದಿದ್ದರು.

ಈ ಯೋಜನೆಯ ಹೆಸರು ರೈತಶಕ್ತಿ. ಕರ್ನಾಟಕ ರಾಜ್ಯ ಸರ್ಕಾರವು ಅಥವಾ ಕೇಂದ್ರ ಸರ್ಕಾರವು ರೈತರಿಗೆ ಯಾವುದೇ ಒಂದು ಯೋಜನೆಯನ್ನು ಅಥವಾ ಯೋಜನೆಯ ಲಾಭವನ್ನು ನೀಡಲು ಬಳಸುವ ಒಂದು ಮುಖ್ಯ ಮಾಹಿತಿ ಎಂದರೆ ಅದು ಫ್ರೂಟ್ಸ್ ಐಡಿ  ( FRUITS ID ).

FRUITS ID :

ಸರ್ಕಾರದಿಂದ ರೈತರಿಗೆ ಸಹಾಯವಾಗುವಂತಹ ಯಾವುದೇ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ನೀವು ಮುಖ್ಯವಾಗಿ ಹೊಂದಿರಬೇಕಾದದ್ದ ಫ್ರೂಟ್ಸ್ ಐಡಿ. ಒಂದು ವೇಳೆ ನಿಮ್ಮ ಎಲ್ಲಾ ಹೊಲದ ಮಾಹಿತಿಯನ್ನು ನೀವು ಫ್ರೂಟ್ಸ್ ಪೋರ್ಟನಲ್ಲಿ ನೋಂದಾಯಿಸದೆ ಇದ್ದರೆ, ಈ ಕೂಡಲೇ ನಿಮ್ಮ ಹತ್ತಿರ ಬರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫ್ರೂಟ್ಸ್ ಪೋರ್ಟಲ್ಲಿ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಹೊಲಗಳನ್ನು ಅಥವಾ ಹೊಲಗಳ ಸರ್ವೆ ನಂಬರ್ ಗಳನ್ನು ಫ್ರೂಟ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳುವುದು ಅತಿ ಅವಶ್ಯಕವಾಗಿದೆ.

ಇದೇ ರೀತಿ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಸಹಾಯವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಸರ್ಕಾರದಿಂದ ರೈತರಿಗೆ ಸಹಾಯವಾಗುವಂತಹ ಅನೇಕ ಯೋಜನೆಗಳು ಲಭ್ಯವಿದ್ದು ಅನೇಕ ರೈತರಿಗೆ ಇದರ ಮಾಹಿತಿಗಳು ಕೂಡ ಲಭ್ಯವಿಲ್ಲ. ಈ ಒಂದು ತೊಂದರೆಯನ್ನು ಕಂಡ ನಾವು ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ರೈತರಿಗೆ ಸಹಾಯವಾಗುವಂತಹ ಅಥವಾ ಪ್ರತಿಯೊಬ್ಬ ನಾಗರಿಕರಿಗೆ ಉಪಯೋಗವಾಗುವಂತಹ ನಿಖರ ಮಾಹಿತಿಗಳನ್ನು ಅಥವಾ ಯೋಜನೆಗಳ ಮಾಹಿತಿಯನ್ನು ನಮ್ಮ ವೆಬ್ಸೈಟ್ನಲ್ಲಿ ದಿನನಿತ್ಯ ನೀಡುತ್ತಿರುತ್ತೇವೆ.

ಪ್ರತಿದಿನದ ನಮ್ಮ ಈ ಮಾಹಿತಿಗಳು ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ರೈತ ಬಾಂಧವರಿಗೂ ಅಥವಾ ಕುಟುಂಬ ಸದಸ್ಯರಿಗೂ ಸ್ನೇಹಿತರಿಗೂ ಎಲ್ಲರಿಗೂ ಈ ಮಾಹಿತಿಯನ್ನು ಹಂಚಿಕೊಂಡು ಸರ್ವರಿಗೂ ಜ್ಞಾನ ಹಂಚುವ ಕೆಲಸವನ್ನು ಮಾಡಿರಿ.

ಮುಂದಿನ ದಿನಗಳಲ್ಲಿ ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ದಿನನಿತ್ಯ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳ ದಿನನಿತ್ಯದ ಹೊಸ ಹೊಸ ಅಪ್ ಡೇಟ್ ಗಳನ್ನು ನಾವು ನೀಡುತ್ತೇವೆ. ನಿಮಗೆ ಈ ಎಲ್ಲ ಮಾಹಿತಿಗಳು ಉಪಯುಕ್ತವೆನಿಸಿದರೆ ಸಂಪೂರ್ಣವಾಗಿ ಮಾಹಿತಿಗಳನ್ನು ತಿಳಿದುಕೊಂಡು ಸರ್ಕಾರದ ಎಲ್ಲಾ ಯೋಜನೆಗಳ ಲಾಭವನ್ನು ಪಡೆದುಕೊಂಡು ನಿಮ್ಮ ಸ್ನೇಹಿತ ಅಥವಾ ಕುಟುಂಬ ಸದಸ್ಯರಿಗೂ ಕೂಡ ನಮ್ಮ ವೆಬ್ ಸೈಟಿನ ಮಾಹಿತಿಗಳನ್ನು ಶೇರ್ ಮಾಡಿ ಎಲ್ಲರೂ ಎಲ್ಲ ಯೋಜನೆಗಳ ಲಾಭವನ್ನು ಪಡೆಯುವಂತೆ ಮಾಡಿರಿ. ಜೈ ಜವಾನ್ ಜೈ ಕಿಸಾನ್ ಜೈ ಕರ್ನಾಟಕ ಮಾತೆ.

ಪಿ ಎಮ್ ಕಿಸಾನ್ ನೋಂದಣಿ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆಗಳಾಗಿದ್ದು ಇದರ ಸಂಪೂರ್ಣ ವಿವರಣೆ ಈಗಾಗಲೇ ನಿಮಗೆ ಮೇಲ್ಕಂಡಂತೆ ತಿಳಿದಿದ್ದು ಈಗ ಹೊಸ ನೊಂದಣಿ ಪ್ರಕ್ರಿಯೆಯಲ್ಲಿ ರೈತರು ಮಾಡಿಸಿಕೊಳ್ಳಬಹುದಾಗಿದೆ..

ಪ್ರಧಾನಮಂತ್ರಿಯವರಿಂದ ರೈತರಿಗಾಗಿ 10 ಹಲವಾರು ಯೋಜನೆಗಳು ಬರುತ್ತಿದ್ದು ಅದರಲ್ಲಿ ಬೆಳೆ ವಿಮೆಯು ಕೂಡ ಒಂದಾಗಿದ್ದು ಬೆಳೆ ವಿಮೆ ಪಡೆದುಕೊಳ್ಳಬೇಕೆಂದರೆ ವರ್ಷಕ್ಕೆ ಮುಂಗಾರು ಹಾಗೂ ಮುಂಗಾರು ಎಂದು ಎರಡು ವಿಧದಲ್ಲಿ ಬೆಳೆವಿಮೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ…

ಬೆಳೆ ವಿಮೆ ಪಡೆದುಕೊಳ್ಳಬೇಕೆಂದರೆ ಬೆಳೆ ವಿಮೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಇದಾದ ನಂತರ ಬೆಳೆ ಸಮೀಕ್ಷೆ ಯಾವ ಬಳಸಿಕೊಂಡು ನಿಮ್ಮ ಹೊಲದಲ್ಲಿರುವ ಬೆಳೆಯ ಸಮೀಕ್ಷೆ ಅಂದರೆ ಫೋಟೋ ತೆಗೆದುಕೊಂಡು ಬೆಳೆ ವಿಮೆಯ ಸಮೀಕ್ಷೆ ಮೊಬೈಲ್ನಲ್ಲಿ ಮಾಡಬೇಕಾಗುತ್ತದೆ…

ಬೆಳೆ ಸಮೀಕ್ಷೆ ಮಾಡಿದ ನಂತರ ಸರ್ಕಾರದಿಂದ ಮಾನ್ಯತೆ ಗೊಂಡರೆ ತಗೊಂಡಿದರೆ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುತ್ತದೆ ಇಂತಹ 10 ಹಲವಾರು ಯೋಜನೆಗಳು ಪ್ರಧಾನಮಂತ್ರಿಯವರಿಂದ ರೈತರಿಗಾಗಿ ಸಹಾಯವಾಗಲೆಂದು ಬರುತ್ತಿದ್ದು ಇದೀಗ ಪಿಎಂ ಕಿಸಾನನ ನೊಂದಣಿ ಪ್ರಕ್ರಿಯೆಯಲ್ಲಿಯೂ ಕೂಡ ಹಲವಾರು ಬದಲಾವಣೆಗಳನ್ನು ತರಲಾಗಿದೆ..

ಪಿಎಂ ಕಿಸಾನ್ನ ಯೋಜನೆ ಅಡಿಯಲ್ಲಿ ವರ್ಷಕ್ಕೆ ಆರು ಸಾವಿರ ರೂಪಾಯಿ ರೈತರ ಖಾತೆಗೆ ಜಮಾ ಆಗಲಿದ್ದು ಯಾವ ಹೊಸ ರೈತರು ಅಂದರೆ ತಮ್ಮ ಹೆಸರಿನಲ್ಲಿ ಪಹಣಿ ನೋಂದಣಿ ಆಗಿರುತ್ತದೆಯೋ ಅಂತ ಹಾರೈತರು ಹೆಸರನ್ನು ನೋಂದಾಯಿಸಿಕೊಂಡರೆ ನಿಮ್ಮ ಕಾತಿಗೂ ವರ್ಷಕ್ಕೆ ಆರು ಸಾವಿರ ರೂಪಾಯಿ ಜಮಾ ಆಗಲಿದೆ..

ಈಗಾಗಲೇ ಈ ವರ್ಷದ ಮುಂಗಾರು ಹಾಗೂ ಹಿಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಇರುವಂತಹ ರೈತರಿಗೆ ಬೆಳೆವಿಮೆ ಮುಂದಿನ ದಿನಗಳಲ್ಲಿ ಜಮಾ ಆಗಲಿದ್ದು ನಿಮ್ಮ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಂಡು ನಿಮ್ಮ ಖಾತೆಗೆ ಬೆಳೆವಿಮೆ ಜಮಾ ಆಗುತ್ತದೆಯಾ ಅಥವಾ ಇಲ್ಲವೋ ಎಂದು ಅತಿ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ..

ಹೀಗೆ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯ ಬಗ್ಗೆ ನಾವು ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪಿಎಂ ಕಿಸಾನನ 10 ಹಲವಾರು ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.

Leave a Reply

Your email address will not be published. Required fields are marked *