18 May 2024

SSLC ಮುಗಿದ ನಂತರ ಮುಂದೇನು ಮಾಡಬೇಕು ಎಂದು ಯೋಚಿಸಿವಂತರವರಿಗೆ ಇಲ್ಲಿದೆ ನೋಡಿ ಮಾಹಿತಿ…!

SSLC ಮುಗಿದ ನಂತರ ಮುಂದೇನು ಮಾಡಬೇಕೆಂದು ಯೋಚಿಸುತ್ತಿರುವವರಿಗೆ ಎಲ್ಲಿದೆ ಸರಿಯಾದ ಮಾರ್ಗದರ್ಶನ…

ನಮಸ್ಕಾರ ಎಲ್ಲಾ ಆತ್ಮೀಯ ಬಂಧುಗಳಿಗೆ. ಜ್ಞಾನ ಸಂಜೀವಿನಿ ಈ ವೆಬ್ ಸೈಟ್ ಪ್ರತಿದಿನ ಎಲ್ಲಾ ಸಾರ್ವಜನಿಕರಿಗೂ ಮತ್ತು ರೈತರಿಗೂ ಉಪಯುಕ್ತವಾದ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಒಂದು ಲೇಖನವನ್ನು ನಿಮಗೆ ನೀಡುತ್ತಿದ್ದೇವೆ.

ಈ ಲೇಖನದಲ್ಲಿ 10ನೇ ತರಗತಿ ಮುಗಿದ ನಂತರ ಮುಂದಿನ ಶಿಕ್ಷಣ ಮುಂದುವರಿಸಲು ಏನೆಲ್ಲ ಆಯ್ಕೆಗಳಿವೆ ಎಂಬ ಸಮಗ್ರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಿದ್ದೇವೆ.

10ನೇ ತರಗತಿ ನಂತರ ಮುಂದೇನು ಮಾಡಬಹುದು?

  • ಈ ಲೇಖನದಲ್ಲಿ ನಾವು 10ನೇ ತರಗತಿ ಮುಗಿದ ನಂತರ ಏನೆಲ್ಲಾ ಆಯ್ಕೆಗಳಿವೆ ಹಾಗೂ 10ನೇ ತರಗತಿಯನ್ನು ಮುಗಿದ ನಂತರ ಯಾವೆಲ್ಲಾ ಸರ್ಕಾರಿ ಕೆಲಸಗಳು ನಿಮಗೆ ಸಿಗಬಹುದು ಎಂಬ ಮಾಹಿತಿಯನ್ನು ನೀಡಲಿದ್ದೇವೆ.

10ನೇ ತರಗತಿ ಮುಗಿದ ನಂತರ ಎರಡು ದೋಣಿಯ ಮಧ್ಯೆ ಕಾಲಿಡುವುದು ಹಾಗೆ ತಮ್ಮ ಜೀವನವಾಗಿಬಿಡುತ್ತದೆ ಅವುಗಳೆಂದರೆ ಸೈನ್ಸ್ ಮತ್ತು ಕಾಮರ್ಸ್ ಅಥವಾ ಆರ್ಟ್ಸ್. 10ನೇ ತರಗತಿ ಮುಗಿದ ನಂತರ ಅನೇಕ ವಿದ್ಯಾರ್ಥಿಗಳ ಆಯ್ಕೆ ಇರುತ್ತದೆ. ಏಕೆಂದರೆ ಅವರ ಒಂದು ಕಲ್ಪನೆಯಲ್ಲಿದ್ದಾರೆ ಅದೇನೆಂದರೆ ಸೈನ್ಸ್ ಮಾಡಿದರೆ ಮುಂದೆ ಬಹು ಅವಕಾಶಗಳಿವೆ ಎಂಬ.

ಆದರೆ ಇದನ್ನು ತಪ್ಪು ಕಲ್ಪನೆಯಾಗಿದ್ದು 10ನೇ ತರಗತಿ ಮುಗಿದ ನಂತರ ಕೇವಲ ಪಿಯುಸಿ ಸೈನ್ಸ್ ಮಾಡದೆ ಬೇರೆ ಬೇರೆ ವಿವಿಧ ಕೋರ್ಸ್ ಗಳನ್ನು ಮಾಡಿ ಅನೇಕ ಜನರ ಜೀವನದಲ್ಲಿ ಸಾಧನೆ ಮಾಡಿದ್ದಾರೆ. 10ನೇ ತರಗತಿ ಮುಗಿದ ನಂತರ ಅನೇಕ ಕೋರ್ಸ್ ಗಳನ್ನು ಹೊರತುಪಡಿಸಿ ಅನೇಕ ಸರ್ಕಾರಿ ನೌಕರಿಗಳು ಕೂಡ ಖಾಲಿ ಇವೆ. ನೀವು 10ನೇ ತರಗತಿ ಮುಗಿದ ನಂತರ 18 ವರ್ಷಗಳ ಒಂದು ವಯೋಮಿತಿ ಹೊಂದಿದ್ದರೆ ಅನೇಕ ಸರ್ಕಾರ ನೌಕರಿಗಳು ನಿಮಗಾಗಿ ಕಾಯುತ್ತಿವೆ.

  • ಅವುಗಳಲ್ಲಿ ಕೆಲವೊಂದಿಷ್ಟು ಸರ್ಕಾರಿ ಹುದ್ದೆಗಳನ್ನು ನಾವು ಮುಂಬರುವ ಒಂದು ಲೇಖನದಲ್ಲಿ ನೀಡಲಿದ್ದೇವೆ. ಬನ್ನಿ ವಿದ್ಯಾರ್ಥಿಗಳ 10ನೇ ತರಗತಿ ಮುಗಿದ ನಂತರ ವಿಜ್ಞಾನ ವಿಷಯವನ್ನು ಹೊರತುಪಡಿಸಿ ಏನೆಲ್ಲಾ ಆಯ್ಕೆಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

PUC Science : 10ನೇ ತರಗತಿ ಮುಗಿದ ನಂತರ ಅನೇಕ ಜನರ ಆಯ್ಕೆ ವಿಜ್ಞಾನ ಅದೇ ಪಿಯುಸಿ ಸೈನ್ಸ್. ಹೌದು ನಾವು ಒಪ್ಪುತ್ತೇವೆ, ಪಿಯುಸಿ ಸೈನ್ಸ್ ತೆಗೆದುಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಅನೇಕ ಆಪರ್ಚುನಿಟಿಗಳು ಮುಂದೆ ನಿಮಗೆ ಸಿಗಲಿದೆ.

ಅವುಗಳೇನೆಂದರೆ ಪಿಯುಸಿ ಸೈನ್ಸ್ ಮಾಡುವುದರಿಂದ ನೀವು ಮುಂದೆ ಇಂಜಿನಿಯರಿಂಗ್ ಮೆಡಿಕಲ್ ಹತ್ತು ಹಲವಾರು ಕೋರ್ಸುಗಳನ್ನು ಮಾಡಬಹುದಾಗಿದೆ. ಪಿಯುಸಿ ಸೈನ್ಸ್ ಮುಗಿದ ನಂತರ ಇರುವ ಹಲವಾರು ಕೋರ್ಸುಗಳ ಬಗ್ಗೆ ಅನೇಕ ಮಾಹಿತಿ ನಿಮಗೆ ಎಲ್ಲಾ ಕಡೆ ಸಿಗಲಿದೆ. ಆದರೆ ಈ ನಮ್ಮ ಒಂದು ವಿಶೇಷ ಲೇಖನದಲ್ಲಿ ನಾವು ನಿಮಗೆ ಪಿಯುಸಿ ಸೈನ್ಸ್ ಹೊರತುಪಡಿಸಿ ಏನೆಲ್ಲಾ ಆಯ್ಕೆಗಳಿವೆ ಎಂಬ ಸಮಗ್ರ ಮಾಹಿತಿ ನೀಡುತ್ತಿದ್ದೇವೆ.

10ನೇ ತರಗತಿ ಆಧಾರದ ಮೇಲೆ ಯಾವೆಲ್ಲ ಸರ್ಕಾರಿ ನೌಕರಿಗಳು?


ಇತ್ತೀಚಿಗೆ ನೀವು ನೋಡುತ್ತಿರುವ ಹಾಗೆ 10ನೇ ತರಗತಿ ಶೈಕ್ಷಣಿಕ ವಿದ್ಯಾರ್ಹತೆಯ ಆಧಾರದ ಮೇಲೆ, ಜಿಲ್ಲಾ ನ್ಯಾಯಾಲಯಗಳಲ್ಲಿ ಅತ್ಯಂತ ಹೆಚ್ಚಿನ ನೇಮಕಾತಿ ನಡೆಯುತ್ತಿದೆ. ಜಿಲ್ಲಾ ನ್ಯಾಯಾಲಯದಲ್ಲಿ ಇತ್ತೀಚಿಗೆ ಕರೆಯುತ್ತಿರುವ ಅತಿ ಹೆಚ್ಚು ಹುದ್ದೆಗಳೆಂದರೆ ಆದೇಶ ಜಾರಿಕಾರರು, ಜವಾನರು, ಶೀಘ್ರ ಲಿಪಿಕಾರರು.

ಎಲ್ಲಾ ಸರ್ಕಾರಿ ಹುದ್ದೆಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆಯ ಏನೆಂದರೆ ಅದು 10ನೇ ತರಗತಿ. ಹೌದು 10ನೇ ತರಗತಿ ಮೇಲೆಯೂ ಕೂಡ ನೀವು ಅನೇಕ ಸರ್ಕಾರ ಹುದ್ದೆಗಳನ್ನು ಪಡೆಯಬಹುದು.

ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆಯನ್ನು ಪಡೆಯಬೇಕಾದರೆ 10ನೇ ತರಗತಿ ಅರ್ಹತೆ ಪಡೆದರೆ ಸಾಕಾಗುತ್ತದೆ. ಈ ಒಂದು ಜಿಲ್ಲಾ ನ್ಯಾಯಾಲಯದ ಹುದ್ದೆಗಳ ಉತ್ತಮ ಸಂಬಳವನ್ನು ಕೂಡ ನೀಡುತ್ತಿವೆ.

10ನೇ ತರಗತಿ ಅರ್ಹತೆಯ ಮೇಲೆ ನೀವು ಪೊಲೀಸ್ ಕೂಡ ಆಗಬಹುದು :

ಹೌದು ನೀವು ಸರಿಯಾದ ಮಾಹಿತಿಯನ್ನು ಕೇಳಿದ್ದೀರಿ. 10ನೇ ತರಗತಿ ಆಧಾರದ ಮೇಲೆ ಕೇಂದ್ರ ಸರ್ಕಾರವು ಇತ್ತೀಚಿಗೆ 25000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿತ್ತು.

ಇದೇ ರೀತಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 10ನೇ ತರಗತಿ ಆಧಾರದ ಮೇಲೆ ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಹಾಗೂ ಸಿಎಆರ್ ‌ಡಿಎಆರ್ ಎಂಬ ಹಲವಾರು ಸರ್ಕಾರಿ ಹುದ್ದೆಗಳು ಕೂಡ ನಿಮಗೆ ಕಾಯ್ದೆ ಇರುತ್ತವೆ.

ಆದ್ದರಿಂದ ಎಸ್‍ಎಸ್‍ಎಲ್‍ಸಿ ಮುಗಿದ ನಂತರ ಕೇವಲ ಪಿಯುಸಿ ಸೈನ್ಸ್ ಮಾಡಲು ಮಾತ್ರ ನೀವು ಯೋಚಿಸುತ್ತಿದ್ದರೆ ಅದರಿಂದ ಹೊರಗೆ ಬಂತು ಇಂಥವೆಲ್ಲ ಉಳಿದ ಅನೇಕ ಅವಕಾಶಗಳ ಸದುಪಯೋಗವನ್ನು ನೀವು ಪಡೆದುಕೊಳ್ಳಬಹುದು.

ಇದೇ ರೀತಿ ಸರ್ಕಾರಿ ಹುದ್ದೆಗಳು ಅನೇಕ ಹುದ್ದೆಗಳು ನಿಮಗಾಗಿ ಕಾಯ್ದಿರುತ್ತವೆ. ಕೇಂದ್ರ ಸರ್ಕಾರ ರಕ್ಷಣಾ ಸಚಿವಾಲಯದಲ್ಲಿಯೂ ಕೂಡ ಅನೇಕ ಹುದ್ದೆಗಳನ್ನು ಇತ್ತೀಚೆಗೆ ಕರೆಯಲಾಗಿತ್ತು.

ಅವುಗಳೆಂದರೆ ಅಸ್ಸಾಂ ರೈಫಲ್ಸ್ ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಹತ್ತು ಹಲವಾರು ವಿಭಾಗಗಳಲ್ಲಿ ಅನೇಕ ಸಾವಿರ ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳೀಗೆ ಕೇಂದ್ರ ಸರ್ಕಾರವು ಕೇಂದ್ರ ಸಿಬ್ಬಂದಿ ಆಯೋಗದ ಮೂಲಕ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿತ್ತು.

ಇದೇ ರೀತಿ 10ನೇ ತರಗತಿ ಆಧಾರದ ಮೇಲೆ ಕರ್ನಾಟಕ ರಾಜ್ಯ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರದಲ್ಲಿಯೂ ಅನೇಕ ಹುದ್ದೆಗಳ ನೇಮಕಾತಿ ಪ್ರತಿ ವರ್ಷವೂ ನಡೆಯುತ್ತಿದೆ.

ಆದ್ದರಿಂದ ನೀವು ಒಂದು ವೇಳೆ 10 ನೇ ತರಗತಿ ಮುಗಿದ ಮೇಲೆ ಆರ್ಥಿಕ ಸಮಸ್ಯೆಯಿಂದ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದಿದ್ದರೆ ಇಂತಹ ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ನೀವು ಸರ್ಕಾರಿ ನೌಕರಿಯನ್ನು ಆರಾಮವಾಗಿ ಪಡೆಯಬಹುದಾಗಿದೆ.

ಇತ್ತೀಚಿಗೆ ಕರೆಯುತ್ತಿರುವ ಜಿಲ್ಲಾ ನ್ಯಾಯಾಲಯ ನೇಮಕಾತಿಯು 10ನೇ ತರಗತಿ ಮುಗಿಸಿದಂತ ವಿದ್ಯಾರ್ಥಿಗಳಿಗೆ ಅತ್ಯಂತ ಉಪಕಾರಿಯಾಗಿದೆ. ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವಂತ ರಿಗೂ ಕೂಡ ಇದು ಒಂದು ಉತ್ತಮ ಅವಕಾಶವಾಗಿದ್ದು ನೀವೆಲ್ಲ ವಿದ್ಯಾರ್ಥಿಗಳು ಇಂತಹ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಇದೇ ರೀತಿ 10ನೇ ತರಗತಿ ಮುಗಿದ ನಂತರ ಪಿಯುಸಿ ಸೈನ್ಸ್ ಅನ್ನು ಹೊರತುಪಡಿಸಿ ಸರ್ಕಾರಿ ಹುದ್ದೆಗಳನ್ನು ಹೊರತುಪಡಿಸಿ ಕೂಡ ಅನೇಕ ಕೋರ್ಸ್ಗಳು ನಿಮಗೆ ಲಭ್ಯವಿರುತ್ತವೆ ಅವುಗಳನ್ನು ನಾವು ಮುಂದಿನ ಅಂಕಣದಲ್ಲಿ ನಿಮಗೆ ತಿಳಿಸಿದ್ದೇವೆ.

SSLC ನಂತರದಲ್ಲಿ ಯಾವ ಯಾವ ಕೋರ್ಸ್ ಗಳು ಲಭ್ಯ :

10ನೇ ತರಗತಿ ಮುಗಿದ ನಂತರ ಬಹು ಪಾಲು ವಿದ್ಯಾರ್ಥಿಗಳು ಎರಡು ವಿಭಾಗಗಳನ್ನು ಆಯ್ದುಕೊಳ್ಳುತ್ತಾರೆ ಅವುಗಳೆಂದರೆ ಪಿಯುಸಿ ಸೈನ್ಸ್ ಪಿಯುಸಿ ವಿಜ್ಞಾನ ಪಿಯುಸಿ ಕಾಮರ್ಸ್ ಮತ್ತು ಪಿಯುಸಿ ಆರ್ಟ್ಸ್.

ವಿದ್ಯಾರ್ಥಿಗಳು ಯಾವುದೇ ಒಂದು ಕ್ಷೇತ್ರವನ್ನು ಆಯ್ದುಕೊಳ್ಳುವುದಕ್ಕಿಂತ ಮುಂಚೆ ಅದರಲ್ಲಿರುವ ಮುಂದಿನ ಅವಕಾಶಗಳು ಮತ್ತು ನಿಮಗೆ ಆ ವಿಷಯದ ಮೇಲಿರುವ ಆಸಕ್ತಿಯ ಒಂದು ಆಧಾರವನ್ನು ತೆಗೆದುಕೊಂಡು ನೀವು ನಿಮಗೆ ಇಚ್ಚೆ ಬರುವ ಒಂದು ಉತ್ತಮ ಕೋರ್ಸ್ ಗಳನ್ನು ಆಯ್ದುಕೊಳ್ಳುವುದು ಉತ್ತಮವಾಗಿದೆ.

ಯಾವುದೇ ಒಂದು ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಮುಂಚೆ ನಿಮಗೆ ಯಾವ ವಿಷಯದ ಮೇಲೆ ಆಸಕ್ತಿ ಇದೆಯೋ ಇಲ್ಲವೋ ಎಂದು ಯೋಚಿಸಿ ನಂತರದಲ್ಲಿ ನೀವು ಆ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ. ಎಲ್ಲರಿಗೂ ಗೊತ್ತಿರುವ ಹಾಗೆ ಎಸ್ ಎಸ್ ಎಲ್ ಸಿ ಮುಗಿದ ನಂತರ ಪಿಯುಸಿ ಪಿಯುಸಿ ನಂತರ ಪದವಿ.

ಅದರಲ್ಲಿ ಬಹು ಪಾಲು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮುಗಿದ ನಂತರ ಪಿಯುಸಿ ಸೈನ್ಸ್ ತೆಗೆದುಕೊಂಡು ಮುಂದಿನ ಒಂದು ಹಂತದಲ್ಲಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಎಂಬ ಹಾದಿಯನ್ನು ಹಿಡಿದುಬಿಡುತ್ತಾರೆ. ಇತ್ತೀಚಿಗೆ ನೀವು ನೋಡುತ್ತಿರುವ ಹಾಗೆ ಪ್ರತಿಯೊಬ್ಬರು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ.

ಇದು ಒಂದು ಎಲ್ಲಾ ವಿದ್ಯಾರ್ಥಿಗಳು ಮಾಡುವ ತಪ್ಪು. ಅನೇಕ ಜನರ ಪಾಲಿಗೆ ಇದು ಸರಿಯಾಗಿಯೇ ಇರಬಹುದು ಆದರೆ ನಾವು ಏನು ಹೇಳಲು ಹೊರಟಿದ್ದೇವೆ ಎಂದರೆ ಇಂಜಿನಿಯರಿಂಗ್ ಮೆಡಿಕಲ್ ಅನ್ನು ಹೊರತುಪಡಿಸಿ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ನಿಮಗೆ ಉತ್ತಮ ಅವಕಾಶಗಳಿವೆ ಎಂದು.

ಇಂಜಿನಿಯರಿಂಗ್ ಮೆಡಿಕಲ್ ಗಳನ್ನು ಹೊರತುಪಡಿಸಿ ಇನ್ನು ಹಲವಾರು ಉತ್ತಮ ಅವಕಾಶಗಳಿದ್ದು ಅವುಗಳನ್ನು ನಾವು ಇಲ್ಲಿ ತಿಳಿಸಲಿದ್ದೇವೆ. ಮೊದಲು ಇಂಜಿನಿಯರಿಂಗ್ ನಲ್ಲಿ ಹೇಗೆ ಪ್ರವೇಶಾತಿ ಪಡೆದುಕೊಳ್ಳಬಹುದು ಎಂದು ನೋಡುವುದಾದರೆ ಪಿಯುಸಿಯಲ್ಲಿ ನೀವು ಸೈನ್ಸ್ ಮಾಡಿ ಅದರಲ್ಲಿ ಉತ್ತಮ ಅಂಕ ಗಳಿಸಿ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ನಡೆಸುವ ಸಾಮಾನ್ಯ ಪ್ರವೇಶ ಪತ್ರದಲ್ಲಿ ನೀವು ಗಳಿಸಿದ ಅಂಕಗಳ ಆಧಾರದ ಮೇಲೆ ನಿಮಗೆ ಕರ್ನಾಟಕ ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳ ಲಭ್ಯವಾದ ಆಧಾರದ ಮೇಲೆ ನಿಮಗೆ ಪ್ರವೇಶಾತಿ ದೊರೆಯುತ್ತದೆ.

ಇಂಜಿನಿಯರಿಂಗ್ ನಲ್ಲಿ ಯಾವ ಯಾವ ವಿಭಾಗಗಳು ಇರುತ್ತವೆ ಎಂದು ನೋಡುವುದಾದರೆ ಸಿವಿಲ್ ಇಂಜಿನಿಯರಿಂಗ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮೆಕಾನಿಕಲ್ ಇಂಜಿನಿಯರಿಂಗ್ ಇನ್ಫಾರ್ಮಶನ್ ಸೈನ್ಸ್ ಟೆಕ್ನಾಲಜಿ ಬಯೋಟೆಕ್ನಾಲಜಿ ಆಟೋಮೊಬೈಲ್ ಅಂಡ್ ಇಂಜಿನಿಯರಿಂಗ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹೀಗೆ ಸೇರಿದಂತೆ ಇನ್ನೂ ಹತ್ತು ಹಲವಾರು ವಿಭಾಗಗಳಲ್ಲಿ ಇಂಜಿನಿಯರಿಂಗ್ ಲಭ್ಯವಿದೆ.

ಇದೇ ರೀತಿ ನೀವು ನೋಡೋದಾದರೆ ಇತ್ತೀಚಿನ ದಿನಗಳಲ್ಲಿ ಸಾಫ್ಟ್ ವೇರ್ ಕೋರ್ಸುಗಳಿಗೆ ಅತ್ಯಂತ ಬೇಡಿಕೆ ಹೆಚ್ಚಿಗೆ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರು ಸಾಫ್ಟ್ವೇರ್ ಕೋರ್ಸುಗಳಿಗೆ ಪ್ರವೇಶಾತಿ ಪಡೆಯುತ್ತಿದ್ದಾರೆ.

ಸಾಫ್ಟ್ ವೇರ್ ಕೋರ್ಸ್ ಗಳಿಗೆ ಬೇಡಿಕೆ ಹೆಚ್ಚಾದಂತೆ , ಅನೇಕ ಇಂಜಿನಿಯರಿಂಗ್ ಕಾಲೇಜುಗಳು ಸಾಫ್ಟ್ವೇರ್ ಕೋರ್ಸುಗಳಿಗೆ ಪ್ರವೇಶಾತಿ ಶುಲ್ಕವನ್ನು ಕೂಡ ಏರಿಕೆ ಮಾಡುತ್ತಿದೆ. ಆದ್ದರಿಂದ ನಾವು ನಿಮಗೆ ಹೇಳುವುದು ಏನೆಂದರೆ ಅಂತಹ ದುಬಾರಿ ಕೋರ್ಸ್ ಗಳನ್ನು ನಿಮ್ಮ ಕೈಯಿಂದ ಮಾಡಲು ಸಾಧ್ಯವಾಗದಿದ್ದರೆ ಇವುಗಳನ್ನು ಹೊರತುಪಡಿಸಿ ಇನ್ನೂ ಹಲವಾರು ಕೋರ್ಸ್ ಗಳಲ್ಲಿ ನೀವು ಪ್ರವೇಶಾತಿ ಪಡೆಯಬಹುದು.

ಈ ಪ್ರವೇಶಾತಿ ಶುಲ್ಕವನ್ನು ಅನೇಕ ಬಡ ಮಕ್ಕಳ ತುಂಬಲಾಗುವುದಲ್ಲ, ಅಂತಹ ಮಕ್ಕಳಿಗೆ ಅನೇಕ ವಿದ್ಯಾರ್ಥಿ ವೇತನಗಳ ಲಭ್ಯವಿದ್ದು ಅದರ ಮೂಲಕ ನೀವು ಪ್ರವೇಶಾತಿ ಪಡೆಯಬಹುದಾಗಿದೆ ಆದರೂ ಕೂಡ ಇವುಗಳನ್ನು ಹೊರತುಪಡಿಸಿ ಅನೇಕ ಕೋರ್ಸುಗಳ ಲಭ್ಯವಿದ್ದು ಅವುಗಳಲ್ಲಿ ಕೆಲವೊಂದಿಷ್ಟನ್ನು ನಾವು ನಮ್ಮ ಈ ಕೆಳಗಿನ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ಅವುಗಳಲ್ಲಿ ಮುಖ್ಯವಾದ ಕೋರ್ಸುಗಳೆಂದರೆ ಕೆಳಗಿನಂತಿವೆ.

ಯಾವ ಯಾವ ಕೋರ್ಸ್ ಗಳಿವೆ?

10ನೇ ತರಗತಿ ಮುಗಿದ ನಂತರ ಒಂದು ಉತ್ತಮ ಆಯ್ಕೆಗಳೆಂದರೆ ITI, Diploma. ಐಟಿಐ ಡಿಪ್ಲೋಮಾ ಕೋರ್ಸ್ ಗಳನ್ನು ಹೊರತುಪಡಿಸಿ ಇನ್ನು ಹಲವಾರು ಕೋರ್ಸ್ ಗಳು ಲಭ್ಯವಿದೆ. ಅವುಗಳನ್ನು ನಾವು ಮುಂದಿನ ಅಂಕಣದಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ. ಸದ್ಯಕ್ಕೆ ನಾವು ಐಟಿಐ ಮತ್ತು ಡಿಪ್ಲೋಮಾ ಕೋರ್ಸುಗಳ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

  • ಐಟಿಐ ಮತ್ತು ಡಿಪ್ಲೋಮಾ ಕೋರ್ಸ್ ಗಳು ವಿದ್ಯಾರ್ಥಿಗಳಿಗೆ ಒಂದು ಪ್ರಾಯೋಗಿಕ ಶಿಕ್ಷಣವನ್ನು ಒತ್ತು ನೀಡುತ್ತವೆ. ಡಿಪ್ಲೋಮಾ ಮತ್ತು ಐಟಿಐ ಕೋರ್ಸ್ ಗಳಲ್ಲಿ ವಿವಿಧ ವಿಭಾಗಗಳಾಗಿದ್ದು ತಾಂತ್ರಿಕ ಕೌಶಲ್ಯಗಳನ್ನು ಬಯಸುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳಾಗಿವೆ. ಐಟಿಐ ಮತ್ತು ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಹತೆ ಏನೆಂದರೆ ನೀವು ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು. ಎಸ್ ಎಸ್ ಎಲ್ ಸಿ ಮತ್ತು ಡಿಪ್ಲೋಮಾ ಕೋರ್ಸ್ ಪ್ರವೇಶಾತಿ ಪಡೆಯಲು ಯಾವುದೇ ರೀತಿಯ ಅರ್ಹತಾ ಪರೀಕ್ಷೆಯನ್ನು ಬರೆಯುವಂತಿಲ್ಲ.

ಸಂಸ್ಥೆಗಳಿಗೆ ಸಂಬಂಧಿಸಿದ ಪ್ರವೇಶಾತಿ ಶುಲ್ಕವನ್ನು ನೀಡಿ ನೇರವಾಗಿ ನೀವು ಪ್ರವೇಶಾತಿ ಪಡೆಯಬಹುದಾಗಿದೆ. ಐಟಿಐ ಮತ್ತು ಡಿಪ್ಲೋಮಾ ಕೋರ್ಸ್ ಗಳ ಒಂದು ಲಾಭವೇನು ಅಂತ ನೋಡುವುದಾದರೆ, ಈ ಕೋರ್ಸುಗಳನ್ನು ನಾವು ಸಣ್ಣ ಅವಧಿಯಲ್ಲಿ ಮುಗಿಸಬಹುದು.

ಐಟಿಐ ಮತ್ತು ಡಿಪ್ಲೋಮಾ ಕೋರ್ಸ್ಗಳು ಕೈಗಾರಿಕಾ ಸಂಸ್ಥೆಗಳಿಗೆ ಸಂಬಂಧಿಸಿದಂತೆ ವಿಶೇಷ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಒದಗಿಸುತ್ತಿದ್ದು ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತವೆ. ಐಟಿಐ ಕೋರ್ಸ್ ಗಳಲ್ಲಿ ಅನೇಕ ವಿಭಾಗಗಳಿದ್ದು ಅವುಗಳ ಈ ಕೆಳಗಿನಂತಿವೆ. ಎಲೆಕ್ಟ್ರಿಷಿಯನ್ ಫಿಟ್ಟರ್ ಪ್ಲಂಬರ್ ಮೆಕಾನಿಕ್ ಮುಂತಾದ ಟ್ರೇಡ್ ಗಳಲ್ಲಿ ತರಬೇತಿಯನ್ನು ಐಟಿಐ ಕೋರ್ಸ್ ಗಳಲ್ಲಿ ಪಡೆಯಬಹುದಾಗಿದೆ.

ಐಟಿಐ ಮತ್ತು ಡಿಪ್ಲೋಮಾ ಈ ಎರಡು ಕೋರ್ಸ್ ಗಳನ್ನು ಹೋಲಿಸಿ ನೋಡುವುದಾದರೆ ಐಟಿಐ ನ ವಿವಿಧ ಕೋರ್ಸ್ಗಳು ಡಿಪ್ಲೋಮಾ ಕೋರ್ಸ್ ಗಳಿಗೆ ಹೋಲಿಸಿದರೆ ಕಡಿಮೆ ಅವಧಿಯಲ್ಲಿ ಮುಗಿಯುತ್ತವೆ. ಐಟಿಐ ಕೋರ್ಸ್ ತರಬೇತಿಯ ಮೇಲೆ ಕೇಂದ್ರೀಕರಿಸುತ್ತವೆ.

ಐಟಿಐ ಮುಗಿಸಿದ ನಂತರ ನೀವು ಅನೇಕ ಕೈಗಾರಿಕೆಗಳಲ್ಲಿ ಉದ್ಯೋಗವನ್ನು ಪಡೆಯಲು ಅರ್ಹರಾಗಿರುತ್ತಾರೆ. ಐಟಿಐ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುತ್ತಿದ್ದು ಡಿಪ್ಲೋಮಾ ಕೋರ್ಸಿಯ ಹೋಲಿಸಿದರೆ ಈ ಕೋರ್ಸ್ ಅನ್ನು ನೀವು ಕಡಿಮೆ ಅವಧಿಯಲ್ಲಿ ಮುಗಿಸಿ ಬೇಗನೆ ಉದ್ಯೋಗ ಪಡೆಯಲು ಅರ್ಹರಾಗಿರುತ್ತೀರಿ.

ಐಟಿಐ ಕೋರ್ಸ್ ನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡ ನಂತರ ನಾವು ಡಿಪ್ಲೋಮಾ ಕೋರ್ಸ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ. ಮೇಲೆ ನಾವು ಹೇಳಿರುವ ಹಾಗೆ ಐ ಟಿ ಐ ಮತ್ತು ಡಿಪ್ಲೋಮಾ ಕೋರ್ಸ್ ಗಳಲ್ಲಿ ಪ್ರವೇಶಾತಿ ಪಡೆಯಲು ನೀವು ಯಾವುದೇ ಅರ್ಹತೆ ಪರೀಕ್ಷೆಯನ್ನು ಬರೆಯುವಂತಿಲ್ಲ.

ಬದಲಾಗಿ ನೀವು 10ನೇ ತರಗತಿಯಲ್ಲಿ ಪಾಸಾಗಿದ್ದರೆ ಸಾಕು ನೇರವಾಗಿ ನೀವು ಡಿಪ್ಲೋಮಾ ಕೋರ್ಸ್ ಗೆ ಪ್ರವೇಶಾತಿ ಪಡೆಯಬಹುದಾಗಿದೆ. ಡಿಪ್ಲೋಮಾ ಕೋರ್ಸ್ ಗಳನ್ನು ಮಾಡುವುದರ ಲಾಭವೇನೆಂದರೆ ನೀವು ಇಂಜಿನಿಯರಿಂಗ್ ಗೆ ಸಂಬಂಧಿಸಿದ ಅನೇಕ ವಿಭಾಗಗಳಲ್ಲಿ ಶಿಕ್ಷಣ ಮಾಡಬಹುದು.

ಡಿಪ್ಲೋಮಾ ಕೋರ್ಸ್ ಗಳಲ್ಲಿ ವಿವಿಧ ವಿಭಾಗಗಳು ಹೊಂದಿದ್ದು ಅವುಗಳಲ್ಲಿ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಡಿಪ್ಲೋಮಾ ಇನ್ಫಾರ್ಮಶನ್ ಸೈನ್ಸ್ ಇಂಜಿನಿಯರಿಂಗ್ ಡಿಪ್ಲೋಮ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸೇರಿದಂತೆ ಇನ್ನೂ ಹತ್ತು ಹಲವಾರು ವಿಭಾಗಗಳಲ್ಲಿ ಡಿಪ್ಲೋಮಾ ಕೋರ್ಸ್ ಲಭ್ಯವಿದೆ.

ಡಿಪ್ಲೋಮಾ ಕೋರ್ಸ್ ಪಡೆಯುವುದರಿಂದ ಒಂದು ಮುಖ್ಯವಾದ ಲಾಭವೆನೆಂದರೆ ಡಿಪ್ಲೋಮಾ ಮುಗಿದ ನಂತರ ನೀವು ಇಂಜಿನಿಯರಿಂಗ್ ಪದವಿಗೆ ನೇರವಾಗಿ ಎರಡನೇ ವರ್ಷಕ್ಕೆ ಪ್ರವೇಶಾತಿ ಪಡೆಯಬಹುದು. ಡಿಪ್ಲೋಮಾ ಪದವಿಯು ಸಾಮಾನ್ಯವಾಗಿ ಮೂರು ವರ್ಷದ ಕೋರ್ಸ್ ಆಗಿದ್ದು ಡಿಪ್ಲೋಮಾ ಮಲಗಿದ ನಂತರ ಕೂಡ ನೀವು ಅನೇಕ ಕಂಪನಿಗಳಲ್ಲಿ ಕೆಲಸವನ್ನು ಪಡೆಯಬಹುದು.

ಅನೇಕ ಕಂಪನಿಗಳು ಡಿಪ್ಲೋಮಾ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತವೆ. ನಾವು ಮೇಲೆ ತಿಳಿಸಿದ ಹಾಗೆ ಡಿಪ್ಲೋಮೋ ಮುಗಿಸಿದ ನಂತರ ನೀವು ಮುಂದೆ ಇಂಜಿನಿಯರಿಂಗ್ ಪದವಿಗೆ ನೇರವಾಗಿ ಎರಡನೆಯ ವರ್ಷದ ಇಂಜಿನಿಯರಿಂಗ್ ಪದವಿ ಪಡೆಯಲು ನೀವು ಅರ್ಹರಾಗಿರುತ್ತೀರಿ.

ಆದರೆ ಡಿಪ್ಲೋಮಾ ಮುಗಿದ ನಂತರ ಇಂಜಿನಿಯರಿಂಗ್ ನಲ್ಲಿ ಪ್ರಯೋಜನ ಪಡೆಯಲು ನೀವು ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಕರ್ನಾಟಕ ಪರೀಕ್ಷೆ ಪ್ರಾಧಿಕಾರವು ಅಥವಾ ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯವರು ನಡೆಸುವ ಪ್ರವೇಶಾತಿ ಪರೀಕ್ಷೆಯಲ್ಲಿ ಅಂಕ ಗಳಿಸಿ, ಅಂಕಗಳ ಆಧಾರದ ಮೇಲೆ ನಿಮಗೆ ಕಾಲೇಜನ್ನು ನೀಡಲಾಗುತ್ತದೆ.

ಡಿಪ್ಲೋಮೋ ಮುಗಿಸಿದ ನಂತರ ನೀವು ಇಂಜಿನಿಯರಿಂಗ್ ಎಂಬ ವೃತ್ತಿಪರ ಕೋರ್ಸ್ ಗೆ ಅರ್ಹರಾಗಿರುತ್ತೀರಿ . ಅಂತಿಮವಾಗಿ ಹೇಳುವುದಾದರೆ ಐಟಿಐ ಮತ್ತು ಡಿಪ್ಲೋಮಾ ಕೋರ್ಸುಗಳು 10ನೇ ತರಗತಿ ಮುಗಿದ ನಂತರ ಒಂದು ಉತ್ತಮ ಆಯ್ಕೆಗಳಾಗಿರುತ್ತವೆ.

ITI ಮತ್ತು Diploma ಹೊರತುಪಡಿಸಿ ಮತ್ತೆ ಏನೆಲ್ಲಾ ಉತ್ತಮ ಆಯ್ಕೆಗಳಿವೆ?


ಐಟಿಐ ಮತ್ತು ಡಿಪ್ಲೋಮಾ ಕೋರ್ಸ್ ಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ 10ನೇ ತರಗತಿ ಮುಗಿಸಿದ ನಂತರ ಇನ್ನೂ ಹತ್ತು ಹಲವಾರು ಆಯ್ಕೆಗಳಿದ್ದು ಅವುಗಳಲ್ಲಿ ಫ್ಯಾಶನ್ ಡಿಸೈನಿಂಗ್ ಫೋಟೋಗ್ರಾಫಿ ಡಿಜಿಟಲ್ ಮಾರ್ಕೆಟಿಂಗ್ ಫ್ರೀ ಲೈನ್ಸಿಂಗ್ ಸೇರಿದಂತೆ ಇನ್ನೂ ಹತ್ತು ಹಲವಾರು ಆಪ್ಷನ್ಗಳಿವೆ.

ಯಾವುದೇ ಒಂದು ವೃತ್ತಿಯನ್ನು ನೀವು ಆರಿಸಿಕೊಳ್ಳುವುದಕ್ಕಿಂತ ಮುಂಚೆ ಅದರಲ್ಲಿರುವ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿರುತ್ತದೆ. ಅದಕ್ಕಿಂತ ಮುಂಚಿತವಾಗಿ ನೀವು ಆ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದೀರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಬಹು ಅವಶ್ಯಕ.

ಏಕೆಂದರೆ ಯಾವುದೇ ಒಂದು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಅದು ಕಷ್ಟ ಬರುತ್ತದೆಯೋ ಆರಾಮಾಗಿ ಇರುತ್ತದೆಯೋ ಎಂಬುದು ಎರಡನೆಯ ವಿಷಯ. ಯಾವುದೇ ಒಂದು ವಿಷಯ ಎಷ್ಟೇ ಕಠಿಣವಾಗಿದ್ದರು ನಾವು ಅದರಲ್ಲಿ ಆಸಕ್ತಿ ಹೊಂದಿದ್ದರೆ ಅದನ್ನು ಆರಾಮದಾಯಕವಾಗಿ ಮಾಡಿಕೊಳ್ಳಬಹುದು.

ಆದ್ದರಿಂದ ನೀವು ಯಾವುದೇ ಒಂದು ಕ್ಷೇತ್ರವನ್ನು ಆರಿಸಿಕೊಳ್ಳುವುದಕ್ಕಿಂತ ಮುಂಚೆ ಅದು ಕಠಿಣವಾಗಿದೆಯೂ ಇಲ್ಲ ಆರಾಮವಾಗಿವೆ ಎಂದು ಯೋಚಿಸುವುದಕ್ಕಿಂತ ಮುಂಚೆ ಆ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದೆಯೋ ಇಲ್ಲವೋ ಎಂಬುದನ್ನು ಮೊದಲು ಗುರುತು ಮಾಡಿಕೊಳ್ಳಿ.

ಎಸ್ ಎಸ್ ಎಲ್ ಸಿ ಮುಗಿದ ನಂತರ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡವರಿಗೆ ಹಲವಾರು ಆಯ್ಕೆಗಳಿರುತ್ತವೆ, ಅದರಲ್ಲಿ ಮೆಡಿಕಲ್ ಅಂಡ್ ಇಂಜಿನಿಯರಿಂಗ್.

ಒಂದು ವೇಳೆ ನೀವು ಮೆಡಿಕಲ್ ಮಾಡಲು ಬಯಸುವುದಾದರೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಯಾಗಿರುವ ನೀಟ್ ಎಕ್ಸಾಮ್ನ ಒಳಗೆ ಉತ್ತಮ ಅಂಕ ಗಳಿಸಿದರೆ ನಿಮಗೆ ಉತ್ತಮ ಕಾಲೇಜು ಸಿಗುತ್ತದೆ. ಆದ್ದರಿಂದ ನೀವು ನೀಟ್ ಎಕ್ಸಾಮಿನಲ್ಲಿ ಉತ್ತಮ ಅಂಕ ಗಳಿಸಲು ಪದವಿ ಪೂರ್ವ ಶಿಕ್ಷಣದಿಂದಲೇ ನೀವು ತಯಾರಿಯನ್ನು ಆರಂಭಿಸುವುದು ಉತ್ತಮವಾಗಿರುತ್ತದೆ.

ಹಲವಾರು ಜನರು ಏನು ಮಾಡುತ್ತಾರೆಂದರೆ ಪಿಯುಸಿ ಮುಗಿಸಿದ ನಂತರ ಒಂದು ವರ್ಷದ ದೀರ್ಘ ತರಬೇತಿಯನ್ನು ಪಡೆದುಕೊಂಡು ನೀಟ್ ಎಕ್ಷಾಮಿಗಾಗಿ ತರಬೇತಿ ನಡೆಸುತ್ತಾರೆ. ಈ ರೀತಿ ಮಾಡುವುದರಿಂದ ನಿಮ್ಮ ಸಮಯ ಹಾಳಾಗುತ್ತದೆ.

ಆದ್ದರಿಂದ ನೀವೇನು ಮಾಡಬಹುದು ಎಂದರೆ ನೀವು ಪಿಯುಸಿಯಲ್ಲಿರುವಾಗಲೇ ನಿಮ್ಮ ತರಬೇತಿಯನ್ನು ಆರಂಭಿಸಿದರೆ ಅಥವಾ ನಿಮ್ಮ ತಯಾರಿಯನ್ನು ಆರಂಭಿಸಿದರೆ ಆದಷ್ಟು ಬೇಗನೆ ನೀವು ನೀಟ್ ಎಕ್ಷಮ ಅನ್ನು ಕ್ಲಿಯರ್ ಮಾಡಿ ಮೆಡಿಕಲ್ ಸೀಟ್ ಪಡೆದುಕೊಳ್ಳಬಹುದು. ಅದೇ ರೀತಿ ಮತ್ತೊಂದು ಉತ್ತಮ ಆಯ್ಕೆ ಎಂದರೆ ಇಂಜಿನಿಯರಿಂಗ್.

ಇಂಜಿನಿಯರಿಂಗ್ ಕಾಲೇಜಿನಲ್ಲಿ ಉತ್ತಮ ಕೋರ್ಸ್ ಪಡೆಯಲು ಅಥವಾ ಉತ್ತಮ ಕಾಲೇಜು ಅನ್ನು ಪಡೆಯಲು ನೀವು ಕರ್ನಾಟಕ ರಾಜ್ಯ ಸರ್ಕಾರವು ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ನಡೆಸುವ ಸಾಮಾನ್ಯ ಅರ್ಹತೆ ಪರೀಕ್ಷೆ ಯಾಗಿರುವ ಸಿಇಟಿ ಎಕ್ಸಾಮ್ನಲ್ಲಿ ಉತ್ತಮ ಅಂಕಗಳಿಸಿದಾಗ ನಿಮಗೆ ನಿಮ್ಮ ಅಂಕಗಳ ಆಧಾರದ ಮೇಲೆ ಕಾಲೇಜು ಮತ್ತು ಕೋರ್ಸ್ ಅನ್ನು ನಿಮಗೆ ಹಂಚಲಾಗುತ್ತದೆ.

ಆದ್ದರಿಂದ ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ನೀವು ಪಿಯುಸಿಯಲ್ಲಿರುವಾಗಲೇ ನಿಮ್ಮ ತಯಾರಿಯನ್ನು ನಡೆಸಿದರೆ ಬಹಳ ಉತ್ತಮ. ಒಂದು ವೇಳೆ ಪಿಯುಸಿಯಲ್ಲಿ ನೀವು ಉತ್ತಮ ಅಂಕ ಗಳಿಸಿದರೆ ಅದು ಕೂಡ ಸಿಇಟಿ ರ್ಯಾಂಕಿಂಗ್ ಆಗಿ ಬಹಳ ಹೆಲ್ಪ್ ಆಗುತ್ತದೆ.

ಏಕೆಂದರೆ ಸಿಇಟಿ ಎಕ್ಸಾಮ್ನಲ್ಲಿ ಅಥವಾ ರಿಸಲ್ಟ್ ಅನ್ನು ಪಿಯುಸಿಯ ನಿಮ್ಮ ಅಂಕಗಳನ್ನು 50% ಮತ್ತು ಸಿಇಟಿ ಎಕ್ಸಾಮ್ನಲ್ಲಿ ಬರೆದ ಅಂಕಗಳನ್ನು 50% ಗಣನೆಗೆ ತೆಗೆದುಕೊಂಡು ರ‍್ಯಾಂಕ್ ತಯಾರಿ ಮಾಡಲಾಗುತ್ತದೆ. ಆದ್ದರಿಂದ ನೀವು ಪಿಯುಸಿಯಲ್ಲಿ ಕೂಡ ಉತ್ತಮ ಅಂಕ ಗಳಿಸುವುದು ಉತ್ತಮ ಕಾಲೇಜು ಪಡೆಯಲು ಬಹಳ ಉತ್ತಮವಾಗಿರುತ್ತದೆ.

ಪಿಯುಸಿ ಮುಗಿಸಿದ ನಂತರ ಮುಂದೇನು ಮಾಡಬಹುದು?

  • ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಮುಗಿಸಿದ ನಂತರ ಪಿಯುಸಿ ಮಾಡಿ ನಂತರ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸುತ್ತಾನೆ. ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿದ ನಂತರ ನಿಮಗೆ ಮುಂದೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ.
  • ನಾವು ನಿಮಗೆ ಇಂತಹ ವಿಷಯದಲ್ಲಿ ಒಂದು ಉತ್ತಮ ಸಲಹೆಯನ್ನು ಕೊಡುವುದು ಬಯಸುವುದಾದರೆ, ನೀವು ಪದವಿಯಲ್ಲಿರುವಾಗಲೇ ಯುಪಿಎಸ್‌ಸಿ ಅಥವಾ ಕೆಪಿಎಸ್‌ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾದರೆ ನಿಮಗೆ ಸರ್ಕಾರಿ ಅನೇಕ ಉನ್ನತ ಹುದ್ದೆಗಳನ್ನು ನೀವು ಪಡೆಯಬಹುದು.
  • ಯುಪಿಎಸ್ಸಿ ಎಕ್ಸಾಮ್ನಲ್ಲಿ ಉತ್ತಮ ಅಂಕಗಳನ್ನು ಪಡೆದರೆ ನೀವು ಜಿಲ್ಲಾಧಿಕಾರಿಯಾಗಬಹುದು ಅದೇ ರೀತಿ ಕೆಪಿಎಸ್ಸಿ ಎಕ್ಸಾಮ್ನಲ್ಲಿ ಉತ್ತಮ ಅಂಕ ಗಳಿಸಿದರೆ ನೀವು ತಹಶೀಲ್ದಾರ್ ಆಗಬಹುದು. ಇದೇ ರೀತಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಅನೇಕ ಇದ್ದು ನೀವು ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡಬೇಕೆಂದರೆ ಆದಷ್ಟು ಬೇಗ ತಯಾರಿಯನ್ನು ನಡೆಸುವುದು ಬಹಳ ಸಹಾಯಕವಾಗುತ್ತದೆ.
  • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್ ಆಗುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದರಿಂದ ಕರ್ನಾಟಕ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಅನೇಕ ಸರ್ಕಾರಿ ಹುದ್ದೆಗಳನ್ನು ನೀವು ಪಡೆಯಲು ತಯಾರಿ ನಡೆಸಿದರೆ ಬಹಳ ಉತ್ತಮ ಹುದ್ದೆಗಳನ್ನು ನೀವು ಅಥವಾ ಉತ್ತಮ ಉದ್ಯೋಗವನ್ನು ನೀವು ಮಾಡಬಹುದು. ಅದೇ ರೀತಿ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಎಕ್ಸಾಮ್ ಗಳನ್ನು ಹೊರತುಪಡಿಸಿ ಆರ್ಮಿ ಪೊಲೀಸ್ ಸೇರಿದಂತೆ ಮುಂತಾದ ಹಲವಾರು ಹುದ್ದೆಗಳು ಉತ್ತಮವಾಗಿವೆ.

ಆದ್ದರಿಂದ ಕೊನೆಯದಾಗಿ ನಾವು ಹೇಳುವುದೇನೆಂದರೆ ಎಸ್ ಎಸ್ ಎಲ್ ಸಿ ಮುಗಿದ ನಂತರ ಕೇವಲ ಪಿಯುಸಿ ಸೈನ್ಸ್ ಮೆಡಿಕಲ್ ಇಂಜಿನಿಯರಿಂಗ್ ಎಂದು ಯೋಚಿಸದೆ ಇವುಗಳನ್ನು ಹೊರತುಪಡಿಸಿ ಕೂಡ ಹಲವಾರು ಆಯ್ಕೆಗಳಿದ್ದು ನಿಮ್ಮ ಇಚ್ಛೆಯ ಪ್ರಕಾರ ಅಥವಾ ನಿಮ್ಮ ಆಸಕ್ತಿಯ ಪ್ರಕಾರ ನೀವು ನಿಮ್ಮ ವೃತ್ತಿಯನ್ನು ಆಯ್ದುಕೊಂಡರೆ ಬಹಳ ಉತ್ತಮವಾಗಿರುತ್ತದೆ.

ಇದೇ ರೀತಿ ಇನ್ನೂ ಹಲವಾರು ಮಾಹಿತಿಗಳನ್ನು ನಾವು ನಮ್ಮ ಈ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಪ್ರತಿ ದಿನ ನೀಡುತ್ತಿರುತ್ತೇವೆ.

ನಮ್ಮ ಈ ಮಾಹಿತಿಗಳು ವಿದ್ಯಾರ್ಥಿಗಳಿಗೆ ಸೀಮಿತವಾಗದೆ ರೈತರಿಗೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಮಾಹಿತಿಯನ್ನು ನಾವು ಪ್ರತಿನಿತ್ಯ ನೀಡುತ್ತಿರುತ್ತೇವೆ. ಕೊನೆಯವರೆಗೂ ಈ ಲೇಖನವನ್ನು ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ನಮ್ಮ ಇವತ್ತಿನ ಈ ಲೇಖನದ ಎಸ್ ಎಸ್ ಎಲ್ ಸಿ ಮುಗಿದ ನಂತರ ಮುಂದೆ ಏನು ಮಾಡಬಹುದು ಎಂಬ ವಿಷಯದ ಬಗ್ಗೆ ನಾವು ನೀಡಿದ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಈ ಮಾಹಿತಿಯನ್ನು ಹಂಚಿಕೊಂಡು ಜ್ಞಾನ ಹಂಚಿ. ಎಲ್ಲರಿಗೂ ಧನ್ಯವಾದಗಳು.

10ನೇ ತರಗತಿಗೆ ಮುಗಿದ ನಂತರ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್ ತೆಗೆದುಕೊಳ್ಳಬೇಕು ಯಾವ ಕೋರ್ಸ್ ನಲ್ಲಿ ತೆರ್ಗಡೆ ಹೊಂದಿದರೆ ಅತಿ ಸುಲಭವಾಗಿ ನಮಗೆ ಕೆಲಸ ಸಿಗುವುದು ಅಂದರೆ ಜಾಬ್ ಸಿಗುವುದು ಎಂದು ವಿದ್ಯಾರ್ಥಿಗಳ ತಲೆಯಲ್ಲಿ ಕೊರೆಯುತ್ತಲೇ ಇರುತ್ತದೆ..

ಚಿಂತೆ ಬೇಡ ಅಂತಹ ವಿದ್ಯಾರ್ಥಿಗಳಿಗಾಗಿ ಈ ಲೇಖನದಲ್ಲಿ 10ನೇ ತರಗತಿ ಮುಗಿದ ನಂತರ ಯಾವ ಯಾವ ಕೋರ್ಸ್ ಗಳು ಲಭ್ಯವಿವೆ ಹಾಗೆ ಯಾವ ಕೋರ್ಸ್ ತೆಗೆದುಕೊಂಡು ಇದ್ದರೆ ನೀವು ಯಾವ ಕೆಲಸ ಮಾಡಲು ಅರ್ಹತೆಯನ್ನು ಪಡೆಯುತ್ತೀರಿ ಹಾಗೆ ಪ್ರಸ್ತುತ ದಿನದಲ್ಲಿ ಯಾವ ಕೋರ್ಸನ ಅತಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ ಈ ಎಲ್ಲ ಮಾಹಿತಿಗಳ ಬಗ್ಗೆ ಈ ಲೇಖನದಲ್ಲಿ ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ..

ಒಂದು ಬಾರಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಈ ಲೇಖನವನ್ನು ಸಂಪೂರ್ಣವಾಗಿ ಓದಿ ತದನಂತರ ನಿಮಗೆ ಒಂದು ಅಚ್ಚುಕಟ್ಟಾದ ಮಾಹಿತಿ ದೊರೆಯುತ್ತದೆ ಇದು ಓದಿದ ಬಳಿಕ ನಿಮಗೆ ಯಾವ ಕೋರ್ಸ್ ತೆಗೆದುಕೊಂಡರೆ ಏನು ಅಂದರೆ ಯಾವ ಕೆಲಸ ಸಿಗಬಹುದು ಎಂಬ ಮಾಹಿತಿ ದೊರೆಯುತ್ತದೆ ಇದಾದ ನಂತರ ನಿಮಗೆ ಯಾವ ಕೋಸ್ಟ್ ತೆಗೆದುಕೊಂಡರೆ ಸೂಕ್ತವೆನಿಸುತ್ತದೆಯೋ ಆ ಕೋರ್ಸ್ ತೆಗೆದುಕೊಳ್ಳುವಲ್ಲಿ ನೀವು ಸಫಲರಾಗುವಿರಿ..

ಹಲವು ಬಾರಿ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂಬುದು ತಿಳಿಯುವುದೇ ಇಲ್ಲ ಆಗ ಪಾಲಕರು ಕೂಡ ತಮಗೆ ಪೂರ್ಣ ಜ್ಞಾನ ಇಲ್ಲದೆ ಇರೋದಕ್ಕಾಗಿ ಗಡಿಬಿಡಿಯಲ್ಲಿ ಯಾವುದೋ ಒಂದು ಕೋರ್ಸ್ ಅನ್ನು ತೆಗೆದುಕೊಳ್ಳುತ್ತಾರೆ ಆದರೆ ಮುಂದೆ ಹೋದ ಹೋದಂತೆ ವಿದ್ಯಾರ್ಥಿಗೆ ಈ ತೆಗೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಯೋಚನೆ ಮಾಡುತ್ತದೆ ಇಂತಹ ತಪ್ಪುಗಳನ್ನು ಮಾಡಬೇಡಿ ದಯವಿಟ್ಟು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸಹಾಯವಾಗಲಿರುವ ಯಾವ ಕೋರ್ಸ್ ಉಪಯುಕ್ತವಾಗಲಿದೆ ಎಂಬುದನ್ನು ತಿಳಿದುಕೊಂಡು ಆ ಕೋರ್ಸ್ ಅನ್ನು ತೆಗೆದುಕೊಳ್ಳಿ..

ಈ ಒಂದು ನಿರ್ಧಾರದಿಂದ ವಿದ್ಯಾರ್ಥಿಯ ಭವಿಷ್ಯ ನಿರ್ಮಾಣವಾಗುತ್ತದೆ ಅದಕ್ಕಾಗಿ ಈ ಒಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವದಿರಿ ಎಡವಲು ಬಿಡದಿರಿ..

ಪ್ರಸ್ತುತ ಈ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಹೀಗೆ ಅನೇಕ ತರದ ಮಾಹಿತಿಯನ್ನು ದಿನೇ ದಿನೇ ನೀಡುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಅಲ್ಲಿ ದಿನೇ ದಿನೇ ನಿಮಗೆ ಹೀಗೆ ಉದ್ಯೋಗದ ಮಾಹಿತಿ ಹಾಗೆ ಕೃಷಿ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ನಮ್ಮ ಗ್ರೂಪನ್ನು ಒಂದು ಬಾರಿ ಜಾಯಿನ್ ಆದರೆ ನಿಮಗೆ ಬೇಕಾಗಿರುವಂತಹ ಮಾಹಿತಿಗಳು ದಿನದ ದೊರೆಯುತ್ತದೆ.

ಅದಕ್ಕಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ ನಿಮಗೆ ಬೇಕಾಗಿರುವಂತಹ ಮಾಹಿತಿಯನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *