17 May 2024

ಉಚಿತ ಹೊಲಿಗೆ ಯಂತ್ರ ವಿತರಣೆ ಆರಂಭ..! ಮಹಿಳೆಯರು ಈಗಲೇ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಿ..!

ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ :

ಈ ವರ್ಗದ ಮಹಿಳೆಯರಿಗೆ ಮಾತ್ರ ಉಚಿತ ಹೊಲಿಗೆ ಯಂತ್ರದ ತರಬೇತಿಗೆ ಅರ್ಜಿ ಕರೆಯಲಾಗಿದೆ | ನೀವು ಅರ್ಜಿ ಸಲ್ಲಿಸಬಹುದಾ?

ಸ್ನೇಹಿತರೆ ಮಹಿಳೆಯರ ಸ್ವಂತ ಉದ್ಯಮವನ್ನು ಆರಂಭಿಸಲು ಬಯಸುವುದಾದರೆ ಕೆನರಾ ಬ್ಯಾಂಕ್ 30 ದಿನಗಳ ಉಚಿತ ಹೊಲಿಗೆ ತರಬೇತಿಯನ್ನು ನೀಡಲು ಕೆಲವು ವರ್ಗದ ಮಹಿಳೆಯರಿಗೆ ಮಾತ್ರ ಅರ್ಜಿ ಕರೆಯಲಾಗಿದೆ.

ಯಾರು ಅರ್ಜಿ ಸಲ್ಲಿಸ ಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ಈಗಲೇ ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜ್ಞಾನ ಸಂಜೀವಿನಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳಿಗೆ ಸೇರಿದಂತೆ ಇತರೆ ಹಲವಾರು ರೀತಿಯ ರೈತ ಮಾಹಿತಿಗಳನ್ನು ಪ್ರತಿನಿತ್ಯ ನೀಡುತ್ತಿದ್ದೇವೆ.

ಇಂದಿನ ಈ ಲೇಖನದಲ್ಲಿ ನಾವು ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯು ಮಹಿಳೆಯರಿಗಾಗಿ ಒಂದು ಅದ್ಭುತ ಅವಕಾಶವನ್ನು ಆರಂಭಿಸಿದೆ. ಈ ಒಂದು ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 30 ದಿನಗಳ ಉಚಿತ ಹೊಲಿಗೆ ತರಬೇತಿಯನ್ನು ನೀಡಿ ಮಹಿಳೆಯರು ಸ್ವಾವಲಂಬಿಯಾಗಲು ಸಹಾಯವಾಗುವಂತೆ ಈ ಒಂದು ಅವಕಾಶವೂ ಸಹಾಯವಾಗಲಿದೆ.

ಉಚಿತ ಹೊಲಿಗೆ ತರಬೇತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

ಎಷ್ಟು ಅವಧಿಯವರಿಗೆ ಉಚಿತ ಹೊಲಿಗೆ ತರಬೇತಿ ಇರಲಿದೆ ? ಇದರ ಆಧಾರದ ಮೇಲೆ ನಾವು ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು? ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೆಕ್ಕದಲ್ಲಿ ವಿವರವಾಗಿ ನಿಮಗೆ ತಿಳಿಸಿದ್ದೇವೆ. ಪ್ರತಿಯೊಬ್ಬ ಮಹಿಳೆಯರು ಈ ಒಂದು ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಯಾಗಿರಿ ಎಂದು ನಾವು ಆಶಿಸುತ್ತೇವೆ.

ಮಹಿಳೆಯರಿಗೆ ಗುಡ್ ನ್ಯೂಸ್ : ಕೆನರಾ ಬ್ಯಾಂಕ್ ನಿಂದ ಸ್ವಉದ್ಯೋಗ ತರಬೇತಿ

ಕೆನರಾ ಬ್ಯಾಂಕಿನ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಮಹಿಳೆಯರು ಸ್ವಾವಲಂಬಿಯಾಗಲಿ ಎಂಬ ಉದ್ದೇಶವನ್ನು ಇಟ್ಟುಕೊಂಡು ಮತ್ತು ಉಚಿತ ಹೊಲಿಗೆ ತರಬೇತಿಯನ್ನು ಪಡೆದುಕೊಂಡು ಸ್ವಯಂ ಉದ್ಯೋಗ ಆರಂಭಿಸಲಿ ಎಂಬ ಉದ್ದೇಶದಿಂದ ಅರ್ಹ ಮಹಿಳಾ ಫಲಾನುಭವಿಗಳಿಗೆ ಉಚಿತ ಹೊಲಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಒಂದು ಉಚಿತ ಹೊಲಿಗೆ ತರಬೇತಿಯ ಪ್ರಯೋಜನಗಳೇನು :

ಆತ್ಮೀಯ ಸಹೋದರಿಯರೇ, ನೀವು ಈ ಒಂದು ಉಚಿತ ಹೊಲಿಗೆ ತರಬೇತಿಯನ್ನು ಪಡೆಯಲು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ. ಅಂದರೆ ನೀವು ಉಚಿತವಾಗಿ ಈ ಒಂದು ಹೊಲಿಗೆ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. ಏನು ಪಡೆದುಕೊಳ್ಳುವುದರ ಮತ್ತೊಂದು ಪ್ರಯೋಜನವೇನೆಂದರೆ ನೀವು ಉಚಿತ ಹೊಲಿಗೆ ತರಬೇತಿಯನ್ನು ಅನುಭವಿ ತರಬೇತುದಾರರಿಂದ ಪಡೆದುಕೊಳ್ಳಬಹುದು.

ಅದೇ ರೀತಿ ಈ ಒಂದು ಉಚಿತ ಹೊಲಿಗೆ ತರಬೇತಿಯು ಆಧುನಿಕ ಉಪಕರಣಗಳೊಂದಿಗೆ ನಿಮಗೆ ತರಬೇತಿ ನೀಡಲಾಗುವುದರಿಂದ ನೀವು ಹೊಸ ಹೊಸ ಉಪಕರಣಗಳನ್ನು ಬಳಸಲು ಕಲಿಯುತ್ತಿರಿ. ಈ ಒಂದು ಉಚಿತ ಹೊಲಿಗೆ ತರಬೇತಿಯಲ್ಲಿ ನಿಮಗೆ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ ಮತ್ತು ಸ್ವಂತ ಉದ್ಯೋಗ ಆರಂಭಿಸಲು ಸಾಲ ಸೌಲಭ್ಯವನ್ನು ನೀಡಲಾಗುವುದು.

30 ದಿನಗಳ ಉಚಿತ ಹೊಲಿಗೆ ತರಬೇತಿಗೆ ಈ ಸಲ್ಲಿಸಲು ಯಾರು ಅರ್ಹರು?

ಸ್ನೇಹಿತರೆ ಕೆನರಾ ಬ್ಯಾಂಕಿನ ಈ ಒಂದು ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಸಲ್ಲಿಸುವಂತಹ ಮಹಿಳೆಯರು ಕನಿಷ್ಠ 18 ವರ್ಷದವರಿರಬೇಕು ಮತ್ತು ಕರಿಷ್ಠ 45 ವರ್ಷದೊಳಗಿನವರಾಗಿರಬೇಕು. ಅದೇ ರೀತಿ ಈ ಒಂದು ಉಚಿತ ತರಬೇತಿಗೆ ಅರ್ಜಿ ಸಲ್ಲಿಸುವಂತಹ ಮಹಿಳೆಯರು ಕನ್ನಡ ಓದಲು ಬರೆಯಲು ಬಲ್ಲವರಾಗಿರಬೇಕು.

ಉಚಿತವಾಗಿ ಹೊಲಿಗೆ ತರಬೇತಿಯನ್ನು ಪಡೆದ ನಂತರ ಮಹಿಳೆಯರು ಸ್ವಯಂ ಉದ್ಯೋಗವನ್ನು ಆರಂಭಿಸಲು ಆಸಕ್ತಿ ಹೊಂದಿರಬೇಕು. ವಿಶೇಷವೇನೆಂದರೆ ಈ ಒಂದು ಉಚಿತ ಹೊಲಿಗೆ ತರಬೇತಿಯನ್ನು ಪ್ರಮುಖವಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ತರಬೇತಿ ಜೊತೆಯಲ್ಲಿ ಸಿಗುವ ಇತರೆ ಸೌಲತ್ತುಗಳು :

ಸಹೋದರಿಯರೇ ನಿಮಗೆ, ಉಚಿತ ಹೊಲಿಗೆ ತರಬೇತಿಯೊಂದಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕೂಡ ಒದಗಿಸಲಾಗುವುದು. ಆಸಕ್ತ ಹೊಂದಿರುವಂತಹ ಮಹಿಳಾ ಅಭ್ಯರ್ಥಿಗಳು ಈ ಕೂಡಲೇ ತಡ ಮಾಡದೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ.

ಉಚಿತ ತರಬೇತಿಯು ಯಾವಾಗ ಪ್ರಾರಂಭವಾಗುವುದು :

Canara Bank rural self employment training Institute :


ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಈ ಒಂದು ಉಚಿತ ಹೊಲಿಗೆ ತರಬೇತಿಯನ್ನು ಮಾರ್ಚ್ 18 2024 ರಿಂದ ಏಪ್ರಿಲ್ 18ರವರೆಗೆ ನಡೆಯಲಿದೆ.

ಉಚಿತ ತರಬೇತಿಯು ನಡೆಯುವ ಸ್ಥಳ ವಿವರ :

ಈ ಉಚಿತ ಹೊಲಿಗೆ ತರಬೇತಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ. ಸಂಪೂರ್ಣ ವಿಳಾಸವನ್ನು ಕೆಳಗೆ ತಿಳಿದುಕೊಳ್ಳಿ
ವಿಳಾಸ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಇಂಡಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ ಕುಮಟಾ, ಉತ್ತರ ಕನ್ನಡ ಜಿಲ್ಲೆ- 581343

ಅರ್ಜಿ ಸಲ್ಲಿಸುವುದು ಹೇಗೆ?

ಸಹೋದರಿಯರೇ ನೀವು ಈ ಒಂದು ಉಚಿತ ಹೊಲಿಗೆ ತರಬೇತಿಯನ್ನು ಪಡೆದುಕೊಳ್ಳಲು ಬಯಸುವುದಾದರೆ ನೀವು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನೀವು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಕುಮುಟಾ ಕೇಂದ್ರದ ಕೆಳಗೆ ನೀಡಿರುವ ಸಂಖ್ಯೆಗಳಿಗೆ ಕರೆ ಮಾಡಿ ಅಗತ್ಯವಿರುವ ದಾಖಲಾತಿಗಳನ್ನು ಮತ್ತು ಮಾಹಿತಿಯನ್ನು ಸಲ್ಲಿಸಿ ನೀವು ನೋಂದಾಯಿಸಿಕೊಳ್ಳಬಹುದು.
ಮೊಬೈಲ್ ಸಂಖ್ಯೆಗಳು : 9449860007, 9538281989, 991683825, 8880444612

ಮೇಲೆ ನೀಡಿರುವ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡುವುದರ ಮುಖಾಂತರ ನೀವು ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ 30 ದಿನಗಳ ಉಚಿತ ಹೊಲಿಗೆ ತರಬೇತಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

ಸಹೋದರಿಯರೇ ನೀವು ಈ ಒಂದು ಉಚಿತ ಹೊಲಿಗೆ ತರಬೇತಿಯನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಬಯಸುವುದಾದರೆ ನೀವು ಈ ಕೆಳಗಿನ ದಾಖಲಾತಿಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ ಮತ್ತು ಅರ್ಜಿ ಸಲ್ಲಿಸುವಾಗ ಈ ಒಂದು ದಾಖಲಾತಿಗಳೊಂದಿಗೆ ಹೋಗಿರಿ. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಧಾರ್ ಕಾರ್ಡ್, ಅರ್ಜಿದಾರರ ಬ್ಯಾಂಕ್ ಖಾತೆ ಪುಸ್ತಕ, ಅರ್ಜಿದಾರರ ರೇಷನ್ ಕಾರ್ಡ್ ಹಾಗೂ ಭಾವಚಿತ್ರಗಳು.

ಈ ಒಂದು ದಾಖಲೆಗಳನ್ನು ತರಬೇತಿಯು ಆರಂಭವಾಗುವ ದಿನದಂದು ಅಥವಾ ನೀವು ನಂದನೆ ಮಾಡಿಕೊಳ್ಳುವ ಸಮಯದಲ್ಲಿ.

ಯೋಜನೆಗಳು : ಸ್ನೇಹಿತರೆ ನೀವು ಈ ಒಂದು ಉಚಿತ ಹೊಲಿಗೆ ತರಬೇತಿಯನ್ನು ಪಡೆದುಕೊಳ್ಳುವುದರಿಂದ ಇತರೆ ಹಲವಾರು ಯೋಜನೆಗಳ ಅಡಿಯಲ್ಲಿ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕೂಡ ನೀವು ಶೇಕಡ ಐದರಷ್ಟು ಸಬ್ಸಿಡಿಯಲ್ಲಿ ಒಂದು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ನಮ್ಮ ಈ ಜ್ಞಾನ ಸಂಜೀವಿನಿ ಜಾಲತಾಣದಲ್ಲಿ ಇದೇ ರೀತಿ ಸರ್ಕಾರಿ ಯೋಜನೆಗಳಿಗೆ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿನಿತ್ಯ ನೀಡುತ್ತಿರುತ್ತೇವೆ. ಇದೇ ರೀತಿ ಇಂತಹ ಮಾಹಿತಿಗಳನ್ನು ಪ್ರತಿನಿತ್ಯ ಪಡೆದುಕೊಳ್ಳಲು ಬಯಸುವುದಾದರೆ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ಪ್ರತಿನಿತ್ಯ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *